ಮುಂಬೈ: ಮಹಾರಾಷ್ಟ್ರದ ಪುಣೆಯ ಸಾಸೂನ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಶಾಸಕ ಸುನೀಲ್ ಕಾಂಬ್ಳೆ ಶುಕ್ರವಾರ ಪೊಲೀಸ್ ಅಧಿಕಾರಿಯೊಬ್ಬರಿಗೆ ಥಳಿಸಿರುವ ಘಟನೆ ವರದಿಯಾಗಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಸುನಿಲ್ ಕುಮಾರ್ ವೇದಿಕೆಯಿಂದ ಇಳಿಯುವ ವೇಳೆ ಬಳಿಯಿದ್ದ ಅಧಿಕಾರಿಯ ಕಪಾಳಕ್ಕೆ ಹೊಡೆಯುತ್ತಿರುವುದು ದಾಖಲಾಗಿದೆ.
ಘಟನೆ ನಡೆದಾಗ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ವೇದಿಕೆಯಲ್ಲಿದ್ದರು ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಮಹಿಳಾ ಉದ್ಯೋಗಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಕೂಡಾ ಇದೇ ಶಾಸಕ ಇತ್ತೀಚೆಗೆ ವಿವಾದಕ್ಕೆ ಸಿಲುಕಿದ್ದರು.
ಇದನ್ನೂ ಓದಿ: ತುಳುನಾಡಿನ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ(88) ಇನ್ನಿಲ್ಲ
ವಿಡಿಯೊ ವೈರಲ್ ಆಗುತ್ತಿರುವ ಮಧ್ಯೆಯೆ, ತಾನು ಪೊಲೀಸ್ ಸಿಬ್ಬಂದಿಗೆ ಥಳಿಸಿರುವುದನ್ನು ಶಾಸಕ ಸುನಿಲ್ ಕುಮಾರ್ ನಿರಾಕರಿಸಿದ್ದಾರೆ. ತಾನು ವೇದಿಕೆಯಿಂದ ಇಳಿಯುತ್ತಿದ್ದಾಗ ಪೋಲೀಸ್ ತನ್ನ ಮೇಲೆ ಬಿದ್ದಿದ್ದರಿಂದ ನಾನು ಅವರನ್ನು ತಳ್ಳಿದ್ದಾಗಿ ಅವರು ಹೇಳಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಗುರುವಾರ ನಡೆದ ಮತ್ತೊಂದು ಘಟನೆಯಲ್ಲಿ, ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನಾ (ಶಿಂಧೆ ಬಣ) ನಾಯಕ ಅಬ್ದುಲ್ ಸತ್ತಾರ್ ಅವರು ತಮ್ಮ ಹುಟ್ಟುಹಬ್ಬದಂದು ಆಯೋಜಿಸಲಾದ ನೃತ್ಯ ಕಾರ್ಯಕ್ರಮದ ವೇಳೆ ಅಶಿಸ್ತು ತೋರಿದ ಪ್ರೇಕ್ಷಕರ “ಮೂಳೆ ಮುರಿಯುವಂತೆ” ಪೊಲೀಸರನ್ನು ಕೇಳುವ ವೀಡಿಯೊ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ.
BJP MLA Sunil Kamble slapped a Maharashtra Police officer during a public event.
Police officers work day and night to deserve this? pic.twitter.com/N5uZjhwjtU
— Shantanu (@shaandelhite) January 5, 2024
ಬುಧವಾರ ರಾತ್ರಿ ಜನಪ್ರಿಯ ಲಾವಣಿ ನರ್ತಕಿ ಗೌತಮಿ ಪಾಟೀಲ್ ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈರಲ್ ವೀಡಿಯೊ ಕ್ಲಿಪ್‌ನಲ್ಲಿ, ಸತ್ತಾರ್ ವೇದಿಕೆಯಿಂದ ಮೈಕ್ರೊಫೋನ್ ಬಳಸಿ ಪೊಲೀಸರಿಗೆ ಸೂಚನೆಗಳನ್ನು ನೀಡುವುದನ್ನು ಕಾಣಬಹುದು. ಆರಂಭದಲ್ಲಿ, ಅವರು ಪ್ರೇಕ್ಷಕರನ್ನು ಕುಳಿತುಕೊಳ್ಳುವಂತೆ ಒತ್ತಾಯಿಸುವುದನ್ನು ಕಾಣಬಹುದು, ಆದರೆ, ಪರಿಸ್ಥಿತಿ ಸುಧಾರಿಸಲು ವಿಫಲವಾದ ಕಾರಣ, ಅವರು ಲಾಠಿಯಿಂದ ಹೊಡೆಯಲು ಪ್ರಾರಂಭಿಸಲು ಪೊಲೀಸರಿಗೆ ಸೂಚಿಸಿದ್ದಾರೆ.
ವಿಡಿಯೊ ನೋಡಿ: ಮುಖ್ಯ ನ್ಯಾಯಮೂರ್ತಿಗಳ ನುಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ನಡೆಯಲ್ಲಿ ರಿವರ್ಸ್ ಯಾಕೆ ಹೀಗೆ?