ಇಂಫಾಲ್: ಗಲಭೆ ಪೀಡಿತ ಮಣಿಪುರದ ಪಶ್ಚಿಮ ಇಂಫಾಲ್, ಕಾಂಗ್‌ಪೋಕ್ಪಿ ಮತ್ತು ತೌಬಲ್ ಜಿಲ್ಲೆಗಳಲ್ಲಿ ಲೂಟಿ ಮಾಡಲಾದ ಐದು ಶಸ್ತ್ರಾಸ್ತ್ರಗಳು, ಆರು ವಿವಿಧ ರೀತಿಯ ಮದ್ದುಗುಂಡುಗಳು ಮತ್ತು ಏಳು ಶಕ್ತಿಶಾಲಿ ಬಾಂಬ್‌ಗಳನ್ನು ಸಂಯೋಜಿತ ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಪೊಲೀಸರು ಶುಕ್ರವಾರ ರಾತ್ರಿ ತಿಳಿಸಿದ್ದಾರೆ.
ಈ ನಡುವೆ ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳಲ್ಲಿ ಶಸ್ತ್ರಸಜ್ಜಿತ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಸ್ಥಳದಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಪಡೆಗಳು ಪ್ರತ್ಯುತ್ತರ ನೀಡಿದ್ದು, ನಂತರ ಗುಂಡಿನ ಚಕಮಕಿ ಕಡಿಮೆಯಾಗಿದೆ.
ಇದನ್ನೂ ಓದಿ: ಚಿಕಿತ್ಸೆ ನೀಡಲು ಹೋಗಿದ್ದ ಅರಣ್ಯ ಸಿಬ್ಬಂದಿಯನ್ನೇ ಕೊಂದ ಕಾಡಾನೆ
ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ, ಇಂಫಾಲ್-ಜಿರಿಬಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ (NH-37) ಅಗತ್ಯ ವಸ್ತುಗಳನ್ನು ಹೊಂದಿರುವ 220 ವಾಹನಗಳ ಸಂಚಾರವನ್ನು ಖಾತ್ರಿಪಡಿಸಲಾಗಿದೆ. ಎಲ್ಲಾಸೂಕ್ಷ್ಮ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ವಾಹನಗಳ ಮುಕ್ತ ಮತ್ತು ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಬೆಂಗಾವಲು ಒದಗಿಸಲಾಗಿದೆ.
ಈ ನಡುವೆ ಹಿಂಸಾಚಾರ ಪೀಡಿತ ರಾಜ್ಯದ ಜನರಿಗೆ ಮೂಲಭೂತ ಆಹಾರ ಸಾಮಗ್ರಿಗಳು, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗತ್ಯವಿದ್ದರೆ ಅವುಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ತಂದು ನೀಡುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಮತ್ತು ಮಣಿಪುರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಮೇ 3ರಂದು ಭುಗಿಲೆದ್ದ ಹಿಂಸಾಚಾರದ ನಂತರ ಕನಿಷ್ಠ 163 ಜನರು ಸಾವನ್ನಪ್ಪಿದ್ದು, ಸುಮಾರು 50,000 ಜನರು ಸ್ಥಳಾಂತರಗೊಂಡಿದ್ದಾರೆ.
ವಿಡಿಯೊ ನೋಡಿ: ಧರ್ಮಸ್ಥಳ ಪದ್ಮಲತಾ ಕೊಲೆಯಾದದ್ದು ಹೇಗೆ? ದೇವಾನಂದರಿಗೆ ಬೆದರಿಕೆ ಹಾಕಿದ್ದು ಯಾರು??