ಬ್ರೆಜಿಲ್‌| ತನಗೆ ತಾನೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ

ಬ್ರೆಜಿಲ್‌: ಮೇ 30 ಶುಕ್ರುವಾರದಂದು ದೇಶದ ಸಾವೊ ಪೌಲೋನದ ಸಾವೋ ಬೆಂಟೋ ಮೆಟ್ರೋ ನಿಲ್ದಾಣದಲ್ಲಿ ಮನೆಮಠ ಇಲ್ಲದೇ ಬೀದಿ ಬೀದಿ ಅಲೆದಾಡುತ್ತಿದ್ದ ವ್ಯಕ್ತಿಯೊಬ್ಬ (74) ತನಗೆ ತಾನೇ ಬೆಂಕಿ ಹಚ್ಚಿಕೊಂಡಿರುವ ಭೀಕರ ಘಟನೆ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ಬೆಂಕಿ ಹಚ್ಚಿಕೊಂಡು ವ್ಯಕ್ತಿಯೊಬ್ಬ ಓಡಾಡುತ್ತಿರುವುದನ್ನು ಕಾಣಬಹುದಾಗಿದೆ. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು, ಮೆಟ್ರೋ ಸಿಬ್ಬಂದಿಯವರಲ್ಲಿ ಮತ್ತು ಪ್ರಯಾಣಿಕರಲ್ಲಿ ಆಘಾತ ಉಂಟು ಮಾಡಿದೆ. ಬ್ರೆಜಿಲ್‌

ಇದನ್ನೂ ಓದಿ: ಜುಲೈ 9 ರಂದು ಅಂಗನವಾಡಿ ನೌಕರರ ಮುಷ್ಕರ

ಇನ್ನು ಈ ಕೃತ್ಯಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ವಿಡಿಯೊದಲ್ಲಿ ಬೆಂಕಿ ಹಚ್ಚಿರುವ ವ್ಯಕ್ತಿಯನ್ನು ಕಂಡು ಜನ ಆಘಾತಗೊಂಡಿರುವುದು ಮತ್ತು ಆತನ ರಕ್ಷಣೆಗೆ ಮುಂದಾಗುವುದು ಕಾಣಬಹುದಾಗಿದೆ. ಆದರೆ ಆತ ಬದುಕುಳಿದಿದ್ದಾನೆಯೇ ಅಥವಾ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾನೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ಧಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಹೆಚ್ಚುವರಿ ಮಾಹಿತಿ ಸದ್ಯ ಲಭ್ಯವಿಲ್ಲ. ಆ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿರಬಹುದು ಅಥವಾ ಖಿನ್ನತೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ಸ್ಥಳೀಯರು ಅಂದಾಜಿಸಿದ್ದಾರೆ.

ಇದನ್ನೂ ನೋಡಿ: ಕಾನೂನು ಅರಿವು | ಕೌಟುಂಬಿಕ ಹಿಂಸಾಚಾರದಿಂದ ಮಹಿಳೆ ತನ್ನನ್ನು ರಕ್ಷಿಸಿಕೊಳ್ಳುವುದು ಹೇಗೆ? ದೂರು ದಾಖಲಿಸುವುದು ಹೇಗೆ?

Donate Janashakthi Media

Leave a Reply

Your email address will not be published. Required fields are marked *