“ದಲಿತ-ಎಡ ಚಳುವಳಿಗಳ ಐಕ್ಯತೆಗೆ ‘ಮಹಾಡ್’ ಪಾಠಗಳು” : ಸಂವಾದ

ಭಾರತದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆಗಳು ಒಂದರಲ್ಲೊಂದು ಬೆರೆತು ಸಿಕ್ಕು ಸಿಕ್ಕಾಗಿರುವುದು ವಾಸ್ತವ. ವೇಗವಾಗಿ ಬೆಳೆಯುತ್ತಿರುವ ಬಂಡವಾಳಶಾಹಿ ಜಾಗತೀಕರಣ ಅದನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿದೆ. ಜಾತಿ-ಅಸ್ಪೃಶ್ಯತೆ ವ್ಯವಸ್ಥೆ ಆಧಾರಿತ ಸಾಮಾಜಿಕ ದಮನ ಮತ್ತು ವರ್ಗ ಆಧಾರಿತ ಆರ್ಥಿಕ ಶೋಷಣೆಗಳ ವಿರುದ್ಧ ಚಳುವಳಿ  ಜೊತೆ ಜೊತೆಯಾಗಿ ಹೋಗುವ ಅನಿವಾರ್ಯತೆಯಿದೆ. ಇಲ್ಲದಿದ್ದರೆ ಎರಡೂ ವಿಫಲವಾಗುವ ಪರಿಸ್ಥಿತಿಯಿದೆ. ಇಂತಹ ಐಕ್ಯ ಚಳುವಳಿಯ ಇಂದಿನ ಅಗತ್ಯ.  ಇಂತಹ ಐಕ್ಯ ಚಳುವಳಿಯನ್ನು ಸಾಧ್ಯ ಮಾಡುವತ್ತ ಏನು ಮಾಡಬಹುದು?. ಈ ವಿಷಯಗಳ ಸುತ್ತ ಸಂವಾದ ನಡೆಸಬಹುದು ಎಂದು ಅವರು ಸೂಚಿಸಿದರು.

ವರದಿ : ನಾಗರಾಜ ಎನ್.

ಎರಡು ಮಹಾಡ್ ಪುಸ್ತಕಗಳ ಬಿಡುಗಡೆ ಜೊತೆಗೆ “’ಮಹಾಡ್’ ಅರಿವು ಮತ್ತು ಜಾತಿ-ಅಸ್ಪೃಶ್ಯತೆ ವಿನಾಶಕ್ಕಾಗಿ ಚಳುವಳಿ’ ಎಂಬ ವಿಚಾರ ಸಂಕಿರಣವನ್ನೂ ಹಮ್ಮಿಕೊಳ್ಳಲಾಗಿತ್ತು. ಈ ವಿಚಾರ ಸಂಕಿರಣದ ನಿರೂಪಣೆ ಮಾಡಿದ ನಾಗರಾಜ ಎನ್. ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮಹಾಡ್ ಪುಸ್ತಕಗಳಲ್ಲಿ ಮೂಡಿ ಬಂದಿರುವ ಒಟ್ಟು “ಮಹಾಡ್ ಅರಿವು” ಜಾತಿ-ಅಸ್ಪೃಶ್ಯತೆಯ ವಿನಾಶದತ್ತ ಚಳುವಳಿಗೆ ಹೊಸ ಸೂರ್ತಿ ದಿಕ್ಕು ದೆಸೆ ಕೊಡಬಲ್ಲದು ಎಂದರು. ಇಂತಹ ಚಿಂತನ ಮಂಥನಕ್ಕೆ ಸಾಕಷ್ಟು ಸಮಯ ಬೇಕು. ಇಂದಿನ ಅಸಹಜ ಸ್ಥಿತಿಯಲ್ಲಿ ಅದು ಕಷ್ಟ ಸಾಧ್ಯವಾದರೂ, ಒಂದು ವಿಚಾರ ಸಂಕಿರಣ ಅನಿವಾರ್ಯವೆಂದು ಭಾವಿಸಿ ಅದನ್ನು ಸಂಘಟಿಸಲಾಗಿದೆ. ಜಾತಿ-ಅಸ್ಪೃಶ್ಯತೆಯ ವಿನಾಶದತ್ತ ಚಳುವಳಿಗೆ ಸಂಬಂಧಿತ ಪ್ರಮುಖ ಅಗತ್ಯಗಳಾದ ಪ್ರಬಲ ದಲಿತ ಚಳುವಳಿ ಮತ್ತು ಎಡ-ದಲಿತ ಚಳುವಳಿಯ ಐಕ್ಯ ಕಾರ್ಯಾಚರಣೆ ಗಳ ಕುರಿತು ಎರಡು ಸಂವಾದಗಳನ್ನು ಏರ್ಪಡಿಸಲಾಗಿದೆ ಎಂದರು.

ಭಾರತದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆಗಳು ಒಂದರಲ್ಲೊಂದು ಬೆರೆತು ಸಿಕ್ಕು ಸಿಕ್ಕಾಗಿರುವುದು ವಾಸ್ತವ. ವೇಗವಾಗಿ ಬೆಳೆಯುತ್ತಿರುವ ಬಂಡವಾಳಶಾಹಿ ಜಾಗತೀಕರಣ ಅದನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿದೆ. ಜಾತಿ-ಅಸ್ಪೃಶ್ಯತೆ ವ್ಯವಸ್ಥೆ ಆಧಾರಿತ ಸಾಮಾಜಿಕ ದಮನ ಮತ್ತು ವರ್ಗ ಆಧಾರಿತ ಆರ್ಥಿಕ ಶೋಷಣೆಗಳ ವಿರುದ್ಧ ಚಳುವಳಿ  ಜೊತೆ ಜೊತೆಯಾಗಿ ಹೋಗುವ ಅನಿವಾರ್ಯತೆಯಿದೆ. ಇಲ್ಲದಿದ್ದರೆ ಎರಡೂ ವಿಫಲವಾಗುವ ಪರಿಸ್ಥಿತಿಯಿದೆ. ಇಂತಹ ಐಕ್ಯ ಚಳುವಳಿಯ ಇಂದಿನ ಅಗತ್ಯ. ಎಂದು “ದಲಿತಎಡ ಚಳುವಳಿಗಳ ಐಕ್ಯತೆಗೆ ‘ಮಹಾಡ್’ ಪಾಠಗಳು”  ಎಂಬ ಎರಡನೆಯ ಸಂವಾದಕ್ಕೆ ಬಂದ ನಾಯಕರನ್ನು ಪರಿಚಯಯಿಸುತ್ತಾ ಪ್ರಾಸ್ತಾವಿಕವಾಗಿ  ನಾಗರಾಜ ಎನ್. ಹೇಳಿದರು.

ಇಂತಹ ಐಕ್ಯ ಚಳುವಳಿಯನ್ನು ಸಾಧ್ಯ ಮಾಡುವತ್ತ ಏನು ಮಾಡಬಹುದು?.ಈ ನಿಟ್ಟಿನಲ್ಲಿ ಆ ಮೇಲೆ ದಲಿತ ಮತ್ತು ಎಡ ಚಳುವಳಿಯ ನಾಯಕರಾಗಿ ಬೆಳೆದ ಅಂಬೇಡ್ಕರ್  ಮತ್ತು ಮೋರೆ ಕೂಡಿ ಕಟ್ಟಿದ ಮಹಾಡ ಚಳುವಳಿಯ ಪಾಠಗಳೇನು ? ಈ ಕೆಲವು ವಿಷಯಗಳ ಸುತ್ತ ಸಂವಾದ ನಡೆಸಬಹುದು ಎಂದು ಅವರು ಸೂಚಿಸಿದರು.

* ಜಾತಿ-ಅಸ್ಪೃಶ್ಯತೆಯ ವಿಶ್ಲೇಷಣೆಯಲ್ಲಿ ಸಮಾನ ಅಂಶಗಳೇನು? ಭಿನ್ನತೆಗಳೇನು?

* . ಜಾತಿ-ಅಸ್ಪೃಶ್ಯತೆ ವ್ಯವಸ್ಥೆ ಆಧಾರಿತ ಸಾಮಾಜಿಕ ದಮನ ಮತ್ತು ವರ್ಗ ಆಧಾರಿತ ಆರ್ಥಿಕ ಶೋಷಣೆಗಳ ವಿರುದ್ಧ ಐಕ್ಯ ಹೋರಾಟಗಳನ್ನು ಬೆಸೆಯುವ ಬಗೆ

* ಅಸ್ಪೃಶ್ಯತೆಯ ಅಗಾಧ ಭೀಕರ ರೂಪಗಳ ವಿರುದ್ಧ ಅವಿರತ ದಾಳಿ ಮಾಡುವ ಐಕ್ಯ ಚಳುವಳಿಯ ಸಾಧ್ಯತೆಗಳು

ನಾವು ಅಂಬೇಡ್ಕರ್ ಅವರ ಪ್ರಜಾಸತ್ತಾತ್ಮಕ ಗಳ ಹೋರಾಟಗಳ ಹೆಮ್ಮೆಯ ವಾರಸುದಾರರೆಂದು ಅಭಿಮಾನದಿಂದ ಕಮ್ಯುನಿಸ್ಟ್ ಪಾರ್ಟಿಗಳು ಘೋಷಿಸ ಬೇಕು :  ಡಾ.ರತಿ ರಾವ್

ಮಹಾಡ್ ಸತ್ಯಾಗ್ರಹದ ಈ ಪುಸ್ತಕ ಅದ್ಭುತ ವಾಗಿ ಮೂಡಿ ಬಂದಿದೆ.   ಡಾ.ಬಿ.ಆರ್.ಅಂಬೇಡ್ಕರ್ ರವರು ದೂರ ದೃಷ್ಟಿ ಯ ಮಹಾ ನಾಯಕರು, ಸಾವಯವ ಬುದ್ದಿಜೀವಿಗಳು. ಸ್ವಾತಂತ್ರ್ಯ ಚಳುವಳಿಯಲ್ಲಿ ಸಾಮಾಜಿಕ ಆಯಾಮಳಿಗೆ ಮಹತ್ವ ನೀಡಿದ ನಿರ್ದಿಷ್ಟವಾದಿಗಳಾಗಿದ್ದದರು.  ಪೆರಿಯಾರ್,  ನಾರಯಾಣ ಗುರು, ಜೋತಿ ಬಾ ಪುಲೆ ಯಂಥವರಿಂದ ಸ್ಪೂರ್ತಿ ಪಡೆದವರು. ಅಂಬೇಡ್ಕರ್ ರವರನ್ನು ಒಬ್ಬ ಜಾತಿಯ ನಾಯಕನೆಂದು ಹೇಳುವುದು ಸರಿಯಲ್ಲ.  ಅವರೊಬ್ಬ ರಾಷ್ಟದ ನಾಯಕರು. ಅಸ್ಪೃಶ್ಯತೆಯ ಅವಮಾನ ವನ್ನು ಸ್ವತಃ ಅನುಭವಿಸಿದವರು ಎಂದವರು ಅಖಿಲ ಭಾರತ ಪ್ರಗತಿಶೀಲ ಮಹಿಳಾ ಸಂಘಟನೆಯ (ಎ.ಐ.ಪಿ.ಡಬ್ಲ್ಯೂ.ಎ) ರಾಷ್ಟ್ರೀಯ ಅಧ್ಯಕ್ಷರಾಗಿರುವ ಡಾ. ರತಿ ರಾವ್.

 

ದಲಿತ – ಎಡ ಚಳುವಳಿ ಯ ಐಕ್ಯತೆ ಬಗ್ಗೆ ಚರ್ಚಿಸುವಾಗ, ಕೆಲವು ಪ್ರಶ್ನೆಗಳು ನಮಗೆ ಕಾಡುತ್ತವೆ . ಜಾತಿಯ ಹೋರಾಟಗಳು ಜಾತಿಪ್ರಜ್ಙೆಯನ್ನು ಮೀರ ಬಲವೇ ?  ಜಾತಿ ಎಂಬುದು  ಬ್ರಾಹ್ಮಣವಾದ ಮತ್ತು ಹಿಂದುತ್ವ ರಾಷ್ಟ್ರದ ಪರಿಕಲ್ಪನೆ ಯನ್ನು ಪೋಷಿಸುತ್ತದೆ.  ಬ್ರಾಹ್ಮಣ ವಾದ ವೆಂಬುದು ಒಂದು ಸಾಮಾಜಿಕ ವ್ಯವಸ್ಥೆ ಮತ್ತು ಸಿದ್ದಾಂತ.  ಹೀಗಾಗಿ, ಬ್ರಾಹ್ಮಣ ವಾದ ಪ್ರಜಾಸತ್ತಾತ್ಮಕ ವ್ಯವಸ್ಥೆ ಯನ್ನು ಒಪ್ಪುವುದಿಲ್ಲ. ಇದು ಮನುವಾದದ ಅಸಮಾನತೆಯನ್ನು ಪೋಷಿಸುತ್ತದೆ. ಹಾಗಾಗಿ, ವರ್ಗ ಹೋರಾಟವು ಜಾತಿ ವಿರೋಧಿ ಹೋರಾಟಗಳನ್ನು ಸಹ ಒಳಗೊಳ್ಳಬೇಕು. ಹಾಗಾದರೆ ಮಾತ್ರ, ನಾಗರಿಕ ಹಕ್ಕು, ಮತ್ತು ಸಮಾನತೆಯನ್ನು ಸಾಧಿಸಲು ಸಾಧ್ಯವೆನಿಸುತ್ತದೆ.

ಕಮ್ಯುನಿಸ್ಟ್‌ ರು ಅಂಬೇಡ್ಕರ್ ರವರ ಬರಹಗಳು ಮತ್ತು ಚಿಂತನಗಳನ್ನು ಅಭ್ಯಾಸ ಮಾಡಬೇಕು, ಅದೇ ರೀತಿ ದಲಿತರು ಕಮ್ಯುನಿಸ್ಟ್ ರ ಸಾಹಿತ್ಯವನ್ನು ಸಾಮಾಜಿಕ ನ್ಯಾಯದ  ಹೋರಾಟಗಳನ್ನು ಅಭ್ಯಾಸ ಮಾಡಬೇಕು. ಈ ಎರಡು ಚಳುವಳಿಗಳನ್ನು ಬೆಸೆಯಲು ಈ ಅಭ್ಯಾಸ ಗಳ ಅವಶ್ಯಕತೆ ಇದೆ ಎಂದು ನನ್ನ ಭಾವನೆ.  ಅಂಬೇಡ್ಕರ್  ಬಗ್ಗೆ ಆರ್ ಬಿ ಮೋರೆಯವರು, ಅಪಾರವಾದ ಅಭಿಮಾನ ಮತ್ತು ವಿಶ್ವಾಸ ಹೊಂದಿದ್ದರು. ಹಾಗಾಗಿ, ಮಹಾಡ್ ಸತ್ಯಾಗ್ರಹ ಸಂಘಟಿಸಲು ಸ್ಪೂರ್ತಿ ಪಡೆದರು. ಮುಂದೆ ಕಮ್ಯುನಿಸ್ಟ್ ಆದರು.  ಶೋಷಿತ-ದಮನಿತ ವರ್ಗಗಳ ವಿಮೋಚನೆ ಯಾಗದೆ, ಶೋಷಣಾ ಮುಕ್ತ ಸಮಾಜ ಅಸಾಧ್ಯವೆಂಬುದು ಕಮ್ಯುನಿಸ್ಟ್ ಪ್ರಣಾಳಿಕೆಯ ಘೋಷಣೆ.  ಇದು ಜಾತಿ-ಅಸ್ಪೃಶ್ಯತೆಯನ್ನು ಹೋಗಲಾಡಿಸದೆ ಸಾಧ್ಯವಿಲ್ಲ. ಇವತ್ತಿನ ಸಂದರ್ಭದಲ್ಲಿ ಮನುವಾದಿಗಳು ಆಡಳಿತ ಹಿಡಿದಿದ್ದಾರೆ.  ಅವರನ್ನು ಹಿಮ್ಮೆಟ್ಟಿಸಲು ದಲಿತ-ಎಡ ಐಕ್ಯತೆಯ ಚಳುವಳಿ ಅತ್ಯಮೂಲ್ಯ ವಾದದ್ದು. ಈ ನಿಟ್ಟಿನಲ್ಲಿ ಮಹಾಡ್ ನ ಸತ್ಯಾಗ್ರಹ ಸ್ಪೂರ್ತಿ ಯಾಗಲಿ ಎಂದರು.

ವರ್ಗ ಹೋರಾಟ ಗಾರರು  ಜಾತಿಯ ಬಗ್ಗೆ ಪೂರ್ವಗ್ರಹ ದಿಂದ ಹೊರಬರಬೇಕು : ಮಾವಳ್ಳಿ ಶಂಕರ್

ಆರ್ಥಿಕ ಅಸಮಾನತೆಯ ವಿರುದ್ದದ ಹೋರಾಟವೆಂದರೆ  ವರ್ಗ ಹೋರಾಟ ವಾಗಿದೆ. ಇದನ್ನು ಸಾಮಾಜಿಕ ದಮನದ ದಲಿತ ಹೋರಾಟ ದೊಂದಿಗೆ ಬೆರೆಯುವಲ್ಲಿ ಹಿಂದೆ ಬಿದ್ದಿದೆ. ‌ ವರ್ಗಹೋರಾಟ ಕಾರ್ಮಿಕರ ಆರ್ಥಿಕ ಪ್ರಶ್ನೆಗಳಿಗೆ ಮಾತ್ರ ಸೀಮಿತ ವಾಗಿದೆ. ಜಾತಿ ದಮನದ ವಿರುದ್ದ ಈ ನಾಯಕತ್ವ ಪೂರ್ವಗ್ರಹದಿಂದ ಹೊರ ಬರಬೇಕಾಗಿದೆ. ಸಮ ಸಮಾಜದ ಹೋರಾಟದಲ್ಲಿ ಎಲ್ಲರನ್ನು ಸಮಾನತೆಯಿಂದ ಒಳಗೊಳ್ಳಬೇಕು. ನಾಯಕತ್ವದ ಪ್ರಶ್ನೆ ಸಹ ಪೂರ್ವಗ್ರಹಕ್ಕೆ ಸಿಕ್ಕಿ ಹಾಕಿಕೊಂಡಿದೆ ಎನ್ನಬಹದು. ಈ ದಿಸೆಯಲ್ಲಿ, ಇಂದಿನ ಕಮ್ಯುನಿಸ್ಟರು ಪ್ರಜ್ಞಾಪೂರ್ವಕ ವಾಗಿ ಮರು ಚಿಂತಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯ ರಾಜ್ಯ ಸಂಚಾಲಕರಾದ ಮಳವಳ್ಳಿ ಶಂಕರ್ ಸಂವಾದದಲ್ಲಿ ಹೇಳಿದರು.

ರಾಜೇಂದ್ರ ಚೆನ್ನಿಯವರು  ಹೇಳುವಂತೆ ಕಮ್ಯುನಿಸ್ಟರು ಅಂಬೇಡ್ಕರ್ ರ ಹೋರಾಟಗಳನ್ನು ವ್ಯೂಹಾತ್ಮಕಾಗಿ  ಮಾತ್ರ ನೋಡುವ ಬದಲು, ಮನುಸ್ಮೃತಿ ಆರಾಧಕರ ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಡಲು ಅಂಬೇಡ್ಕರ್ ನಡೆಸಿದ ಸಾಮಾಜಿಕ ಹೋರಾಟದ ಅನುಭವಗಳೊಂದಿಗೆ ಮರುಚಿಂತನೆ ಮಾಡಬೇಕು. ಹಾಗೆಯೇ ದಲಿತ ರೊಂದಿಗೆ ಅಂಬೇಡ್ಕರ್ ಹೋರಾಟವನ್ನು ಮುಂದುವರಿಸುವ ಜವಾಬ್ದಾರಿಯನ್ನು ಕಮ್ಯೂನಿಸ್ಟರು ಹೊರಬೇಕು ಎಂದರು.

ಈ ರೀತಿಯ ಐಕ್ಯತೆಯನ್ನು  ದಲಿತ ಚಳುವಳಿ ಗಂಭೀರವಾಗಿ ಪರಿಗಣಿಸಿದೆ ಎಂದು ಮಾವಳ್ಳಿ  ಶಂಕರ್ ಹೇಳಿದರು. ಜಾತಿ ಮತ್ತು ವರ್ಗಗಳು ಬೇರೆಯಲ್ಲ.‌  ಒಂದಕ್ಕೊಂದು ಬೆರೆತು ಕೊಂಡಿವೆ.  ಅವುಗಳನ್ನು ನಾವು ಚಳುವಳಿಗಾರರು ಬೇರ್ಪಡಿಸಿದ್ದೇವೆ‌.  ಇದಕ್ಕೆ ಸ್ವಾತಂತ್ರ್ಯ ನಂತರದ ರಾಜಕೀಯವು ಕಾರಣವಾಗಿದೆ.

ಎನ್.ಸಿ ಆರ್. ಬಿ ವರದಿಯ ಪ್ರಕಾರ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಇದು ಭಾರತದ ಜಾತಿ ವ್ಯವಸ್ಥೆಯು ಆಳವಾದ ಬೇರುಗಳನ್ನು ಹೊಂದಿರುವುದು ಮತ್ತು ಅದರ ಕಠೋರತೆಯನ್ನು ಎತ್ತಿ ತೋರಿಸುತ್ತದೆ. ಸಾಮಾಜಿಕ ಪರಿಸ್ಥಿತಿ ಬದಲಾವಣೆ ಆಗಿಲ್ಲ ಎಂಬುದಕ್ಕೆ ದೌರ್ಜನ್ಯ ಗಳ ಹೆಚ್ಚಳ ಸಾಕ್ಷಿಯಾಗಿದೆ.  ಸ್ವತಂತ್ರ ಭಾರತದ ಏಳು ದಶಕಗಳ ಮತ್ತು ಮಹಾಡ್ ಸತ್ಯಾಗ್ರಹ ದ ಒಂಬತ್ತು ದಶಕಗಳ ನಂತರವೂ,  ಅಸಮಾನತೆಯ ನಿವಾರಣೆ ಮತ್ತು ಸಾಮಾಜಿಕ ಬದಲಾವಣೆ ಶೂನ್ಯವೆಂದೇ ನನ್ನ ಭಾವನೆ.  ಅಸ್ಪೃಶ್ಯತೆ ಪ್ರೋತ್ಸಾಹಿಸುವ ವಿಕೃತ ಮನಸ್ಸುಗಳು ಈ ವಿಚಾರದಲ್ಲಿ ಬದಲಾವಣೆ ಬಯಸುತ್ತಿಲ್ಲ.  ಬದಲಿಗೆ ಮಾನವ ಹಕ್ಕುಗಳ ದಮನವನ್ನು ಹೆಚ್ಚುಗೊಳಿಸುತ್ತಿದ್ದಾರೆ.

