ಅಮಿತ್ ಶಾ ರಾಜಿನಾಮೆಗೆ ಆಗ್ರಹಿಸಿ ಮಾಡಿದ ಮಂಡ್ಯ ಬಂದ್‌ ಯಶಸ್ವಿ

ಮಂಡ್ಯ: ಮಂಗಳವಾರದಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರನ್ನು ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಿನಾಮೆಗೆ ಆಗ್ರಹಿಸಿ ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳಾದ ದಲಿತ ರೈತ, ಅಲ್ಪಸಂಖ್ಯಾತ, ಕಾರ್ಮಿಕ, ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಕರೆ ನೀಡಿದ್ದ ಮಂಡ್ಯ ಬಂದ್  ಬಹುತೇಕ ಯಶಸ್ವಿಯಾಗಿದೆ.ರಾಜಿನಾಮೆ

ಮಂಡ್ಯನಗರದ ಪೇಟೆಬೀದಿ, ವಿ.ವಿ.ರಸ್ತೆ, ಆರ್.ಪಿ ರಸ್ತೆ, ನೂರಡಿ ರಸ್ತೆ, ವಿನೋಬ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದ್ದರು. ಅಲ್ಲಲ್ಲಿ ಕೆಲವರು ದಿನಸಿ ಅಂಗಡಿ ಮಾಲೀಕರು ಮಳಿಗೆಗಳನ್ನು ತೆಗೆದು ವ್ಯಾಪಾರ ನಡೆಸುತ್ತಿದ್ದದ್ದು ಕಂಡು ಬಂತು. ಪ್ರಗತಿಪರರು ಬೈಕ್ ರಾಲಿ ನಡೆಸಿದ ರಸ್ತೆಗಳಲ್ಲಿ ವ್ಯಾಪಾರಿಗಳು ಅಂಗಡಿ ಮುಚ್ಚುತ್ತಿದ್ದದ್ದು ಕಂಡು ಬಂತು.

ಶಾಲೆ-ಕಾಲೇಜುಗಳು ಎಂದಿನಂತೆ ನಡೆದವು, ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಕೆಎಸ್‌ಆರ್ಟಿಸಿ ಬಸ್ಸುಗಳು ವಿರಳವಾಗಿ ಓಡಾಟ ನಡೆಸಿದ್ದು, ಸೂಪರ್ ಮಾಕೇರ್ಟ್ ಗಳು, ಮಾಲ್ ಗಳು,ಚಿತ್ರಮಂದಿರಗಳು ಬಹುತೇಕ ಬಂದ್ ಆಗಿದ್ದವು.

ಇದನ್ನೂ ಓದಿ: ಮೈಸೂರು ಬಂದ್: ಆರ್.ಎಸ್.ಎಸ್ ಕಚೇರಿ ‘ಪಂಚವಟಿ’ ಮುಂಭಾಗದ ಪ್ರತಿಭಟನಾ ಮೆರವಣಿಗೆಗೆ ಯತ್ನ

ಬೈಕ್‌ ರಾಲಿ ಪ್ರಗತಿಪರರರು ಮಂಡ್ಯನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರಾಲಿ ನಡೆಸಿ ಅಂಬೇಡ್ಕರ್ ಅವರಿಗೆ ಜೈಕಾರ ಹಾಕುತ್ತಾ, ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ನೀಲಿ, ಕೆಂಪು ಬಾವುಟಗಳನ್ನು ಹಿಡಿದು ಬೈಕ್ ರಾಲಿಯಲ್ಲಿ ಪಾಲ್ಗೊಂಡರು.

ಮೆರವಣಿಗೆಯಲ್ಲಿ ಮುಖಂಡರಾದ ಸಿ.ಕುಮಾರಿ, ಸುರೇಶ್ ಕಂಠಿ, ಎಂ.ಬಿ.ನಾಗಣ್ಣಗೌಡ, ನರಸಿಂಹಮೂರ್ತಿ, ಲಕ್ಷ್ಮಣ್ ಚೀರನಹಳ್ಳಿ, ಅಂದಾನಿ ಸೋಮನಹಳ್ಳಿ, ಗಂಗರಾಜ್ ಹನಕೆರೆ, ಹೆಚ್.ಡಿ.ಜಯರಾಂ, ಎಂ.ವಿ.ಕೃಷ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ನೋಡಿ: ಬಯ್ಯಾರೆಡ್ಡಿಯವರ ಹೃದಯ ಸದಾ ಹೋರಾಟಗಳಿಗೆ ಮಿಡಿಯುತ್ತಿತ್ತು – ಸಿಎಂ ಸಿದ್ದರಾಮಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *