ಮಹಾತ್ಮ ಗಾಂಧಿ ಹುತಾತ್ಮ ದಿನದ ಅಂಗವಾಗಿ ಸೌಹಾರ್ಧ ನಡಿಗೆ

ಮೈಸೂರು:  ಗಾಂಧೀಜಿ ಹುತಾತ್ಮ ದಿನದ ಅಂಗವಾಗಿ ಇಂದು(ಜನವರಿ 30) ಮೈಸೂರಿನಲ್ಲಿ ಸೌಹಾರ್ದ ಕರ್ನಾಟಕದ ವತಿಯಿಂದ ಸಹಬಾಳ್ವೆಗಾಗಿ ಸೌಹಾರ್ದ ನಡೆ ಕಾರ್ಯಕ್ರಮ ನಡೆಯಿತು. ಅರಮನೆ ಕೋಟೆ ಆಂಜನೇಯ ದೇವಸ್ಥಾನದಿಂದ ಅಶೋಕ ರಸ್ತೆಯ ಆಜಾಮ್ ಮಸೀದಿ ಮೂಲಕ ತೆರಳಿ ಸೆಂಟ್ ಫಿಲೋಮಿನಾ ಚರ್ಚ್ ಮುಂಭಾಗದವರೆಗೆ ಸೌಹಾರ್ದ ನಡಿಗೆ ಹಮ್ಮಿಕೊಳ್ಳಲಾಗಿತ್ತು.

ಇದನ್ನು ಓದಿ: ಸೌಹಾರ್ದ ಕರ್ನಾಟಕ ವತಿಯಿಂದ ʻಸೌಹಾರ್ದ ಸಂಕ್ರಾಂತಿʼ ಆಚರಣೆ

ರಂಗಕರ್ಮಿ ಹೆಚ್‌. ಜನಾರ್ಧನ (ಜೆನ್ನಿ) ಸೌಹಾರ್ದ ಗೀತೆ ಹಾಡಿದರು. ಶ್ರೀಮತಿ ರಂಜಿತ ಸೂರ್ಯ ಸೌಹಾರ್ದ ಕವನ ವಾಚಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಶ್ರೀ ಬಸವಲಿಂಗ ಸ್ವಾಮೀಜಿ, ಡಾ ವಿ ಲಕ್ಷ್ಮೀನಾರಾಯಣ, ಎಚ್ ಆರ್ ಶೇಷಾದ್ರಿ, ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷ ದೇವಿ, ಎಂ ಎಫ್ ಕಲೀಮ್, ನೂರ್ ಮರ್ಚೆಂಟ್ ಮುಂತಾದವರು ಸೌಹಾರ್ದ ನಡಿಗೆ ಉದ್ದೇಶಿಸಿ ಮಾತನಾಡಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಮುಖಂಡರಾದ ಲ ಜಗನ್ನಾಥ್, ಕೆ ಬಸವರಾಜ್ , ರತಿರಾವ್, ಜವರಯ್ಯ, ಹೊಸಕೋಟೆ ಬಸವರಾಜ್, ಶಂಭುಲಿಂಗ ಸ್ವಾಮಿ, ರಂಗಕರ್ಮಿ ಸಿ ಬಸವಲಿಂಗಯ್ಯ, ಸುಶೀಲ, ನಂಜರಾಜೇ ಅರಸು, ಪತ್ರಕರ್ತ ಟಿ ಗುರುರಾಜ್, ಕೆ ಎಸ್ ಭಗವಾನ್, ಶಬ್ಬೀರ್ ಮುಸ್ತಫ, ಕಲ್ಲಳ್ಳಿ ಕುಮಾರ್, ಶಂಭಯ್ಯ, ಜಯರಾಮ್, ಉಗ್ರ ನರಸಿಂಹೇಗೌಡ, ನಾ ದಿವಾಕರ, ಪಂಡಿತಾರಾಧ್ಯ, ನೆಲೆಗೋಪಾಲಕೃಷ್ಣ, ಸತೀಶ್, ಕುಮಾರಸ್ವಾಮಿ, ರಾಜೇಂದ್ರ, ಭರತ್ ರಾಜ್, ದೇವಪ್ಪ ನಾಯಕ, ಚಿಕ್ಕಜವರಯ್ಯ, ವಿಜಯ್ ಕುಮಾರ್, ರಂಜಿತಾ, ರಮಣಿ, ಕಾಳಚನ್ನೇಗೌಡ, ಲಿಖಿತ, ಅಭಿ, ಪುಟ್ಟಮಲ್ಲಯ್ಯ ಪುರುಷೋತ್ತಮ, ಲತಾ ಬಿದ್ದಪ್ಪ, ಮರಂಕಯ್ಯ, ಚೋರನಹಳ್ಳಿ, ಶಿವಣ್ಣ, ಮೈಕಲ್, ಸೈಯದ್ ಮುಬಾರಕ್, ನವೀದ್ ಪಾಷಾ ಮುಂತಾದವರು ಭಾಗವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *