ಮನಸೋ ಇಚ್ಛೆ ವಿದ್ಯಾರ್ಥಿಗಳನ್ನು ಥಳಿಸಿದ ವಾರ್ಡ್‌ನ – ಎಸ್ ಎಫ್ ಐ ಪ್ರತಿಭಟನೆ

ರಾಣೆಬೆನ್ನೂರ: ಹಾಸ್ಟೆಲ್‌ನಲ್ಲಿರುವ ಮಕ್ಕಳಿಗೆ ಮೂಲಸೌಲಭ್ಯಗಳನ್ನು ನೀಡದೆ, ವಿದ್ಯಾರ್ಥಿಗಳನ್ನು ಮನಸೋ ಇಚ್ಛೆ ಥಳಿಸಿದ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ.  ಸೌಕರ್ಯ ನೀಡುವಂತೆ ಆಗ್ರಹಿಸಿದ ಮತ್ತು ಗುಣ ಮಟ್ಟದ ಊಟ ನೀಡಿ ಎಂದು ಕೇಳಿದ ವಿದ್ಯಾರ್ಥಿಗಳ ಜೊತೆ ವಾರ್ಡನ್‌ ಅನಾಗಿರಕವಾಗಿ ನಡೆದುಕೊಂಡಿದ್ದು, ಮನಸೋ ಇಚ್ಛೆ ಥಳಿಸಿರುವ ಕಾರಣ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.

ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ವಸತಿ ನಿಲಯದ ಮೇಲ್ವಿಚಾರಕಿ, ಶಿಕ್ಷಕಿ ಹುದ್ದೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಣೇಬೆನ್ನೂರ ತಾಲೂಕು ಸಮಿತಿ ನೇತೃತ್ವದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳು ಧರಣಿ ನಡೆಸಿ ತಾಲೂಕು ದಂಢಾಧಿಕಾರಿ ಹನುಮಂತ ಶಿರಹಟ್ಟಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.

ಡಾ.ಬಿ.ಆರ್ ಅಂಬೇಡ್ಕರ್ ವಸತಿ ನಿಲಯದ ಶಾಲೆಯಲ್ಲಿ 1 ರಿಂದ 5ನೇ ತರಗತಿ ವರೆಗೆ ಅಭ್ಯಾಸ ಮಾಡುವ 125 ಮಕ್ಕಳು ಇದ್ದಾರೆ. ತಂದೆ ತಾಯಿಯನ್ನು ಬಿಟ್ಟು 1 ತರಗತಿಯಿಂದಲೇ ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ, ಶಿಕ್ಷಣ, ಒಳ್ಳೆಯ ವಾತಾವರಣ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕಾದದು ವಸತಿ ನಿಲಯದ ಮೇಲ್ವಿಚಾರಕರ ಜವಾಬ್ದಾರಿ. ಆದರೆ ವಸತಿ ನಿಲಯದ ಮೇಲ್ವಿಚಾರಕಿ, ಶಿಕ್ಷಕಿ ಸವಿತಾ ವಿದ್ಯಾರ್ಥಿಗಳಿಗೆ ನೀಡಬೇಕಾದ ವಸ್ತುಗಳನ್ನು ಮಾರಿಕೊಳ್ಳುವುದು, ಸರಿಯಾದ ರೀತಿಯಲ್ಲಿ ಊಟ ಉಪಚಾರ ನೋಡಿಕೊಳ್ಳದೆ. ಊಟ ಕೇಳಿದ ವಿದ್ಯಾರ್ಥಿಗಳ ಮೇಲೆ ರೇಗಾಡುವುದು, ಉನ್ನತ ಅಧಿಕಾರಗಳು ಬಂದು ಮೇಲೆ ಯಾವುದೇ ಸಮಸ್ಯೆಗಳನ್ನು ಹೇಳದಂತೆ ಬೆದರಿಕೆ ಹಾಕಿದ್ದಾರೆ. ಅಷ್ಟೆ ಅಲ್ಲದೆ ವಿದ್ಯಾರ್ಥಿಗಳಿಗೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದಾರೆ.

ಎಸ್‌ಎಫ್‌ಐ ಸಂಘಟನೆಗೆ ಈ ಮಾಹಿತಿ ತಿಳಿದ ತಕ್ಷಣ, ಎಸ್ಎಫ್ಐನ ನಿಯೋಗ ಭೇಟಿ ನೀಡಿ ವಿಚಾರಿಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ. ನಂತರ ವಿದ್ಯಾರ್ಥಿಗಳು ಧೀಡಿರ್ ಹೋರಾಟ ಧರಣಿ ನಡೆಸಿ ವಾರ್ಡನ್ ಬೇಡವೇ ಬೇಡ ಎಂದು ಪಟ್ಟುಹಿಡಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ

ಪ್ರತಿಭಟನಾ ಸ್ಥಳಕ್ಕೆ ಮನವಿ ಸ್ವೀಕರಿಸಲು ಬಂದ ಸಮಾಜ ಕಲ್ಯಾಣ ಇಲಾಖೆಯ ದೇವಾ ನಾಯಕ ಅವರ ಮೇಲೆ ನಂಬಿಕೆ ಇಲ್ಲ, ಉನ್ನತ ಅಧಿಕಾರಗಳು ಬರಬೇಕು ಎಂದು ಹೋರಾಟ ಧರಣಿ ಮುಂದುವರೆಸಿದರು. ನಂತರ ತಾಲೂಕು ದಂಢಾಧಿಕಾರಿಗಳು ಪ್ರತಿಭಟನಾ ಸ್ಥಳಕೆ ಬಂದು ವಿದ್ಯಾರ್ಥಿಗಳ ಅಳಲನ್ನು ಕೇಳಿದರು. ವಾರ್ಡನ್ ಮೇಲೆ ರಿಪೋರ್ಟ್‌ ನೀಡಿ ಈ ಕೂಡಲೇ ಕೆಲಸದಿಂದ ತೆಗೆದುಹಾಕಿ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, ವಿದ್ಯಾರ್ಥಿಗಳನ್ನು ಸೌಲಭ್ಯಗಳಿಂದ ವಂಚಿಸಿರುವುದು ಹಾಗೂ ವಿದ್ಯಾರ್ಥಿಗಳನ್ನು ಅಮಾನವೀಯ ರೀತಿಯಲ್ಲಿ ಥಳಿಸಿರುವುದನ್ನು ಎಸ್ಎಫ್ಐ ತೀವ್ರವಾಗಿ ಖಂಡಿಸುತ್ತದೆ. ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ಸರಿಯಾಗಿ ಒದಗಿಸಬೇಕು. ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿ ಅನ್ಯಾಯ ಎಸಗಿದ ವಸತಿ ನಿಲಯದ ಮೇಲ್ವಿಚಾರಕಿಯ ಮೇಲೆ ಸ್ವಯಂ ದೂರ ದಾಖಲಿಸಬೇಕು. ಹಾಗೂ ಈ ಕೂಡಲೇ ಅಮಾನತು ಮಾಡಿ, ತಕ್ಕ ಶಿಕ್ಷೆಗೆ ಒಳಪಡಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ವಿಫಲತೆಯೇ ಇಂತಹ ದುರಂತಗಳಿಗೆ ಕಾರಣ. ಸರಿಯಾದ ನಿಟ್ಟಿನಲ್ಲಿ ಕಾರ್ಯನಿರ್ವಾಹಿಸಬೇಕು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಆರೆಸ್ಸೆಸ್ ಭಯೋತ್ಪಾದಕ ಸಂಘಟನೆ ಎಂದ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲು!

