ಮಂಗಳೂರು: ಮಂಗಳೂರು–ಹುಬ್ಬಳ್ಳಿ ಮಧ್ಯೆ ಇದ್ದ ನೇರ ವಿಮಾನ ಸೇವೆಯನ್ನು ಇದೇ ಮಾರ್ಚ್ 10ರಿಂದ ಸ್ಥಗಿತಗೊಳಿಸಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಇಂಡಿಗೋ ಸಂಸ್ಥೆ ಈ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಿತ್ತು. ಸೋಮವಾರ, ಬುಧವಾರ, ಶುಕ್ರವಾರ ಈ ಮಾರ್ಗದಲ್ಲಿ ನೇರ ವಿಮಾನ ಸೇವೆ ಇತ್ತು. ಸಂಜೆ 6.30ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತಿದ್ದ ವಿಮಾನ ರಾತ್ರಿ 7.35ಕ್ಕೆ ಮಂಗಳೂರು ತಲುಪುತ್ತಿತ್ತು. ಮಂಗಳೂರಿನಿಂದ ರಾತ್ರಿ 8ಕ್ಕೆ ಹೊರಟು ರಾತ್ರಿ 9.05 ಹುಬ್ಬಳ್ಳಿ ತಲುಪುತ್ತಿತ್ತು.
ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ಈ ಸೇವೆಯನ್ನು ಇದೇ 10ರಿಂದ ಕೊನೆಗೊಳಿಸಲಾಗುತ್ತಿದೆ. ಹುಬ್ಬಳ್ಳಿಯಿಂದ ಪುಣೆ ಮಾರ್ಗದಲ್ಲಿ ಈ ವಿಮಾನ ಸಂಚರಿಸಲಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.