‘ಮಹಾತ್ಮಾ ಗಾಂಧೀ ಹತ್ಯೆ’ಯನ್ನು ಸಮರ್ಥನೆ ಪ್ರಕರಣ : ಧರ್ಮೇಂದ್ರ ಬಂಧನ

ಮಂಗಳೂರು : ಮಹಾತ್ಮಾ ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ದೇವಾಲಯಗಳ ತೆರವು ವಿಚಾರವಾಗಿ ಮಾತನಾಡಿದ್ದ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಬೆದರಿಕೆಯೊಡ್ಡಿದ್ದರು. ತಮ್ಮ ಮಾತು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದರು.

ಹಿಂದೂಗಳ ಮೇಲೆ ನಡೆದ ದಾಳಿ ಖಂಡಿಸಿ “ಗಾಂಧೀಜಿಯನ್ನೇ ಹತ್ಯೆ ಮಾಡಿದ್ದೇವೆ. ಇನ್ನು ನೀವು ಯಾವ ಲೆಕ್ಕ? ಎಂದು ಮಂಗಳೂರಿನಲ್ಲಿ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೇ ದೇವಸ್ಥಾನ ಕೆಡವಿದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿ ಎಚ್ಚರಿಕೆ ನೀಡಿದ್ದರು.

ಸಿಎಂ ಬೊಮ್ಮಾಯಿಯವರಿಗೆ ಕೊಲೆ ಬೆದರಿಕೆ ಹಾಕಿ ಬಿಜೆಪಿ ಮಂತ್ರ ಮಂಡಲ ಹಿಂದೂ ವಿರೋಧಿ ಎಂದು ಆರೋಪಿಸಿದ್ದರು. ಯಾವ ತುಘಲಕ್ ಸರ್ಕಾರ ನಡೆಸುತ್ತಿದ್ದೀರೇ ನೀವು? ತಾಲಿಬಾನ್ ಸರ್ಕಾರ ಇದೆಯಾ? ಕರ್ನಾಟಕದಲ್ಲಿ? ತಾಲಿಬಾನ್ ಆದ್ರೂ ಪರವಾಗಿಲ್ಲ, ಇದಕ್ಕಿಂತ ಕೀಳು ಮಟ್ಟದ ಸರ್ಕಾರ ನಡೆಸ್ತಾ ಇದೀರ ನೀವು. ನಾಚಿಕೆ ಇಲ್ಲದ ಮುಖ್ಯಮಂತ್ರಿ, ನೈತಿಕತೆ ಇಲ್ಲದ ಮಂತ್ರಿ ಮಂಡಲ. ಭಾರತೀಯ ಜನತಾ ಪಕ್ಷವೇ ಬೆನ್ನು ಮೂಳೆ ಇಲ್ಲದ ಪಕ್ಷ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಅವರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗುವ ಜೊತೆಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾನೂನು ಕ್ರಮಕ್ಕೆ ಜನರು ಆಗ್ರಹಿಸಿದ್ದರು. ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಧರ್ಮೇಂದ್ರ ಈಗ ಪೊಲೀಸ್ ವಶದಲ್ಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *