ಮೈದಾನದಲ್ಲಿ ಕ್ರಿಕೆಟ್‌ ಆಡುತ್ತಿದ್ದ ಕ್ರೈಸ್ತ ಯುವಕನನ್ನು ಹೊರದಬ್ಬಿದ ಬಿಜೆಪಿ ಮುಖಂಡ

ಸುಳ್ಯ: ಸೌಹಾರ್ದತೆಯ ಪ್ರತೀಕವಾಗಬೇಕಿದ್ದ ಕ್ರೀಡೆಯಲ್ಲೂ ಕೋಮು ದ್ವೇಷವನ್ನು ಹರಡುವ ಕೆಲಸಕ್ಕೆ ಮುಂದಾಗಿರುವ ಪ್ರಕರಣವೊಂದು ನಡೆದಿದೆ. ದೇವಸ್ಥಾನದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಕ್ರೈಸ್ತ ಧರ್ಮಕ್ಕೆ ಸೇರಿದ ಯುವಕನನ್ನು ಆತನ ಧರ್ಮವನ್ನು ಪ್ರಸ್ತಾಪಿಸಿ ಕ್ರೀಡಾಂಗಣದಿಂದ ಹೊರದಬ್ಬಿರುವ ಆಘಾತಕಾರಿ ಘಟನೆ ಸುಳ್ಯದ ಜಯನಗರ ಎಂಬಲ್ಲಿ ನಡೆದಿದೆ.

ಕೊರಗಜ್ಜ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದದಲ್ಲಿ ಸ್ಥಳೀಯ ಯುವಕ ಲೋಕೇಶ್ ಮತ್ತು ಆತನ ಸ್ನೇಹಿತರು ಕ್ರಿಕೆಟ್ ಆಡುತ್ತಿದ್ದರು. ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಮೈದಾನದಲ್ಲಿ ಹಿಂದೂ ಯುವಕರೊಂದಿಗೆ ಆಟವಾಡುತ್ತಿದ್ದ ಕ್ರೈಸ್ತ ಯುವಕನ್ನು ನೀನು ಹಿಂದೂ ಅಲ್ಲ, ಹೊರಗೆ ಹೋಗು ಎಂದು ಬಿಜೆಪಿ ಮುಖಂಡ ಪ್ರವೀಣ್ ಎಂಬಾತ ಹೊರದಬ್ಬುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದನ್ನು ಓದಿ: ಎಂಆರ್‌ಪಿಎಲ್‌ ನೇಮಕಾತಿ ವಿವಾದ- ಕರಾವಳಿಗರಿಗೆ ಆದ್ಯತೆ ನೀಡಿ

ಬಳಿಕ ಹಿಂದೂ ಯುವಕರ ಜೊತೆ ಮಾತನಾಡಿದ ಬಿಜೆಪಿ ಮುಖಂಡ ಪ್ರವೀಣ್ ‘’ನೀವು  ಹಿಂದು ಅಲ್ಲದ, ಬೇರೆ ಧರ್ಮದವರ ಜೊತೆ ಇಲ್ಲಿ ಆಟವಾಡುತ್ತೀರಲ್ಲ, ಯಾಕೆ ಅವರ ಜೊತೆ ಆಟವಾಡುತ್ತೀರಿ, ನಾವು ಮುಸ್ಲಿಮರ ಬಳಿ ಹೋಗಲ್ಲ, ಕ್ರೈಸ್ತರ ಬಳಿ ಹೋಗಲ್ಲ. ಚರ್ಚ್ ಎದುರಲ್ಲಿ ಮೈದಾನ ಇದೆ. ಅಲ್ಲಿಗೆ ಹೋಗಿ ಆಟವಾಲು ಸಾಧ್ಯವೇ ? ಎಂದು ಪ್ರಶ್ನೆ ಮಾಡಿದ್ದಾನೆ’’.

ಇದಕ್ಕೆ ಯುವಕರು ಕ್ರೈಸ್ತ ಯುವಕನ ಬೆಂಬಲಕ್ಕೆ ನಿಂತು ಆಟದಲ್ಲಿ ಧರ್ಮ ಯಾಕೆ ? ಎಂದು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿದೆ.
ಘಟನೆಯ ಹಿನ್ನೆಲೆಯಲ್ಲಿ ಕೆಲಹೊತ್ತು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.

ನಾನು ಶಾಸಕರ ಜೊತೆ ಮಾತನಾಡಿಯೇ ಹೊರಗೆ ಕಳುಹಿಸುತ್ತಿದ್ದೇನೆ ಎಂದೂ ಈ ಸಂದರ್ಭದಲ್ಲಿ ಪ್ರವೀಣ್ ಹೇಳಿದ್ದಾನೆ. ಈ ಎಲ್ಲಾ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಆಟದಲ್ಲೂ ಧರ್ಮವನ್ನು ಬೆಸೆಯಲು ಮುಂದಾಗಿರುವುದನ್ನು ಸಾರ್ವಜನಿಕರು ಪ್ರವೀಣ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

 

Donate Janashakthi Media

Leave a Reply

Your email address will not be published. Required fields are marked *