ವಿದ್ಯಾರ್ಥಿನಿ ಸಿಂಧು ಮಾತನಾಡಿ, ಹೊಟ್ಟೆ ತುಂಬಾ ನೀಡುವುದಿಲ್ಲ, ಹಿಂದೆ ಇರುವ ಶಿಕ್ಷಕರು ಉಚಿತವಾಗಿ ಪೆನ್ನು ರಬ್ಬರ್‌ಗಳನ್ನು ನೀಡುತ್ತಿದ್ದರು ಅದರೆ ಈಗ ಮಾರಾಟ ಮಾಡುತ್ತಾರೆ. ಅನ್ನದಲ್ಲಿ ಹುಳು ಬಂದಿರುವ ಆಹಾರ ನೀಡುತ್ತಾರೆ. ಮನೆಗೆ ಪೋನ್ ಮಾಡಲು ನೀಡುವುದಿಲ್ಲ. ಏನಾದರೂ ಸಮಸ್ಯೆಗಳನ್ನು ಹೇಳಿಕೊಂಡರೆ ಬೆದರಿಕೆ ಹಾಕುತ್ತರೆ ಎಂದು ಅಳುತ್ತಾ ತನ್ನ ಅಳಲನ್ನು ತೊಡಿಕೊಂಡರು.

ವಿದ್ಯಾರ್ಥಿ ಮಂಜು ಮುದೆನೂರ ಮಾತನಾಡಿ, ನಾವು ಏನಾದರೂ ಸಮಸ್ಯೆ ಹೇಳಿದ್ದರೆ ಕೈ ಕಾಲುಗಳಿಗೆ ಗಾಯ ಬರುವ ರೀತಿಯಲ್ಲಿ ಹೊಡೆಯುತ್ತಾರೆ. ಬಿದ್ದು ಗಾಯ ಮಾಡಿಕೊಂಡರೆ, ಹುಷರ ಇರದಿದ್ದಾಗ ಆಸ್ಪತ್ರೆ ಕರೆದುಕೊಂಡು ಹೋಗುವುದಿಲ್ಲ. ಕಿಟ್ ವಿತರಣೆ ಮಾಡಲ್ಲ ನಮಗೆ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್ಎಫ್ಐ ತಾಲೂಕು ಮುಖಂಡರಾದ ಹೊನ್ನಪ್ಪ ಕುದರಿಹಾಳ, ಬಸವರಾಜ ಬಿ, ವಿದ್ಯಾರ್ಥಿಗಳಾದ ಹರೀಶ್ ಎಸ್ ಜಿ, ರೇಣುಕಾ ಜಾಗಟಿ, ಸಂತೋಷ ಲಮಾಣಿ, ಪ್ರಗತಿ ದಾಸರೆಡ್ಡಿ, ಹನುಮಂತ ಲಮಾಣಿ, ಲಕ್ಷ್ಮೀ, ಕಿರಣ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪಿಎಸ್ಐ ಗಡ್ಡಪ್ಪ ಗುಂಜಗಟ್ಟಿ, ಎಎಸ್ಐ ವಿಜಯ ಬಳಿಗಾರ, ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಗಿರೀಶ್ ಹೊಸಮನಿ, ಪೋಲಿಸ್ ಸಿಬ್ಬಂದಿಗಳು, ಹಾಸ್ಟೆಲ್ ಮೇಲ್ವಿಚಾರಕರು ಉಪಸ್ಥಿತರಿದ್ದರು.

ವಿಡಿಯೋ ನೋಡಿ:‘ ತಪ್ಪುಗಳನ್ನುಪ್ರಶ್ನಿಸಿದವರನ್ನು ಭಯೋತ್ಪಾದಕ’, ಎಂದು ಹೇಳುವ ಸರ್ಕಾರವನ್ನು ಕಿತ್ತೆಸೆಯಬೇಕು – ಕೆ.ಎನ್. ಉಮೇಶ್

Donate Janashakthi Media

Leave a Reply

Your email address will not be published. Required fields are marked *