ಮಲಯಾಳಂ ಕಿರುತೆರೆ ನಟ ದಿಲೀಪ್ ಶಂಕರ್ ಹೋಟೆಲ್‌ನಲ್ಲಿ ಶವವಾಗಿ ಪತ್ತೆ

ತಿರುವನಂತಪುರಂ: ಮಲಯಾಳಂ ಕಿರುತೆರೆ ನಟ ದಿಲೀಪ್ ಶಂಕರ್ ತಿರುವನಂತಪುರಂನ ಹೋಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಲಯಾಳಂ

ಅಮ್ಮ ಇರಿಯಾತ್ರೆ, ಪಂಚಾಗ್ನಿ ಮತ್ತು ಸುಂದರಿ ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ದಿಲೀಪ್ ಶಂಕರ್‌, ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲೂ ತಮ್ಮ ಚಾವು ಮೂಡಿಸಿದ್ದ ದಿಲೀಪ್ ಶಂಕರ್ ತಿರುವನಂತಪುರಂದ ಹೋಟೆಲ್‌ನಲ್ಲಿ ಶವವಾಗಿ ಇಂದು ಪತ್ತೆಯಾಗಿದ್ದಾರೆ. ಮಲಯಾಳಂ

ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವಂತೆ ದಿಲೀಪ್ ಪಂಚಾಗ್ನಿ ಧಾರಾವಾಹಿಯ ಚಿತ್ರೀಕರಣಕ್ಕೆ ತಿರುವನಂತಪುರಂಗೆ ಬಂದಿದ್ದರು. ಡಿಸೆಂಬರ್ 27ರಂದು ಹೊಟೇಲ್‌ನಲ್ಲಿ ರೂಮ್ ಬಾಡಿಗೆ ಪಡೆದಿದ್ದರು. ಆದರೆ ಅವತ್ತು ರೂಮ್ ಒಳಗೆ ಹೋದ ದಿಲೀಪ್ ಆ ನಂತರ ಹೊರ ಬರಲಿಲ್ಲ. ಧಾರಾವಾಹಿಯ ಸಹ ಕಲಾವಿದರ ಕರೆಗೆ ಕೂಡ ಉತ್ತರವನ್ನು ನೀಡಲಿಲ್ಲ.

ಇದನ್ನೂ ಓದಿ: ಸಾಲ ಕೊಡಿಸುವುದಾಗಿ ಹೇಳಿ ಲಾಡ್ಜ್‌ಗೆ ಕರೆದೊಯ್ದು ಮಹಿಳೆಯ ಮೇಲೆ ಅತ್ಯಾಚಾರ

ಇಂದು ಬೆಳಗ್ಗೆ ಕೊಠಡಿಯಿಂದ ದುರ್ವಾಸನೆ ಬರಲು ಪ್ರಾರಂಭವಾದಾಗ ಅನುಮಾನಗೊಂಡ ಹೊಟೇಲ್ ಸಿಬ್ಬಂದಿ ತಮ್ಮ ಬಳಿ ಇದ್ದ ಕೀಲಿ ಕೈಯನ್ನು ಬಳಸಿಕೊಂಡು ರೂಮ್ ಬಾಗಿಲು ತೆರೆದಿದ್ದಾರೆ. ಆಗ ದಿಲೀಪ್ ಶವವಾಗಿ ಪತ್ತೆಯಾಗಿದ್ದಾರೆ.

ಇನ್ನು ದಿಲೀಪ್ ರ ನಿಧನಕ್ಕೆ ಕಾರಣ ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮೇಲ್ನೋಟಕ್ಕೆ ದಿಲೀಪ್ ರದ್ದು ಅಸಹಜ ಸಾವು ಎಂದು ಅನಿಸುತ್ತಿಲ್ಲ ಎಂದಿರುವ ಪೊಲೀಸರು ಮರಣೋತ್ತರ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಇನ್ನು ದಿಲೀಪ್ ಶಂಕರ್ ರ ಅಕಾಲಿಕ ನಿಧನದಿಂದ ಆಘಾತಕ್ಕೊಳಗಾದ ಪಂಚಾಗ್ನಿ ಧಾರಾವಾಹಿ ನಿರ್ದೇಶಕ ಮನೋಜ್, ದಿಲೀಪ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಅನೇಕ ಗಂಭೀರವಾದ ಆರೋಗ್ಯ ಸಮಸ್ಯೆಗಳು ಇದ್ದವು ಅದಕ್ಕಾಗಿ ಅವರು ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ.

ಚಿತ್ರೀಕರಣದ ಪ್ರಯುಕ್ತ ತಿರುವನಂತಪುರಂಗೆ ತಾವೆಲ್ಲ ಬಂದಿದ್ದಾಗಿ ಹೇಳಿದ್ದಾರೆ. ವಾರಾಂತ್ಯವಾದ್ದರಿಂದ ಎರಡು ದಿನ ಯಾವುದೇ ಚಿತ್ರೀಕರಣ ಇರಲಿಲ್ಲ. ಹೀಗಾಗಿ ದಿಲೀಪ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು ಎಂದು ಕೂಡ ಹೇಳಿಕೆಯನ್ನು ನೀಡಿದ್ದಾರೆ. ದಿಲೀಪ್ ಅವರ ನಿಧನದ ಸುದ್ದಿಯನ್ನು ಕೇಳಿ ಕಣ್ಣೀರಾಗಿರುವ ಅನೇಕರು ದಿಲೀಪ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ದಿಲೀಪ್ ನಿಧನದ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ ಸೀಮಾ ಜಿ ನಾಯರ್ ನೀವು ನನಗೆ ಐದು ದಿನದ ಹಿಂದೆ ಕರೆ ಮಾಡಿದ್ದೀರಿ ಆದರೆ ಅವತ್ತು ನನಗೆ ತೀವ್ರ ತಲೆ ನೋವು ಇದ್ದ ಕಾರಣ ನಿಮ್ಮ ಜೊತೆ ಸರಿಯಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ಈಗ ಪತ್ರಕರ್ತರೊಬ್ಬರಿಂದ ನಿಮ್ಮ ನಿಧನದ ಸುದ್ದಿ ನನಗೆ ಗೊತ್ತಾಯಿತು. ನಿನಗೇನಾಯಿತು ದಿಲೀಪ್ ? ಇದೆಲ್ಲ ಯಾಕೆ ಆಯಿತು ? ನನಗೆ ಏನು ಬರೆಯಬೇಕೆಂದು ತಿಳಿಯುತ್ತಿಲ್ಲ ಎಂದಿದ್ದಾರೆ. ನಿಮಗೆ ನನ್ನ ಅಂತಿಮ ನಮನಗಳು ಎಂದು ಬರೆದುಕೊಂಡಿದ್ದಾರೆ.

ಎರ್ನಾಕೂಲಂ ಮೂಲದವರಾದ ದಿಲೀಪ್ ಶಂಕರ್ ಅವರ ನಿಧನದ ಸುದ್ದಿಯನ್ನು ಕೇಳಿ ಕಿರುತೆರೆ ಮತ್ತು ಬೆಳ್ಳಿ ತೆರೆಯ ಅನೇಕರು ಅಗಲಿದೆ ದಿಲೀಪ್ ಶಂಕ‌
ಅವರಿಗೆ ನುಡಿ ನಮನ ಸಲ್ಲಿಸುತ್ತಿದ್ದಾರೆ.

ಇದನ್ನೂ ನೋಡಿ: ಕುವೆಂಪು 120| lವಿಚಾರ ಕ್ರಾಂತಿಗೆ ಆಹ್ವಾನ : ಹಿಂದಿ ಹೇರಿಕೆಯ ಭಾಷೆ Janashakthi Media

Donate Janashakthi Media

Leave a Reply

Your email address will not be published. Required fields are marked *