ಮಾಜಿ ಸಚಿವ ಬುಟಾ ಸಿಂಗ್ ನಿಧನ

ಬೆಂಗಳೂರು; ಜ.2 : ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಬುಟಾ ಸಿಂಗ್ (86) ನಿಧನರಾಗಿದ್ದಾರೆ. ಬುಟಾ ಸಿಂಗ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ನಿಧರಾಗಿದ್ದಾರೆಂದು ವರದಿಯಾಗಿದೆ. ಇವರ ನಿಧನಕ್ಕೆ  ಗಣ್ಯರು ಕಂಬನಿ ಮಿಡಿದಿದ್ದಾರೆ.

ಬುಟಾ ಸಿಂಗ್ ಪ್ರಮುಖ ದಲಿತ ಮುಖಂಡರಾಗಿ 1986 ಮತ್ತು 1989 ರ ನಡುವೆ ರಾಜೀವ್ ಗಾಂಧಿ ಸಂಪುಟದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮತ್ತು1984 ರಿಂದ 1986 ರವರೆಗೆ ಕೃಷಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 2004 ಮತ್ತು 2006 ರ ನಡುವೆ ಅವರು ಬಿಹಾರ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಒಟ್ಟು 8 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಬುಟಾ ಸಿಂಗ್ ಅಕ್ಟೋಬರ್ 2015 ರಲ್ಲಿ ಮತ್ತೆ ಕಾಂಗ್ರೆಸ್ಗೆ ಸೇರಿದ್ದರು. ಅವರು 2009 ಮತ್ತು 2014 ರ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ ಜಲೋರ್ ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.  ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಪ್ರಮುಖ ಸಂಘಟನೆಯಾದ ಸಫೈ ಮಜ್ದೂರ್ ಕಾಂಗ್ರೆಸ್ ಮುಖ್ಯಸ್ಥರಾಗಿ ಬುಟಾ ಸಿಂಗ್  ಸೇವೆಯನ್ನು ಸಲ್ಲಿಸಿದ್ದಾರೆ.

ಬುಟಾ ಸಿಂಗ್ ನಿಷ್ಠಾವಂತ ಆಡಳಿತಗಾರ ಹಾಗೂ ಅನುಭವಿ ಆಡಳಿತಗಾರರಾಗಿದ್ದರು. ಬಡವರ ಕಲ್ಯಾಣಕ್ಕಾಗಿ, ದೀನ ದಲಿತರ ಧ್ವನಿಯಾಗಿದ್ದರು ಎಂದು ಬೆಂಬಲಿಗರು ಹಾಗೂ ರಾಜಕೀಯ ನಾಯಕರುಗಳು ಸಂತಾಪವನ್ನು ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *