ವಿಜಯಪುರ: ಉತ್ತರ ಕರ್ನಾಟಕದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಯರಡಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹೆದರುತ್ತಿರುವ ಕಾರಣ ಬಹುತೇಕ ಶಾಲೆಯಲ್ಲಿ ಶೇಕಡ 60ರಷ್ಟು ಹಾಜರಾತಿ ಕಡಿಮೆಯಾಗಿದೆ.
ಕಳೆದೆರಡು ವರ್ಷಗಳಿಂದ ಕೊರೊನಾದಿಂದಾಗಿ ಮಕ್ಕಳ ಶಿಕ್ಷಣವು ಹೆಚ್ಚು ಇಳಿಮುಖ ಕಂಡಿದ್ದು, ಇದೀಗ ಮಕ್ಕಳ ಕಳ್ಳರ ವದಂತಿಯು ಮತ್ತಷ್ಟು ಪರಿಣಾಮ ಬೀರಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಯ ಶಾಲೆಗಳಲ್ಲಿ ಶೇ.60ರಷ್ಟು ಮಕ್ಕಳ ಹಾಜರಾತಿ ಕುಸಿದಿದೆ.
ಉತ್ತರ ಕರ್ನಾಟಕದಲ್ಲಿ ಅಂದಾಜು 11 ಸಾವಿರ ಸರಕಾರಿ ಹಾಗೂ 3 ಸಾವಿರ ಅರೆ ಸರಕಾರಿ ಶಾಲೆಗಳಿದ್ದು, ಒಟ್ಟು 28 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ಊರಲ್ಲಿರುವ ಶಾಲೆಗಳಲ್ಲಿ ಶೇ.60ರಷ್ಟು ಮಕ್ಕಳ ಹಾಜರಾತಿ ಕುಸಿದಿದೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಂತೂ ಶೇ.75ರಷ್ಟು ಹಾಜರಾತಿ ಕುಸಿದಿರುವುದು ಶಿಕ್ಷಕರಲ್ಲಿ ಬೇಸರ ಮೂಡಿಸಿದೆ. ನಗರ ಪ್ರದೇಶಕ್ಕೆ ಈ ಬಾಧೆ ಅಷ್ಟರ ಮಟ್ಟಿಗೆ ಕಾಡದಿರುವುದು ಸಮಾಧಾನದ ಸಂಗತಿ.
ಶಾಲೆಗಳಲ್ಲಿ ಮಕ್ಕಲೇ ಇಲ್ಲದಿದಲ್ಲಿ ನಾವು ಯಾರಿಗೆ ಪಾಠ ಮಾಡುವುದು ಎಂದು ಶಕ್ಷಕರು ಗೋಳು ಹೇಳಿಕೊಂಡರೇ, ಇರುವಷ್ಟು ಮಕ್ಕಳಿಗೆ ಪಾಠ ಮಾಡಿಯೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಅಧಿಕಾರಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು, ಪೋಷಕರು ಖಾಕಿ ಪಡೆಯ ಜಾಗೃತಿಯನ್ನು ನಂಬುತ್ತಿಲ್ಲ. ಹೀಗಾಗಿ ಶಾಲೆಯಲ್ಲಿ ಮಕ್ಕಳ ಕಲರವ ಕಣ್ಮರೆಯಾಗುತ್ತಿದೆ. ಮಕ್ಕಳ ಕಳ್ಳರ ವದಂತಿ ಸಳ್ಳು, ನಂಬಬೇಡಿ ಎಂದು ಪೋಷಕರ ಮನೆ ಬಾಗಿಲಿಗೆ ತೆರಳಿ ತಿಳಿವಳಿಕೆ ನೀಡಿದರೂ ಒಪ್ಪುತ್ತಿಲ್ಲ. ಮಕ್ಕಳನ್ನು ಅಪಹರಿಸಿಕೊಂಡು ಹೋಗುವುದನ್ನು ಮೊಬೈಲ್‌ನಲ್ಲಿ ನೋಡಿದ್ದೇವೆ ಎಂದು ಪೋಷಕರು ಉತ್ತರಿಸುತ್ತಿದ್ದಾರೆ ಎಂದು ಎಲ್‌ಪಿಎಸ್ ಮುಖ್ಯ ಶಿಕ್ಷಕ ಎಚ್. ಕೆ. ಬೂದಿಹಾಳ ಮಾಹಿತಿ ನೀಡಿದ್ದಾರೆ.