ಬೆಂಗಳೂರು: ಮ್ಯಾನ್ ಹೋಲ್‌ಗೆ ಇಳಿದಿದ್ದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನಪ್ಪಿದ್ದ ಘಟನೆ ಜುಲೈ 21 ರಂದು ನಗರದ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಆ ವ್ಯಕ್ತಿಯ ಸಾವಿಗೆ ಕಾರಣವಾದವರು ನಾಲ್ಕು ಜನರು ಎಂದು ತಿಳಿದುಬಂದಿದೆ.
ಸಾವಿರ ರೂ. ಹಣ ಕೊಟ್ಟು ಮ್ಯಾನ್ ಹೋಲ್‌ಗೆ ಇಳಿಸಿ ಆ ಸಾವಿಗೆ ಕಾರಣವಾದವರನ್ನು ಪೊಲೀಸರು ಬಂಧಿಸಿದ್ದಾರೆ. ಆಶ್ರಯ ನಗರದ ನಿವಾಸಿಗಳಾದ ನಾಗರಾಜ್, ಆಂಥೋನಿ, ದೇವರಾಜ್ ಮತ್ತು ಆನಂದ್ ಬಂಧಿತರು.
ನಾಲ್ವರ ಬಂಧನ
ಮ್ಯಾನ್ ಹೋಲ್‌ಗೆ ಕಾರ್ಮಿಕರನ್ನ ಇಳಿಸಬಾರದೆಂಬ ಸುಪ್ರೀಂಕೋರ್ಟ್ ಕಾನೂನು ದೇಶದಲ್ಲಿ ದೊಡ್ಡ ಕ್ರಾಂತಿಗೆ ಕಾರಣವಾಗಿತ್ತು. ಆದರೂ ಇಂತ ಕೆಲಸಗಳು ಆಗಾಗ ನಡೆಯುತ್ತಿರುತ್ತವೆ. ಜುಲೈ 21 ರಂದು ಬೆಂಗಳೂರನ ಆರ್ಎಂಸಿ ಯಾರ್ಡ್ನ ಆಶ್ರಯ ನಗರದಲ್ಲಿ ಪುಟ್ಟಸ್ವಾಮಿ ಎಂಬಾತ ಹಣದ ಆಸೆಗೆ ಮ್ಯಾನ್ ಹೋಲ್‌ಗೆ ಇಳಿದು ತನ್ನ ಜೀವವನ್ನೇ ಕಳೆದುಕೊಂಡಿದ್ದ. ಈ ಕೇಸ್ ಸಂಬಂಧ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿಗೆ ಮತ್ತೊಬ್ಬ ಮಹಿಳೆ ಬಲಿ; ಸವು
ಬಂಧಿತ ನಾಲ್ವರು ಆರೋಪಿಗಳು 1500 ನೀಡಿ ಪುಟ್ಟಸ್ವಾಮಿಯನ್ನ ಮ್ಯಾನ್ ಹೋಲ್‌ಗೆ ಇಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ಲೀನ್ ಮಾಡಲು ಹೇಳಿದ್ದರು. ಆದರೆ ಸುಮಾರು ಅರ್ಧ ಗಂಟೆ ಒಳಗಿದ್ದ ಪುಟ್ಟಸ್ವಾಮಿಗೆ ಉಸಿರುಗಟ್ಟಿದಂತಾಗಿ ಹೊರಬಂದಿದ್ದರು. ಬಳಿಕ ಮನೆಯಲ್ಲಿ ಮಲಗಿದ್ದ ಪುಟ್ಟಸ್ವಾಮಿ ಬೆಳಗ್ಗೆ ಆಗುವಷ್ಟರಲ್ಲಿ ಮೃತಪಟ್ಟಿದ್ದಾರೆ. ಇದು ಕಾನೂನು ಉಲ್ಲಂಘನೆ ಕೆಲಸದ ಜೊತೆಗೆ ವ್ಯಕ್ತಿಯೊಬ್ಬನ ಸಾವಿಗೂ ಕಾರಣವಾಗಿತ್ತು. ಹೀಗಾಗಿ ನಾಲ್ವರನ್ನೂ ಬಂಧಿಸಲಾಗಿದೆ.
ಸದ್ಯ ಆರ್ಎಂಸಿ ಯಾರ್ಡ್ ಪೊಲೀಸರು ನಾಲ್ವರನ್ನ ಜೈಲಿಗಟ್ಟಿದ್ದಾರೆ. ಆದರೆ ಹಣದ ಆಸೆಗೆ ಮ್ಯಾನ್ ಹೋಲ್‌ಗೆ ಇಳಿದು ಪುಟ್ಟಸ್ವಾಮಿ ಜೀವವನ್ನೇ ಕಳೆದುಕೊಂಡಿದ್ದಾರೆ.
ಇದನ್ನೂ ನೋಡಿ: ಬಿಹಾರ ಚುನಾವಣೇ | “ವಿಶೇಷ ತೀವ್ರ ಪರಿಷ್ಕರಣೆ”ಎನ್‌ಡಿಎ ಕೂಟದ ಹೊಸ ನಾಟಕ Janashakthi Media
