ಮಣಿಪುರ : ಮತ್ತೆ ಐದು ಜಿಲ್ಲೆಗಳಲ್ಲಿ ಸಂಪೂರ್ಣ ಕರ್ಪ್ಯೂ ಜಾರಿ

ಇಂಫಾಲ್‌: ಮಣಿಪುರ ರಾಜ್ಯದಲ್ಲಿ ಮತ್ತೆ ಅಹಿತಕರ ಘಟನೆ ನಡೆಯುವ ಸಂಭವಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಮಣಿಪುರದ ಎಲ್ಲಾ ಐದು ಕಣಿವೆ ಜಿಲ್ಲೆಗಳಲ್ಲಿ ಮತ್ತೆ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ.

ಮಣಿಪುರದ ಫೌಗಸ್ಟಾವೊ ಇಖೈ ಪ್ರದೇಶದಲ್ಲಿ ಅಳವಡಿಸಲಾದ ಸೇನಾ ಬ್ಯಾರಿಕೇಡ್‌ಗಳನ್ನು ಬಲವಂತವಾಗಿ ಬೇಧಿಸಲು ಯೋಜನೆ ರೂಪಿಸಿದ್ದನ್ನು ಪತ್ತೆ ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ:ಮೂರು ಯುವಕರ ಸಾವು

ಈ ಹಿನ್ನೆಯಲ್ಲಿ ಬಿಷ್ಣುಪು, ಕಕ್ಕಿಂಗ್, ತೌಬಾಲ್, ಪೂರ್ವ ಮತ್ತು ಪಶ್ಚಿಮ ಇಂಫಾಲ್ ಜಿಲ್ಲೆಗಳಲ್ಲಿ ಈಗ ಸಂಪೂರ್ಣ ಕರ್ಪೂ ಜಾರಿ ಮಾಡಲಾಗಿದೆ. ಇಷ್ಟು ದಿನ ಈ ಪ್ರದೇಶಗಳಲ್ಲಿ ಪ್ರತಿದಿನ ಬೆಳಿಗ್ಗೆ 5 ರಿಂದ ಸಂಜೆ 6 ರವರೆಗೆ ಕರ್ಪೂವನ್ನು ತೆಗೆದುಹಾಕಲಾಗಿತ್ತು.

ತುರ್ತು ಪತ್ರಿಕಾಗೋಷ್ಠಿ ಕರೆದ ಸರ್ಕಾರದ ವಕ್ತಾರ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಸಪಂ ರಂಜನ್, ಸೆ-6 ರಂದು ಟೋರ್ಬಂಗ್ ಬಳಿಯ ಫೌಗಸ್ಟಾವೊ ಇಖೈನಲ್ಲಿ ಸೇನಾ ಬ್ಯಾರಿಕೇಡ್‌ಗಳನ್ನು ಬೇಧಿಸುವ ಉದ್ದೇಶಿತ ಯೋಜನೆಯನ್ನು ತಡೆಯಲು ಸರ್ಕಾರವು ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ (COCOMI)ಗೆ ಮನವಿ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಮನ್ವಯ ಸಮಿತಿ ಮಾಧ್ಯಮ ಕಾರ್ಯದರ್ಶಿ ಸೊಮೆಂಡೊ ತೊಕ್ಕೊಮ್, ಆಗಸ್ಟ್ 30ರಂದೇ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ಸೂಚಿಸಲಾಗಿತ್ತು, ಈಗ ಬ್ಯಾರಿಕೇಡ್ ಬೇಧಿಸಲು ಜನರು ಮುತ್ತಿಗೆ ಹಾಕಿ, ಏನಾದರೂ ಅಹಿತಕರ ಘಟನೆ ನಡೆದರೆ ಮಣಿಪುರ ಸರ್ಕಾರವೇ ಸಂಪೂರ್ಣ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.

ಮೇ-3 ರಂದು ನಡೆದ ಹಿಂಸಾಚಾರ ಕಾರಣದಿಂದ ಹಾಕಲಾದ ಬ್ಯಾರಿಕೇಡ್‌ಗಳಿಂದ ತಮ್ಮ ನಿವಾಸಗಳಿಗೆ ಹಿಂತಿರುಗಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಮಣಿಪುರ 

Donate Janashakthi Media

Leave a Reply

Your email address will not be published. Required fields are marked *