ನವದೆಹಲಿ | ಕೇಂದ್ರದ ನಡೆಗೆ ಕಿಡಿಕಾರಿದ ಮಮತಾ: ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ವಾದ

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿಚಾರದಲ್ಲಿ ರಾಜ್ಯವನ್ನೇ ಗುರಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಮೂಲಕ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದ  ಅವರು ‘ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಕೂಡಲೇ ಮಧ್ಯ ಪ್ರವೇಶಿಸಬೇಕು’ ಎಂದು ಬುಧವಾರ ಆಗ್ರಹಿಸಿದರು.

ನ್ಯಾಯಾಲಯದಲ್ಲಿ ಸ್ವತಃ ವಾದ ಮಂಡಿಸಿದ ಅವರು, ‘ಪಶ್ಚಿಮ ಬಂಗಾಳ ದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ವೇಳೆ ಅನುಸರಿಸಲಾಗುತ್ತಿರುವ ಮಾನದಂಡಗಳನ್ನು ನೆರೆ ರಾಜ್ಯ ಅಸ್ಸಾಂನಲ್ಲಿ ಯಾಕೆ ಅನ್ವಯಿಸಲಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ನೇತೃತ್ವದ ಪೀಠವು, ಮಮತಾ ಬ್ಯಾನರ್ಜಿ ಅವರ ಮೇಲ್ಮನವಿ ಪರಿಗಣಿಸಿ ಫೆಬ್ರುವರಿ 9ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋಗ ಹಾಗೂ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಆಧಿಕಾರಿಗೆ ನೋಟಿಸ್‌ ಜಾರಿ ಮಾಡಿತು.

ಇದನ್ನೂ ಓದಿ : ಬೆಂಗಳೂರು | ಕರ್ನಾಟಕದ ಶಾಲಾ ಶಿಕ್ಷಣಕ್ಕೆ ಬಿಕ್ಕಟ್ಟು: ಶಿಕ್ಷಕರ ಕೊರತೆ–ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಎಂ.ಪಂಚೋಲಿ ಕೂಡ ಈ ಪೀಠದಲ್ಲಿದ್ದಾರೆ. ಅಪರೂಪವೆಂಬಂತೆ ಹಾಗೂ ಇದೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿ ಯೊ ಬ್ಬರು ಖುದ್ದು ಹಾಜರಾಗಿ ವಾದ ಮಂಡನೆ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್‌ ಸಾಕ್ಷಿಯಾಯಿತು.

ಫೆ.9ರಂದು ನ್ಯಾಯಾಲಯಕ್ಕೆ ಪುನಃ ಹಾಜರಾಗಿ, ವಾದ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಮಮತಾ ಬ್ಯಾನರ್ಜಿ ಪರ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ವಾದ ಮಂಡಿಸಿದರೂ, ಪೂರಕ ನಿವೇದನೆಗಳನ್ನು ಅರುಹಲು ಅವರಿಗೆ ಪೀಠವು ಅನುಮತಿ ನೀಡಿತು.

ವಿಚಾರಣೆ ವೇಳೆ, ‘ಎಸ್‌ಐಆರ್‌ ಕುರಿತು ಚುನಾವಣಾ ಆಯೋಗಕ್ಕೆ ನಾನು 6 ಪತ್ರಗಳನ್ನು ಬರೆದಿರುವೆ. ನಮಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ಈ ಕಾರಣಕ್ಕೆ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವೆ’ ಎಂದು ಮಮತಾ ಬ್ಯಾನರ್ಜಿ ಹೇಳಿದರು.

‘ದೊಡ್ಡ ಸಂಖ್ಯೆಯ ಮತದಾರರ ಹೆಸರುಗಳ ಪರಿಷ್ಕರಣೆ ಹಾಗೂ ಹೊಂದಾಣಿಕೆ ಪ್ರಕ್ರಿಯೆ ಬಾಕಿ ಇದೆ. ಫೆಬ್ರುವರಿ 14ರ ಒಳಗಾಗಿ ಈ ಕಾರ್ಯ ಪೂರ್ಣಗೊಳ್ಳಬೇಕಿರುವ ಕಾರಣ, ನೈಜ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗುವ ಅಪಾಯ ಇದೆ’ ಎಂದು ವಕೀಲ ದಿವಾನ್‌ ಹೇಳಿದರು.

