ಶಾಸಕ ಡಿ.ಎಸ್.ಹುಲಗೇರಿ ಜೇಬಿನಿಂದ 70 ಸಾವಿರ ರೂ ಎಗರಿಸಲು ಹೋಗಿ ಸಿಕ್ಕಿ ಬಿದ್ದ ವ್ಯಕ್ತಿ

ರಾಯಚೂರು: ಜೂನ್‌ 21 ಶನಿವಾರದಂದು ನಗರದ ಕೃಷಿ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ರ ಹುಟ್ಟುಹಬ್ಬದ ಅಂಗವಾಗಿ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಲಿಂಗಸುಗೂರು ಶಾಸಕ ಡಿ.ಎಸ್.ಹುಲಗೇರಿ ಜೇಬಿಗೆ ಕೈ ಹಾಕಿ 70 ಸಾವಿರ ರೂ. ಹಣದ ಕಂತೆ ಹಾಗೂ ಶಾಸಕರ ಬೆಂಗಲಿಗರೊಬ್ಬರ ಬಂಗಾರದ ಚೈನ್ ಎಗರಿಸಲು ಹೋಗಿ ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದ ಘಟನೆ ನಡೆದಿದೆ.

ಕಾರ್ಯಕ್ರಮ ಮುಗಿದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ, ಶಾಸಕರು ಸೇರಿದಂತೆ ವಿಐಪಿಗಳಿಗೆ ಆಯೋಜಿಸಿದ್ದ ಊಟದ ವ್ಯವಸ್ಥೆ ಮಾಡಿದ ಸ್ಥಳಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಶಾಸಕರ ಜೇಬಿಗೆ ಕೈ ಹಾಕಿ ನೋಟಿನ ಕಂತೆ ಎಗರಿಸಿದ್ದಾನೆ. ಹುಲಗೇರಿ

ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ಸಿಂಧೂ ಜಲ ಒಪ್ಪಂದ ಪುನಃಸ್ಥಾಪಿಸುವುದಿಲ್ಲ: ಅಮಿತ್ ಶಾ

ತಕ್ಷಣ ಎಚ್ಚೆತ್ತ ಶಾಸಕ ಆತನ ಕೈ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲಿಯೇ ನಿಯೋಜನೆಗೊಂಡ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಇದನ್ನೂ ನೋಡಿ: ಭೂಸ್ವಾಧೀನ ವಿರೋಧಿಸಿ ‘ಸಂಯುಕ್ತ ಹೋರಾಟ’ದಿಂದ ‘ದೇವನಹಳ್ಳಿ ಚಲೋJanashakthi Media

Donate Janashakthi Media

Leave a Reply

Your email address will not be published. Required fields are marked *