ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದೂ ಅಲ್ಲದೆ, ಬಳಿಕ ಆತನೊಂದಿಗೆ ಮಾರಾಟ ಮಾಡಿರುವ ಅಘಾತಕಾರಿ ಘಟನೆಯೊಂದು ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಖೀರಾ ಬೆರುಕ್ ಎಂಬಾತ ತನ್ನ ಪತ್ನಿ ಪೂರ್ಣಿಮಾ ಭೋಯ್ ಹಣಕ್ಕಾಗಿ ಮಾರಾಟ ಮಾಡಿದ್ದಾನೆ.
ಮದುವೆಯ ನಂತರ ಕೆಲಸಕ್ಕೆಂದು ಅಕ್ಟೋಬರ್ 30 ರಂದು ದೆಹಲಿಗೆ ಹೊರಟ ದಂಪತಿಗಳು. ದೆಹಲಿಗೆ ಹೋದ ಎರಡೇ ದಿನದಲ್ಲಿ ಆರೋಪಿ ಬೆರುಕ್ ಹಣಕ್ಕಾಗಿ ತನ್ನ ಪತ್ನಿಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾನೆ. ಭಾರಿ ಮೊತ್ತದ ಹಣಕೊಂಡು ಪತ್ನಿಯನ್ನು ಹಣ ನೀಡಿದಾತನಿಗೆ ಮದುವೆ ಮಾಡಿಸಿದ್ದಾನೆ.
ನವೆಂಬರ್ 5ರಂದು ಪೂರ್ಣಿಮಾ ಭೋಯ್, ತನ್ನ ತಂದೆ ಕುಲಮಣಿ ಭೋಯ್ ಗೆ ಕರೆ ಗಂಡನ ಕೃತ್ಯವನ್ನು ಹೇಳಿಕೊಂಡಿದ್ದಾಳೆ. ಮಗಳ ಕಷ್ಟ ಕೇಳಿದ ತಂದೆ ತಕ್ಷಣ ಬೆರುಕ್ ವಿರುದ್ಧ ನಾರ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಾರ್ಲಾ ಪೊಲೀಸರು ಆರೋಪಿ ಬೆರುಕ್ನನ್ನು ಬಂಧಿಸಿ, ತನಿಖೆ ನಡೆಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.