ಮಣಿಪುರ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣ : ಪಾತಕಿಗಳನ್ನು ಉಗ್ರ ಶಿಕ್ಷೆಗೆ ಒಳಪಡಿಸಲು ಜಾಗೃತ ನಾಗರಿಕರು ಕರ್ನಾಟಕ ಆಗ್ರಹ

ಬೆಂಗಳೂರು:  ಮಣಿಪುರದ ಮೂವರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿರುವ, ದೈಹಿಕ ಹಲ್ಲೆ‌ಮಾಡುತ್ತ, ಗುಂಪು ಅತ್ಯಾಚಾರ ಎಸಗಿರುವ ಮಣಿಪುರದ ಅತ್ಯಂತ ಹೇಯವಾದ ಪಾತಕಿ ಘಟನೆಯನ್ನು ಜಾಗೃತ ನಾಗರಿಕರು ಕರ್ನಾಟಕ ಉಗ್ರವಾಗಿ ಖಂಡಿಸಿದೆ.

ಹಿರಿಯ ಸಾಹಿತಿಗಳು, ಮತ್ತು ಜನಪರ ಸಂಘಟನೆಗಳ ನಾಯಕರು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವಿಜಯಾ, ವಿಮಲಾ.ಕೆ.ಎಸ್, ಪ್ರೊ.ರಾಜೇಂದ್ರ ಚೆನ್ನಿ, ಬಿ.ಶ್ರೀಪಾದ ಭಟ್. ಡಾ.ಎಚ್.ಜಿ.ಜಯಲಕ್ಷ್ಮಿ, ಡಾ.ಬಿ. ಆರ್.ಮಂಜುನಾಥ್ಟ, ಸುರೇಂದ್ರ ರಾವ್, ಡಾ.ಮೀನಾಕ್ಷಿ ಬಾಳಿ,ಯೋಗಾನಂದ, ಎನ್.ಆರ್.ವಿಶುಕುಮಾರ್,ವಾಸುದೇವ ಉಚ್ಚಿಲ, ಜೆ.ಸಿ.ಶಶಿಧರ,ಡಾ.ಎನ್‌‌. ಗಾಯತ್ರಿ, ಡಾ.ಲೀಲಾ ಸಂಪಿಗೆ, ಸಿ.ಕೆ.ಗುಂಡಣ್ಣ, ಡಾ.ಕೆ ಷರೀಫಾ, ಕೆ.ಎಸ್.ಲಕ್ಷ್ಮಿ, ಡಾ.ಶಿವಣ್ಣ ಪ್ರಭು ಖಾನಾಪುರೆ ಸೇರಿ ಸಾಂಸ್ಕೃತಿಕ ಕ್ಷೇತ್ರದ ಇನ್ನೂ ಹಲವಾರು ಪ್ರಮುಖರು ಈ  ಘಟನೆಯನ್ನು ಖಂಡಿಸಿದ್ದಾರೆ. ಇಂದು ಸಂಜೆ ನಾಲ್ಕು ಘಂಟೆಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಸೌಜನ್ಯ ಪ್ರಕರಣವನ್ನು ನ್ಯಾಯ ಬದ್ಧ ಮೂಲ ತನಿಖೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ

ಇದು ಎಪ್ಪತ್ತೈದು ದಿನಗಳ ಹಿಂದೆ ನಡೆದಿದ್ದು ಈಗ ಬೆಳಕಿಗೆ ಬರುತ್ತಿದೆ. ಅದೇ ಸಮಯದಲ್ಲಿ ಇದರ ಬಗ್ಗೆ ಲಕ್ಷ್ಯ ವೇ ಇಲ್ಲದೆ, “ರೋಮ್ ನಗರ ಉರಿಯುತ್ತಿದ್ದಾಗ ನೀರೋ ಚಕ್ರವರ್ತಿ ಪಿಟೀಲು ನುಡಿಸುತ್ತಿದ್ದ” ಎಂಬಂತೆ ಪ್ರಧಾನಿಗಳು ಮತ್ತು ಕೇಂದ್ರ ಗೃಹ ಸಚಿವರು ಕರ್ನಾಟಕದ ಚುನಾವಣೆಯಲ್ಲಿ ಅಬ್ಬರದ ಪ್ರಚಾರದಲ್ಲಿ ಮುಳುಗಿದ್ದರು. ಈ ಘಟನೆ ಭಾರತದ ಅಂತಸ್ಸಾಕ್ಷಿಯನ್ನು ತೀವ್ರವಾಗಿ ಕಲಕಿದೆ.

ಮಣಿಪುರ ಹೊತ್ತಿ ಉರಿಯುತ್ತಿರುವಾಗಲೂ ಇದುವರೆಗೂ ಸೊಲ್ಲೆತ್ತದೆ ಇರುವ ಪ್ರಧಾನಮಂತ್ರಿಗಳ ಕಾರ್ಯವಿಧಾನವೇ ಆಕ್ಷೇಪಾರ್ಹವಾಗಿದೆ.
ಎರಡು ಸಮುದಾಯಗಳ ಮಧ್ಯೆ ಹಚ್ಚಿದ ಬೆಂಕಿಯನ್ನು ಆರಿಸುವ ಬದಲು ಒಡೆದಾಳುವ ನೀತಿಯನ್ನು ಕೇಂದ್ರದ ಒಕ್ಕೂಟ ಸರಕಾರವೇ ಮಾಡುತ್ತಿರುವ ಅಕ್ಷಮ್ಯ ಅಪರಾಧದ ಮುಂದುವರೆದ ಭಾಗವಿದಾಗಿದೆ.

ಕೇಂದ್ರದ ಒಕ್ಕೂಟ ಸರ್ಕಾರವು ಮಣಿಪುರದ ಪರಿಸ್ಥಿತಿಯನ್ನು ಆಳುವ ಪಕ್ಷದ ಹಿತಾಸಕ್ತಿಗೆ ಉಪಯೋಗಿಸಿ ಕೊಳ್ಳುವುದನ್ನು ನಿಲ್ಲಿಸಬೇಕು, ಬಿಜೆಪಿಯು‌ ಅಲ್ಲಿನ ಮುಖ್ಯಮಂತ್ರಿಯನ್ನು ಕೆಳಗಿಳಿಸಬೇಕು. ಕೇಂದ್ರವು ಅಲ್ಲಿ ಕಾನೂನು ವ್ಯವಸ್ಥೆಯನ್ನು ಪುನರ್ಸ್ಥಾಪಿಸಬೇಕು, ಸಾವು ನೋವಿಗೆ ತುತ್ತಾದವರಿಗೆ,ಆಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಪಾತಕಿಗಳಿಗೆ ಉಗ್ರ ಶಿಕ್ಷೆಯನ್ನು ಖಾತ್ರಿ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *