ಮಣಿಪುರ | ಮತ್ತೆ ಘರ್ಷಣೆ 17 ಮಂದಿಗೆ ಗಾಯ; ಇಂಫಾಲ್‌ನಲ್ಲಿ ಪುನಃ ಕರ್ಫ್ಯೂ

ಭದ್ರತಾ ಪಡೆಗಳ ಚಲನವಲನವನ್ನು ತಡೆಯಲು ಸಾವಿರಾರು ಸ್ಥಳೀಯರು ಬೀದಿಗಿಳಿದಿದ್ದಾರೆ ಮಣಿಪುರ

ಇಂಫಾಲ್: ಮಣಿಪುರದ ಬಿಷ್ಣುಪುರ ಜಿಲ್ಲೆಯ ಕಾಂಗ್ವೈ ಮತ್ತು ಫೌಗಕ್ಚಾವೊ ಪ್ರದೇಶದಲ್ಲಿ ಗುರುವಾರ ಘರ್ಷಣೆ ಭುಗಿಲೆದ್ದಿದ್ದು, ಸೇನೆ ಮತ್ತು ಆರ್‌ಎಎಫ್ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದೆ. ಘರ್ಷಣೆಯಲ್ಲಿ ಒಟ್ಟು 17 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಈ ಹಿಂದೆ ಘೋಷಿಸಲಾದ ಕರ್ಫ್ಯೂ ಸಡಿಲಿಕೆಗಳನ್ನು ಹಿಂತೆಗೆದುಕೊಂಡಿದ್ದು, ಇಂಫಾಲ್ ಕಣಿವೆಯಾದ್ಯಂತ ರಾತ್ರಿ ಕರ್ಫ್ಯೂ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಹಗಲಿನಲ್ಲಿ ಕೂಡಾ ಕರ್ಫ್ಯೂ ನಿರ್ಬಂಧಗಳನ್ನು ವಿಧಿಸಿದ್ದಾರೆ.

ಘರ್ಷಣೆಗೆ ಗಂಟೆಗಳ ಮೊದಲು, ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಕುಕಿ-ಜೋಮಿ ಬಡಕಟ್ಟು ಜನರ ಯೋಜಿತ ಸಾಮೂಹಿಕ ಸಮಾಧಿ ಮಾಡುವ ಚುರಾಚಂದ್‌ಪುರ ಜಿಲ್ಲೆಯ ಉದ್ದೇಶಿತ ಸಮಾಧಿ ಸ್ಥಳದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಗುರುವಾರ ಬೆಳಿಗ್ಗೆ ರಾಜ್ಯದ ಹೈಕೋರ್ಟ್ ಆದೇಶಿಸಿದೆ.

ಇದನ್ನೂ ಓದಿ: ಮಣಿಪುರ | 2 ತಿಂಗಳು ಕಾನೂನು ಸುವ್ಯವಸ್ಥೆ ಸಂಪೂರ್ಣ ಸ್ಥಗಿತ – ಸುಪ್ರೀಂಕೋರ್ಟ್‌ ಕಳವಳ

ಈ ಆದೇಶದ ನಂತತ ಬುಡಕಟ್ಟು ಸಮುದಾಯದ ಪ್ರಮುಖ ಸಂಘಟನೆಯಾದ ಐಟಿಎಲ್‌ಎಫ್, ಬಿಷ್ಣುಪುರದ ಗಡಿಯಲ್ಲಿರುವ ಚುರಾಚಂದ್‌ಪುರ ಜಿಲ್ಲೆಯ ಹಾವೊಲೈ ಖೋಪಿ ಗ್ರಾಮದ ಸ್ಥಳದಲ್ಲಿ 35 ಜನರ ಸಮಾಧಿಯನ್ನು ಮುಂದೂಡುತ್ತಿರುವುದಾಗಿ ಹೇಳಿದೆ.

ಭದ್ರತಾ ಪಡೆಗಳ ಚಲನವಲನವನ್ನು ತಡೆಯಲು ಸಾವಿರಾರು ಸ್ಥಳೀಯರು ಬೀದಿಗಿಳಿದಿದ್ದರಿಂದ ಬಿಷ್ಣುಪುರ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಉದ್ವಿಗ್ನತೆ ಉಂಟಾಗಿದೆ. ಮಹಿಳೆಯರ ನೇತೃತ್ವದಲ್ಲಿ ಸ್ಥಳೀಯರು ಸೇನೆ ಮತ್ತು ಆರ್‌ಎಎಫ್ ಸಿಬ್ಬಂದಿ ಹಾಕಿದ್ದ ಬ್ಯಾರಿಕೇಡ್ ಅನ್ನು ದಾಟಲು ಪ್ರಯತ್ನಿಸಿದ್ದು, ಸಮಾಧಿ ಸ್ಥಳವಾದ ಟುಯಿಬುಂಗ್‌ಗೆ ಹೋಗಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು.

ರಾಜ್ಯ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆಯನ್ನು ಹಿಂತೆಗೆದುಕೊಂಡಿದ್ದು, ಕರ್ಫ್ಯೂವನ್ನು ಪುನಃ ವಿಧಿಸಲು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದಾರೆ.

ಇದನ್ನೂ ಓದಿ: ವಿಡಿಯೊ ನೋಡಿ: ಮಲ್ಲಿಕಾರ್ಜುನ ಖರ್ಗೆ ಮೈಬಣ್ಣದ ಬಗ್ಗೆಅವಹೇಳನಕಾರಿ ಹೇಳಿಕೆ ನೀಡಿದಮಾಜಿ ಸಚಿವ ಆರಗ ಜ್ಞಾನೇಂದ್ರ Janashakthi Media

Donate Janashakthi Media

Leave a Reply

Your email address will not be published. Required fields are marked *