‘ಚುನಾವಣಾ ಆಯೋಗವು 1.36 ಕೋಟಿ ಮತದಾರರಿಗೆ ನೋಟಿಸ್‌ ನೀಡಿದೆ. ಈ ಮತದಾರರಿಗೆ ಸಂಬಂಧಿಸಿ ‘ಹೆಸರು ಹೊಂದಾಣಿಕೆ ಸಮಸ್ಯೆ’ ಕಾರಣಗಳಿಂದಾಗಿ ನೋಟಿಸ್‌ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ. ಹೆಸರಿನಲ್ಲಿನ ವ್ಯತ್ಯಾಸಗಳಿಗಾಗಿ ಹೆಚ್ಚು ಜನರಿಗೆ ನೋಟಿಸ್‌ ನೀಡಲಾಗಿದೆ. ಆದರೆ, ಈ ದೋಷಗಳನ್ನು ಸುಲಭವಾಗಿ ಸರಿಪಡಿಸಲು ಸಾಧ್ಯವಿದೆ’ ಎಂದು ದಿವಾನ್‌ ವಾದಿಸಿದರು.

ಬಂಗಾಳಿ ಹಾಗೂ ಅದರ ಉಪ ಭಾಷೆಯೊಂದನ್ನು ಉಲ್ಲೇಖಿಸಿದ ಸಿಜೆಐ ಸೂರ್ಯಕಾಂತ್‌, ಭಾಷೆಯಲ್ಲಿನ ಈ ವ್ಯತ್ಯಾಸದಿಂದಾಗಿ ಹೆಸರಿನಲ್ಲಿ ತಪ್ಪು ನುಸುಳಿರಬಹುದು ಎಂದರು. ‘ಈಗ ನಡೆಯುತ್ತಿರುವ ಎಸ್ಐಆರ್ ವೇಳೆ ವಲಸೆಯನ್ನೂ ಪರಿಗಣಿಸಲಾಗುತ್ತಿದೆ. ಆದಾಗ್ಯೂ, ಮತದಾರರ ಪಟ್ಟಿಯಿಂದ ನೈಜ ಮತದಾರರ ಹೆಸರು ಕೈಬಿಟ್ಟು ಹೋಗಬಾರದು’ ಎಂದು ಹೇಳಿದರು.

ಎಷ್ಟೋ ಜನರು ಜೀವಂತವಾಗಿದ್ದಾರೆ. ಆದರೆ, ಅವರು ಮೃತಪಟ್ಟಿದ್ದಾಗಿ ಘೋಷಿಸಲಾಗಿದೆ’ ಎಸ್‌ಐಆರ್‌ ಭಾಗವಾಗಿ ಆಧಾರ್‌ ಹಾಗೂ ಇತರ ದಾಖಲೆಗಳನ್ನು ಚುನಾವಣಾ ಆಯೋಗ ಪರಿಗಣಿಸುತ್ತಿಲ್ಲ.  ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

ಅಂಗನವಾಡಿ ಕಾರ್ಯಕರ್ತರಂತಹ ಕೆಳ ಹಂತದ ನೌಕರರನ್ನು ಪರಿಷ್ಕರಣೆ ಕಾರ್ಯಕ್ಕೆ ಒದಗಿಸಿದೆ’ ಇದಕ್ಕೆ ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್‌ ದ್ವಿವೇದಿ, ‘ರಾಜ್ಯ ಸರ್ಕಾರ ಗ್ರೇಡ್‌–2 ಶ್ರೇಣಿಯ 80 ಅಧಿಕಾರಿಗಳನ್ನು ಒದಗಿ ಸಿದೆ ಎಂದರು. ‘ಚುನಾವಣಾ ಆಯೋಗ ಕೇಳಿದಂತೆಯೇ, ಎಸ್‌ಐಆರ್‌ ಕಾರ್ಯಕ್ಕೆ ಸಿಬ್ಬಂದಿಯನ್ನು ಒದಗಿಸಲಾಗಿದೆ’ ಎಂದು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದರು.

ಇದನ್ನೂ ನೋಡಿ : ಫೆ.12 ಸಾರ್ವತ್ರಿಕ ಮುಷ್ಕರ – ಶ್ರಮಜೀವಿಗಳ ಘೋಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *