ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿಪಡಿಸಿ ಪ್ರಕಟಣೆಯನ್ನು ಹೊರಡಿಸಿದೆ.
ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ 10 ಮಾಹನಗರ ಪಾಲಿಕೆಗಳ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡಿ ಇಂದು(ಆಗಸ್ಟ್ 24) ಆದೇಶ ಹೊರಡಿಸಲಾಗಿದೆ.
ಮೇಯರ್ ಸ್ಥಾನ
- ಬಳ್ಳಾರಿ – ಒಬಿಸಿ (ಮಹಿಳೆ)
- ಬೆಳಗಾವಿ – ಸಾಮಾನ್ಯ
- ದಾವಣಗೆರೆ – ಸಾಮಾನ್ಯ (ಮಹಿಳೆ)
- ಹುಬ್ಬಳ್ಳಿ-ಧಾರವಾಡ – ಸಾಮಾನ್ಯ (ಮಹಿಳೆ)
- ಕಲಬುರಗಿ – ಎಸ್ಸಿ
- ಮಂಗಳೂರು – ಸಾಮಾನ್ಯ
- ಮೈಸೂರು – ಸಾಮಾನ್ಯ
- ಶಿವಮೊಗ್ಗ – ಒಬಿಸಿ
- ತುಮಕೂರು – ಎಸ್ಸಿ (ಮಹಿಳೆ)
- ವಿಜಯಪುರ – ಎಸ್ಟಿ
ಉಪ ಮೇಯರ್ ಸ್ಥಾನ
- ಬಳ್ಳಾರಿ – ಸಾಮಾನ್ಯ (ಮಹಿಳೆ)
- ಬೆಳಗಾವಿ – ಎಸ್ಸಿ (ಮಹಿಳೆ)
- ದಾವಣಗೆರೆ – ಒಬಿಸಿ (ಮಹಿಳೆ)
- ಹುಬ್ಬಳ್ಳಿ-ಧಾರವಾಡ – ಸಾಮಾನ್ಯ
- ಕಲಬುರಗಿ – ಸಾಮಾನ್ಯ
- ಮಂಗಳೂರು – ಸಾಮಾನ್ಯ (ಮಹಿಳೆ)
- ಮೈಸೂರು – ಒಬಿಸಿ (ಮಹಿಳೆ)
- ಶಿವಮೊಗ್ಗ – ಸಾಮಾನ್ಯ (ಮಹಿಳೆ)
- ತುಮಕೂರು – ಒಬಿಸಿ
- ವಿಜಯಪುರ – ಒಬಿಸಿ