ನವದೆಹಲಿ : ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ಮತೀಯ ಹಿಂಸಾಚಾರ ಪ್ರಕರಣಗಳ ತನಿಖೆಯ ಭಾಗವಾಗಿ ದಿಲ್ಲಿ ಪೊಲೀಸರ ವಿಶೇಷ ಸೆಲ್ ಅಧಿಕಾರಿಗಳು ಗುರುವಾರ ವಕೀಲ ಮಹಮೂದ್ ಪ್ರಾಚ್ ರವರ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಇವರು ಆಪಾದಿತರ ಪರ ವಕೀಲರಾಗಿ ಕೆಲಸವನ್ನು ಮಾಡುತ್ತದ್ದರು.
ತಮ್ಮ ಕಚೇರಿಯ ಮೇಲೆ ದಾಳಿ ನಡೆಸಿ ತಮ್ಮ ಕಂಪ್ಯೂಟರ್, ಲ್ಯಾಪ್ಟಾಪ್ ವಶಪಡಿಸಿಕೊಂಡಿರುವುದು ಆದೇಶದ ಉಲ್ಲಂಘನೆಯಾಗಿದೆ ಎಂದು ಪ್ರಾಚ್ ಆರೊಪಿಸಿದ್ದಾರೆ.
ದೆಹಲಿಯ ಹಿರಿಯ ನ್ಯಾಯವಾದಿ ಮತ್ತು ದೆಹಲಿ ಗಲಭೆಗಳ ಆರೋಪಿಗಳ ಪರ ವಾದಿಸುತ್ತಿರುವ ವಕೀಲರಾದ ಮಹಮೂದ್ ಪ್ರಾಚಾ ಅವರ ವಕೀಲರ ಕಛೇರಿ ಮೇಲೆ ದೆಹಲಿಪೋಲಿಸರು ದಾಳಿ ಮಾಡಿ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ವಶಕ್ಕೆ ಪಡೆದಿರುವುದನ್ನು ಅಖಿಲ ಭಾರತೀಯ ವಕೀಲರ ಒಕ್ಕೂಟ ( AILU) ತೀವ್ರವಾಗಿ ಖಂಡಿಸುತ್ತದೆ, ಆರೋಪಿಗಳನ್ನು ಪ್ರತಿನಿಧಿಸುವ ವಕೀಲರನ್ನೇ ಆರೋಪಿಗಳಾಗಿಸುವ ದೆಹಲಿ ಪೋಲಿಸರ ಕ್ರಮವನ್ನು (AILU) ತೀವ್ರವಾಗಿ ವಿರೋಧಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ಕುಮಾರ ತಿಳಿಸಿದ್ದಾರೆ.