ಮಹಿಷಾ ದಸರಾ ಆಚರಣೆ : ಸಂವಿಧಾನದ ರಕ್ಷಕರೇ ಭಕ್ಷರಾಗಿದ್ದಾರೆಂದು ಜ್ಞಾನಪ್ರಕಾಶ ಸ್ವಾಮೀಜಿ ಕಿಡಿ

ಮೈಸೂರು: ಯಾರು ಸಂವಿಧಾನದ ರಕ್ಷಕರೋ ಅವರು ಸಂವಿಧಾನದ ಭಕ್ಷಕರಾಗಿದ್ದಾರೆ ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಕಿಡಿಕಾರಿದರು.

ನಗರದಲ್ಲಿರುವ ಬೌದ್ಧ ವಿಹರದಲ್ಲಿ ಮಹಿಷ ದಸರಾ ಆಚರಣೆಯ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಸಾಂಸ್ಕೃತಿಕ ನಗರಿಯಲ್ಲಿ ಮಹಿಷ ದಸರಾ ಆಚರಣೆ ಮಾಡುತ್ತಿದ್ದೇವೆ. ಮೈಸೂರು ದಸರಾಕ್ಕೆ ಮಹಿಷ ದಸರಾ ಪರ್ಯಾಯವಲ್ಲ ಎಂದು ಸ್ಪಷ್ಟಪಡಿಸಿದರು.

ಮಹಿಷ ಮಂಡಲ ರಾಜಧಾನಿಯಲ್ಲಿ ಮಹಿಷಾಸುರ ಮಾನವೀಯತೆ ಹೊಂದಿದವನಾಗಿದ್ದ ಎಂದು ಅಂಬೇಡ್ಕರ್ ಪುಸ್ತಕದಲ್ಲಿ ವಿವರಿಸಿದ್ದಾರೆ. ಚರಿತ್ರೆ ಇತಿಹಾಸ ಇರತಕ್ಕ ಮಹಿಷನ ಆಚರಣೆಗೆ ಸರ್ಕಾರ ಅನುಮತಿ ಕೊಡಲ್ಲ ಅಂದರೆ ಇದು ಯಾವ ಪ್ರಜಾ ಪ್ರಭುತ್ವ, ಯಾವ ಸಂವಿಧಾನ ಎಂದು ಪ್ರಶ್ನಿಸಿದರು.

ಯಾವ ಸಂವಿಧಾನದಲ್ಲಿ ಸರ್ಕಾರ ನಡೆಯುತ್ತಿದೆ ನನಗಂತೂ ಗೊತ್ತಿಲ್ಲ. ಮೈಸೂರು ಜಿಲ್ಲಾಧಿಕಾರಿಗಳು ಒಂದು ಪಕ್ಷದ ಆಫೀಸ್ ಅಂತ ಬೋರ್ಡ್ ಹಾಕೊಂಡರೆ ನಾವ್ಯಾರು ಅರ್ಜಿ ಕೊಡಲ್ಲ.ಅಥವಾ ಪೊಲೀಸ್ ಕಮೀಷನರು ನಾವು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇವೆ ಅಂದರೆ ನಾವು ಅರ್ಜಿ ಹಾಕಲ್ಲ. ಅವರಿಗೆ ನಾಚಿಕೆ ಆಗಬೇಕು. ಜಿಲ್ಲಾಡಳಿತಕ್ಕೆ ನಾಚಿಕೆ ಆಗಬೇಕು. ಅರ್ಜಿ ಕೊಟ್ಟರೆ ಷರತ್ತು ಬದ್ಧ ನಿಯಮವನ್ನಾದರೂ ರೂಪಿಸಿ ಅನುಮತಿಯನ್ನು ಕೊಡಬೇಕು ತಾನೇ ಎಂದು ವಾಗ್ದಾಳಿ ನಡೆಸಿದರು.

ಷರತ್ತು ಬದ್ಧ ಅನುಮತಿ ನೀಡಿದರೆ ಏನು ಆಗುತ್ತಿತ್ತು. ಯಾವ ಕಾನೂನಿನಡಿ ಅನುಮತಿ ನೀಡಬೇಡಿ ಅಂತ ಹೇಳಿದೆ? ಆರ್ಟಿಕಲ್ 25, 21 ಎಷ್ಟು ಅದ್ಭುತವಾಗಿ ಸಂವಿಧಾನ ಇದೆ. ಇಂತಹ ಸಂವಿಧಾನವನ್ನು ಅಪಚಾರ ಮಾಡತಕ್ಕಂತದ್ದು ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳು, ಕಮೀಷನ ರ್ಸರ್ಕಾರಕ್ಕೆ ಗೌರವ ತರುವಂತಹ ಕೆಲಸವಲ್ಲ. ಭಾರತ ಬಹುತ್ವದ ಭಾರತ, ಅವರವರ ಧಾರ್ಮಿಕ ಆಚರಣೆಗಳಿಗೆ ಹಕ್ಕುಗಳನ್ನು ಉಳಿಸಿಕೊಳ್ಳೊ ಕೆಲಸ ಮಾಡಬೇಕು ಎಂದರು.

ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಕಳೆದ 8ವರ್ಷಗಳಿಂದ ದೇಶದ ಇತಿಹಾಸವನ್ನು ಮತ್ತೆ ಪುನರುತ್ಥಾನ ಮಾಡಬೇಕೆಂದು ಮಹಿಷಾಸುರನ ಮಹಿಷ ದಸರಾ ಕಾರ್ಯಕ್ರಮವನ್ನು ನಿರಂತರವಾಗಿ ಮಹಿಷದಸರಾ ಸಮಿತಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಷ ದಸರಾ ವಿರುದ್ಧವಾಗಿ ಅವರು ನಿಲುವನ್ನು ತೆಗೆದುಕೊಂಡಿದ್ದಾರೆ. ಅವರಿಗೆ ಯಾವುದೇ ತರವಾದ ಹಕ್ಕಿಲ್ಲ. ನಮ್ಮ ಧಾರ್ಮಿಕತೆಯನ್ನು ನಮ್ಮ ಆಚಾರ ವಿಚಾರವನ್ನು ಗೌರವಿತಕ್ಕಂತದ್ದು ನಮ್ಮ ಸಂಪ್ರದಾಯವನ್ನು ನಾವು ಮಾಡತಕ್ಕಂತದ್ದು ನಮ್ಮ ಹಕ್ಕು. ನಗರದ ಪೊಲೀಸರುನ್ನು ಬೆಟ್ಟದಲ್ಲಿ ಕಾವಲು ಹಾಕಿರುವುದು ಸರ್ಕಾರದ ಅವಿವೇಕತನವಾಗಿದೆ. ನಾವು ಯಾವುದೇ ಧರ್ಮದ ವಿರುದ್ಧವಲ್ಲ, ಯಾವುದೇ ಧಾರ್ಮಿಕತೆಯ ವಿರುದ್ಧವಲ್ಲ. ಯಾವುದೇ ದೇವರುಗಳ ವಿರುದ್ಧ ಮಾಡುತ್ತಿಲ್ಲ, ನಮ್ಮ ಇತಿಹಾಸ ಪುರುಷ ಮಹಿಷಾಸುರನ ಮಹಿಷ ದಸರಾ ಆಚರಣೆ ಮಾಡುತ್ತಿದ್ದೇವೆ ಎಂದು ಕಿಡಿಕಾರಿದರು.

ಮೈಸೂರು ದಸರಾಕ್ಕೆ ವಿರುದ್ಧವಾಗಿ ಮಾಡುತ್ತಿದ್ದೇವೆ ಎಂದು ತಿಳಿದುಕೊಂಡಿದ್ದರೆ ಅದು ಮೂರ್ಖತನ. ಮಹಿಷಾಸುರನನ್ನು ರಾಕ್ಷಸನನ್ನಾಗಿ ಬಿಂಬಿಸಿದ್ದು ಸರಿಯಲ್ಲ. ಮೈಸೂರಿನ ದೊರೆ. ಮೈಸೂರಿನ ಜನರನ್ನು ರಕ್ಷಣೆ ಮಾಡಿದವನು. ಮೈಸೂರು ಅಂತ ಹೆಸರು ಬರಲು ಕೂಡ ಅವನೇ ಕಾರಣ. ಪುರಾಣದ ಕಥೆಯಲ್ಲಿ ರಾಕ್ಷಸನಾಗಿ ಬಿಂಬಿಸಿರುವುದು ತಪ್ಪು ಎಂದರು.
ಮಹಿಷ ದಸರಾ ಆಚರಣಾ ಸಮಿತಿಯ ಪ್ರೊ.ಮಹೇಶ್ ಚಂದ್ರಗುರು, ಪ್ರೊ.ಕೆ.ಎಸ್.ಭಗವಾನ್ ಇನ್ನಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *