ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ: ಆರೋಪಿಗಳ ಬಂಧನ

ಯಾದಗಿರಿ: ಕಳೆದ 8-9 ತಿಂಗಳ ಹಿಂದೆ ಶಹಾಪುರ ನಗರ ಹೊರವಲಯದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಂತಹ ಅಮಾನೀಯ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದರೂ ಶೀರ್ಘದಲ್ಲಿ ಕಾರ್ಯಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ನಿಂಗರಾಜ್ ಭೀಮರಾಯ ಬೇವಿನಹಳ್ಳಿ, ಅಯ್ಯಪ್ಪ ಸಂಗಪ್ಪ ನಾಟೆಕಾರ್, ಭಿಮಾಶಂಕರ್ ಮಲ್ಲಯ್ಯ, ಶರಣು ಮಹಾದೇವಪ್ಪ ನಾಯಕೋಡಿ ಅವರಾಗಿದ್ದಾರೆ.

ಹಲ್ಲೆ ನಡೆದಿರುವ ಬಗ್ಗೆ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಬಗ್ಗೆ ಶಹಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಗೆ ಮೂರು ತಂಡಗಳನ್ನು ರಚಿಸಿ ಕಾರ್ಯಚಾರಣೆಗೆ ಮುಂದಾದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ.ವೇದಮೂರ್ತಿ, ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ನೀಡಿದರು.

ಆರೋಪಿಗಳು ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಅವರ ಮೇಲೆ ಹಲ್ಲಿ ಮಾಡಿದ್ದಾರೆ. ‘ಕಾಲಿಗೆ ಬೀಳುತ್ತೇನೆ ಅಣ್ಣ ಹೊಡೆಯಬೇಡಿ’ ಎಂದು ಮಹಿಳೆ ಅಂಗಲಾಚುತ್ತಿರುವ ದೃಶ್ಯಗಳು ಅದರಲ್ಲಿ ಸೆರೆಯಾಗಿದ್ದವು. ವಾಹನದ ಹೆಡ್ ಲೈಟ್, ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹಲ್ಲೆ ಮಾಡಲಾಗಿದೆ.  ಈ ಘಟನೆಯು 8-9 ತಿಂಗಳ ಹಿಂದೆ ನಡೆದಿತ್ತು ಎನ್ನಲಾಗಿದೆ.

ಆರೋಪಿಗಳ ವಿರುದ್ಧ ಶಹಪುರ ಠಾಣಾಯಲ್ಲಿ ನಂ.212/2021 ಕಲಂ 354(ಬಿ), 366, 394,376(ಡಿ), 504,506 ಆರ್‌/ಡಬ್ಲ್ಯೂ  34 ಐಪಿಸಿ ಮತ್ತು 3(1)(ಡಬ್ಲ್ಯೂ), 3(2)(ವಿ) ಎಸ್‌ಸಿ/ಎಸ್‌ಟಿ ಪಿಎ ಕಾಯಿದೆ ಅಡಿ ಪ್ರಕಾರ ಪ್ರಕರಣ ದಾಖಲಾಗಿದೆ. ‘ಆರೋಪಿಗಳನ್ನು  ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ’ ಎಂದು‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ತಿಳಿಸಿದ್ದಾರೆ.

ಹಲ್ಲೆಗೊಳಗಾದ ಮಹಿಳೆಯನ್ನು ಹುಡುಕಿಲಾಗುತ್ತಿದೆ. ಮಹಿಳೆ ಸಿಗದಿದ್ದರೂ ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ತನಿಖೆ ನಡೆಸಲಾಗುವುದು. ಆರೋಪಿಗಳ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *