ಕೊಲ್ಕತ್ತಾ: ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ವಾಗ್ದಾಳಿ ನಡೆಸಲು ಆಹಾರ ಪದ್ಧತಿಯನ್ನು ತಮ್ಮ ಆರೋಪ, ಪ್ರತ್ಯಾರೋಪಗಳಿಗೆ ಬಳಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮೀನು ತಿನ್ನುತ್ತಿರುವ ವಿಡೀಯೋವನ್ನು ಬಿಜೆಪಿ ನಾಯಕರು ಗುರಿಯಾಗಿಸಿಕೊಂಡಿಸಿದ್ದರು. ಆದರೀಗ ಇದೇ ಬಿಜೆಪಿಯ ಪ್ರಧಾನಿ ಮೋದಿಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಆಹಾರದ ವಿಷಯವಾಗಿಯೇ ಆಹ್ವಾನ ನೀಡಿದ್ದು, “ನಾನು ಅಡುಗೆಯನ್ನು ಮಾಡಿಕೊಟ್ಟರೆ ಮೋದಿ ಉಣ್ಣುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
ನನಗೆ ಚಿಕ್ಕಂದಿನಿಂದಲೂ ಅಡುಗೆ ಮಾಡಲು ಬರುತ್ತಿದ್ದು, ಪ್ರಧಾನಿ ಮೋದಿ ಬಯಸಿದರೆ, ನಾನು ಅವರಿಗೆ ಅಡುಗೆ ಮಾಡಿಕೊಡುತ್ತೇನೆ. ನನ್ನ ಅಡುಗೆಯನ್ನು ಎಲ್ಲರೂ ಮೆಚ್ಚುತ್ತಾರೆ ಆದರೆ ಪ್ರಧಾನಿ ನನ್ನ ಆಹಾರವನ್ನು ತಿನ್ನುತ್ತಾರೆಯೇ? ಅವರು ನನ್ನನ್ನು ನಂಬುತ್ತಾರೆಯೇ? ಅವರು ಇಷ್ಟಪಡುವದನ್ನು ನಾನು ಮಾಡುತ್ತೇನೆ. ಆದರೆ ಅವರು ನಾನು ಮಾಡಿಕೊಟ್ಟ ಅಡುಗೆ ತಿನ್ನುತ್ತಾರೋ ಇಲ್ಲೋ ಗೊತ್ತಿಲ್ಲ ಎಂದು ಕೊಲ್ಕತ್ತಾದ ಚುನಾವಣಾ ಜಾಥಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇನ್ನು ಮಮತಾ ಬ್ಯಾನರ್ಜಿ ತಮಗೆ ಮಾಂಸಾಹಾರದ ಜೊತೆ ಸಸ್ಯಾಹಾರವೂ ಇಷ್ಟವಿದ್ದು, ಗುಜರಾತಿನ ಡೋಕ್ಲಾ, ಬಂಗಾಲದ ಮಾಚರ್ ಜೋಲ್ (ಮೀನಿನ ಸಾರು) ಎರಡನನೂ ಇಷ್ಟಪಡುತ್ತೇನೆ.
ಹಿಂದೂಗಳ ಭಿನ್ನ ಸಮುದಾಯಗಳು ತಮ್ಮದೇ ಆದ ಸಂಪ್ರದಾಯ, ಆಹಾರ ಪದ್ಧತಿ ಹೊಂದಿವೆ. ಜನರ ಮೇಲಿನ ಆಹಾರ ಆಯ್ಕೆಗಳ ಮೇಲೆ ನಿರ್ಬಂಧ ಹೇರಲು ಬಿಜೆಪಿಯವರು ಯಾರು? . ಹಿಂದೂಗಳ ವಿವಿಧ ಪಂಗಡಗಳು ತಮ್ಮದೇ ಆದ ನಿಯಮಗಳನ್ನು ಹೊಂದಿವೆ, ಅವರ ಆಹಾರ ಪದ್ಧತಿ ಕೂಡ ವಿಭಿನ್ನವಾಗಿದೆ.
ಯಾರು ಏನು ತಿನ್ನಬೇಕು ಎಂಬುದನ್ನು ನಿರ್ಧರಿಸಲು ಬಿಜೆಪಿ ಯಾರು? ಭಾರತದ ವೈವಿಧ್ಯತೆ ಮತ್ತು ಏಕತೆಯನ್ನು ಬಿಜೆಪಿ ನಾಯಕರು ಎಷ್ಟು ಕಡಿಮೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಈ ಧೋರಣೆಯು ಬಿಜೆಪಿಯವರಿಗೆ ಭಾರತ ಹಾಗೂ ಇಲ್ಲಿನ ಜನರ ವೈವಿಧ್ಯ ಕುರಿತು ಇರುವ ಕನಿಷ್ಠ ಜ್ಞಾನ, ಕಾಳಜಿಯನ್ನು ತೋರಿಸುತ್ತದೆ,” ಭಾರತದ ವೈವಿಧ್ಯತೆಯನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಎಂದು ಮಮತಾ ಹೇಳಿದ್ದಾರೆ.
ಇದನ್ನು ಓದಿ : ಎಲ್ಗಾರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾಗೆ ಸುಪ್ರೀಂ ಕೋರ್ಟ್ ಜಾಮೀನು
ಮಮತಾ ಬ್ಯಾನರ್ಜಿ ಹೀಗೆ ಪ್ರಧಾನಿಗೆ ಆಹಾರಾಹ್ವನ್ನು ನೀಡುತ್ತಿದ್ದಂತೆಯೇ ವಿವಿಧ ಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಟಿಎಂಸಿ ಸಂಸದ ಡೋಲಾ ಸೇನ್ ಅವರು, ಮೋದಿಜಿಗೆ ಅವರಿಚ್ಛೆಯಂತೆ ಏನು ಬೇಕಾದರೂ ತಿನ್ನುವ ಹಕ್ಕಿದೆ, ಅದೇ ರೀತಿ ಪ್ರತಿಯೊಬ್ಬ ಭಾರತೀಯನಿಗೂ ಹಕ್ಕಿದೆ ಎಂದಿದ್ದಾರೆ.
ತ್ರಿಪುರಾದ ಮಾಜಿ ಗವರ್ನರ್ ತಥಾಗತ ರಾಯ್ ತಮ್ಮ ಎಕ್ಸ್ ಟ್ವಿಟ್ಟರ್ ಖಾತೆಯಲ್ಲಿ, ಮಮತಾ ಬ್ಯಾನರ್ಜಿ ಪ್ರಧಾನಿಗೆ ಮೀನು ಮತ್ತು ಅನ್ನ ನೀಡಲು ಬಯಸುತ್ತಾರೆ ಎಂದು ಬರೆದಿದ್ದಾರೆ. ಬಿಜೆಪಿ ಮುಖಂಡ ಶಂಕುದೇವ್ ಪಾಂಡಾ ಮಾತನಾಡಿ, ‘ಪ್ರಧಾನಿ ಸಸ್ಯಾಹಾರ. ಮೋದಿ ಮೀನಾಗಲೀ ಅಥವಾ ಇತರೆ ಮಾಂಸಾಹಾರವಾಗಲೀ ಸೇವಿಸುವುದಿಲ್ಲ ಎನ್ನುವುದು ಸಿಎಂ ಮಮತಾ ಬ್ಯಾನರ್ಜಿಗೆ ಚೆನ್ನಾಗಿ ಗೊತ್ತಿದೆ.
ಹೀಗಿದ್ದರೂ ಅವರವರಿಗೆ ಇಷ್ಟವಾದದ್ದನ್ನು ತಿನ್ನಲು ಬಿಡಬೇಕು ಎನ್ನುವುದನ್ನು ಆಕೆ ನಂಬಿದ್ದರೆ, ಮೋದಿಜೀ ಮಾತನ್ನು ಏಕೆ ತಿರುಚುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಮೋದಿಯ ಮಾತನ್ನು ಎಲ್ಲರಿಗೂ ಇಷ್ಟವಾದದ್ದನ್ನು ತಿನ್ನಲು ಬಿಡಬೇಕು ಎಂದು ಅವಳು ನಂಬಿದರೆ, ಮೋದಿಜಿಯ ಮಾತನ್ನು ಏಕೆ ತಿರುಚುತ್ತಿದ್ದಾಳೆ?
ಇನ್ನು ಸಿಪಿಐಎಂ ನಾಯಕ ವಿಕಾಸ್ ಭಟ್ಟಾಚಾರ್ಯ ಮಾತನಾಡಿ, ಮಮತಾ ಪ್ರಧಾನಿಗೆ ಅಡುಗೆ ಮಾಡಬಲ್ಲರು. ಅದು ಹೇಗೆ ಅವಮಾನವಾಯಿತು ಎಂಬುದು ಗೊತ್ತಿಲ್ಲವೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಇದರೊಂದಿಗೆ ಭಾರತ ದೇಶವನ್ನು ಈ ಸ್ಥಿತಿಗೆ ತರಲು ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಇಬ್ಬರೂ ಕಾರಣ. ಎರಡೂ ಪಕ್ಷಗಳು ರಾಜಕೀಯದಲ್ಲಿ ಧರ್ಮ ಬೆರೆಸುತ್ತಿವೆ ಎಂದು ಹೇಳಿದ್ದಾರೆ.
ಇದನ್ನು ನೋಡಿ : ಎರಡು ಕೋಟಿ ಉದ್ಯೋಗ : ಎಲ್ಲಿ ಹೋದವು? ಮೋದಿ ಸರ್ಕಾರದ ಉತ್ತರವೇನು? Janashakthi Media