ದೇಹ್ರಾಡೂನ್: ಬದ್ರಿನಾಥ ದೇವಾಲಯದ ದೇಣಿಗೆ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಪ್ರಮೋದ್ ನೌಟಿಯಾಲ್ ಅವರನ್ನು ಉತ್ತರಾಖಂಡ್ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಜುಲೈ 13ರಂದು ತಿಳಿಸಿದ್ದಾರೆ.
ಚಮೋಲಿ ಪೊಲೀಸರು ಭಾನುವಾರ ರಾತ್ರಿ ದೇಹ್ರಾಡೂನ್ನಲ್ಲಿರುವ ಅವರ ನಿವಾಸದಿಂದ ನೌಟಿಯಾಲ್ ಅವರನ್ನು ವಶಕ್ಕೆ ಪಡೆದು ಬದ್ರಿನಾಥಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಚಮೋಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರಜಿತ್ ಸಿಂಗ್ ಪನ್ವಾರ್ ತಿಳಿಸಿದ್ದಾರೆ.
ನೌಟಿಯಾಲ್ ಅವರು ಶ್ರೀ ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC)ಯ ಅಮಾನತುಗೊಂಡ ನೌಕರರಾಗಿದ್ದಾರೆ.
ಇದನ್ನೂ ಓದಿ: ಉಪವಾಸದ 15ನೇ ದಿನ: ಸೋನಂ ವಾಂಗ್ಚುಕ್ ಆರೋಗ್ಯ ಗಂಭೀರ
ಬಿಟಿಕೆಟಿಸಿ ಅಧ್ಯಕ್ಷರ ವೈಯಕ್ತಿಕ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದ ನೌಟಿಯಾಲ್ ವಿರುದ್ಧ ಮಂಗಳವಾರ ರಾತ್ರಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಟಿಕೆಟಿಸಿ ರಚಿಸಿದ್ದ ನಾಲ್ಕು ಸದಸ್ಯರ ತನಿಖಾ ಸಮಿತಿ, ದೇಣಿಗೆ ನಿರ್ವಹಣೆಯಲ್ಲಿ ನಡೆದ ಅಕ್ರಮಗಳ ಆರೋಪಗಳು ಪ್ರಾಥಮಿಕವಾಗಿ ಸತ್ಯವೆಂದು ಕಂಡುಹಿಡಿದಿದೆ.
ಬದ್ರಿನಾಥ ಸೇರಿದಂತೆ ಉತ್ತರಾಖಂಡದ ಹಲವು ದೇವಾಲಯಗಳ ನಿರ್ವಹಣೆಗೆ ಹೊಣೆಗಾರಿಕೆಯಾಗಿರುವ ಸಂಸ್ಥೆಯೇ ಬಿಟಿಕೆಟಿಸಿ. ಈ ಪ್ರಕರಣದ ಬಗ್ಗೆ ಉತ್ತರಾಖಂಡ ಸರ್ಕಾರವೂ ಮೂರು ಸದಸ್ಯರ ತನಿಖಾ ಸಮಿತಿಯನ್ನು ಕಳೆದ ವಾರ ರಚಿಸಿದೆ.
ಗಢ್ವಾಲ್ ವಿಭಾಗದ ಆಯುಕ್ತರು ಈ ಸಮಿತಿಯ ಅಧ್ಯಕ್ಷರಾಗಿದ್ದು, ತನಿಖೆಯ ವರದಿ ಮತ್ತು ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬದ್ರಿನಾಥ ದೇವಾಲಯದ ದೇಣಿಗೆ ಎಣಿಕೆ ವೇಳೆ ಅಕ್ರಮಗಳು ನಡೆದಿರುವ ಆರೋಪಗಳು ಹೊರಬಂದ ನಂತರ ಈ ವಿಚಾರ ಹೆಚ್ಚು ಗಮನ ಸೆಳೆದಿತ್ತು.
ನಂತರ ‘ಭೈರವ ಸೇನಾ’ ಎಂಬ ಸಂಘಟನೆ ದೂರು ನೀಡಿದ್ದು, ಪ್ರಕರಣದ ಕುರಿತು ತನಿಖೆ ನಡೆಸಿ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿತ್ತು.
ಇದನ್ನೂ ನೋಡಿ: ಎಸ್ಐಆರ್ ವಿರುದ್ಧ ರಾಜ್ಯವ್ಯಾಪಿ ಕಾವಲು ಸಮಿತಿ | ಮತದಾರರ ಹಕ್ಕು ರಕ್ಷಣೆಗೆ ಹೋರಾಟJanashakthi Media
