ಮೈಸೂರು : ಮ್ಯಾನ್ ಹೋಲ್ ಸ್ವಚ್ಛತೆಗೆ ಇಳಿದು ಅಸ್ವಸ್ಥನಾಗಿದ್ದ ಪೌರ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಮ್ಯಾನ್ ಹೋಲ್ ನಲ್ಲಿ ಉಸಿರುಗಟ್ಟಿ ಅಸ್ವಸ್ಥರಾಗಿದ್ದ ಪೌರಕಾರ್ಮಿಕರ ಮಧು(27) ಸಾವನ್ನಪ್ಪಿದ್ದಾನೆ. ಪಿರಿಯಾಪಟ್ಟಣದ ವಾರ್ಡ್ ನಂ.10ರಲ್ಲಿ ಮ್ಯಾನ್ ಹೋಲ್ ಸ್ವಚ್ಚತೆಗೆ ಇಳಿದಿದ್ದ ಪೌರಕಾರ್ಮಿಕ ಮಧು ಅಸ್ವಸ್ಥನಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಪೌರಕಾರ್ಮಿಕ ಮಧು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಜಿಲ್ಲಾಧಿಕಾರಿ ಕಚೇರಿ ಮುಂದೆ ಶವ ತಂದು ಪ್ರತಿಭಟನೆ ನಡೆಸಿದರು.
ಬಲವಂತವಾಗಿ ಪೌರಕಾರ್ಮಿಕರನ್ನ ಮ್ಯಾನ್ ಹೋಲ್ ಗೆ ಇಳಿಸಲಾಗಿದೆ ಎಂದು ಆರೋಪಿಸಿ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪೌರಕಾರ್ಮಿಕನ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ ಪ್ರತಿಭಟನಾಕಾರರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರ ಸಾವನ್ನಪ್ಪಿದ್ದು, ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಪ್ರತಿಭಟನೆಕಾರರು ಒತ್ತಾಯಿಸಿದ್ದಾರೆ.
ಪರಿಹಾರಕ್ಕೆ ಮುನ್ಸಿಪಲ್ ಕಾರ್ಮಿಕರ ಸಂಘ ಆಗ್ರಹ : ಮ್ಯಾನ್ ಹೋಲ್ ಸ್ವಚ್ಛತೆಗೆ ಇಳಿದ ವೇಳೆ ಪೌರ ಕಾರ್ಮಿಕ ಮಧು ಮೃತ ಪಟ್ಟಿದ್ದು ಈ ಘಟನೆಗೆ ಕಾರಣವಾಗಿರುವವರ ಮೇಲೆ ಕಾನೂನು ಕ್ರಮಜರುಗಿಸಬೇಕು ಹಾಗೂ ಮೃತ ಮಧು ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ (ಸಿಐಟಿಯು) ಸಂಘಟನೆ ಆಗ್ರಹಿಸಿದೆ.
ಪೌರಕಾರ್ಮಿಕನನ್ನು ಬಲವಂತವಾಗಿ ಮ್ಯಾನ್ ಹೋಲ್‌ಗೆ ಇಳಿಸಲಾಗಿದೆ ಎಂದು ಸಂಘಟನೆ ಆರೋಪಿಸಿದ್ದು, ದೇಶದ ಸವೂಚ್ಚ ನ್ಯಾಯಲಯದ ತೀರ್ಪಿನಮತೆ ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಾಗು ಕುಟುಂಬದ ಅವಲಂಬಿತರಿಗೆ ಖಾಯಂ ಉದ್ಯೋಗವನ್ನು ನೀಡುವಂತೆ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ರಾಜ್ಯ ಸರ್ಕಾರವನ್ನು ಒತಾಯಿಸಿದೆ.
ಈ ಘಟನೆಗೆ ಕಾರಣವಾಗಿರುವ ಆಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುಬೇಕು. ಪದೆ ಪದೆ ಈ ಯುಜಿಡಿಗಳಲ್ಲಿ ಸಾವುಗಳು ಸಂಭವಿಸುತ್ತಿದ್ದು ಅವುಗಳನ್ನು ತಡೆಯುವಲ್ಲಿ ಸರಕಾರ ವಿಫಲವಾಗಿದೆ. ತಾತ್ಸಾರ ಬಾವನೆಯೆ ಇದಕ್ಕೆ ಕಾರಣ ಎಂದು ಸಂಘವು ಆರೋಪಿಸಿದೆ. ಸರ್ಕಾರ ಯು.ಜಿ.ಡಿ ಸಾವುಗಳನ್ನು ನಿಲ್ಲಿಸಲು ಗಂಭಿರ ಕ್ರಮವಹಿಸಲು ಮುಂದಾಗಬೇಕು ಎಂದು ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಹರೀಶ್ ನಾಯಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಆಗ್ರಹಿಸಿದ್ದಾರೆ.