ಭಾರತದ ಸಂದರ್ಭ ದಲ್ಲಿ, ಅಂಬೇಡ್ಕರ್ ಅವರು ಪ್ರಮುಖವಾಗಿ ಗುರುತಿಸಿದ್ದು, ಬ್ರಾಹ್ಮಣವಾದ ಮತ್ತು ಬಂಡವಾಳವಾದಗಳ ವಿರುದ್ದ ಬಲಿಷ್ಟ ಹೋರಾಟ ನಡೆಸಬೇಕು ಎಂದು. ಆ ನಿಟ್ಟಿನಲ್ಲಿ ಮಹಾಡ್ ಸತ್ಯಾಗ್ರಹ ಸ್ಪೂರ್ತಿ ಯಾಗಲಿ. ದಲಿತ ಎಡ ಹೋರಾಟಗಳು ಸಮ ಸಮಾಜದ ನಿರ್ಮಾಣಕ್ಕಾಗಿ ಐಕ್ಯತೆಯಿಂದ ಹೋರಾಟ ನಡೆಸಿರುವ ದಿನಗಳನ್ನು ಹಿಂದೆಯೇ ನೋಡಿದ್ದೇವೆ. ಆ ದಿನಗಳು ಮರುಕಳಿಸಲಿ. ನಾವೆಲ್ಲಾ ಒಂದಾಗಿ ಹೋರಾಟ ನಡೆಸುವುದು ಅನಿವಾರ್ಯವೆಂಬುದು, ಮಹಾಡ್ ಚಳುವಳಿಯಿಂದ ನಾವು ಕಲಿಯ ಬೇಕಾದ ಪಾಠವಾಗಿದೆ ಎಂದರು.

ಬಲಿಷ್ಠ ದಲಿತ-ಎಡ ಐಕ್ಯ  ಚಳುವಳಿಯೇ ಮಹಾಡ್ ನಿಂದ ಕಲಿಯ ಬೇಕಾದ ಪಾಠ : ಗೋಪಾಲಕೃಷ್ಣ ಅರಳಹಳ್ಳಿ

ಆರ್.ಬಿ.ಮೋರೆಯವರ ಮಹಾಡ್ ಅನುಭವದ 33 ಪುಟಗಳ ಬರವಣಿಗೆಯನ್ನು ಮೂಲವಾಗಿಟ್ಟು ಕೊಂಡು, ಆನಂದ ತೇಲ್ತುಂಬ್ಡೆ ಯವರು, ಮುನ್ನಡಿ, ಹಿನ್ನುಡಿಯಲ್ಲಿನ ವಿವರಗಳು, ವಿಶ್ಲೇಷಣೆ ಗಳು ಅದ್ಬುತ.  ಅನುವಾದಕ ಪ್ರೊ ಅಬ್ದುಲ್ ರಹಮಾನ್ ಪಾಷ, ಅರ್ಥಪೂರ್ಣ ಮುನ್ನುಡಿ ಬರೆದ ಡಾ. ನಟರಾಜ್ ಹುಳಿಯಾರ್, ಪುಸ್ತಕ ಪ್ರಕಟಿಸಿದ ಕ್ರಿಯಾ ಮಾದ್ಯಮ ಎಲ್ಲರನ್ನೂ ಎಷ್ಟು ಅಭಿನಂದಿಸಿದರೂ ಕಡಿಮೆ ಎನಿಸುತ್ತದೆ.  ತಾತ್ವಿಕ ತೆ ಮತ್ತು ಇತಿಹಾಸ ಇವೆರಡರ ಒಂದು ಅದ್ಬುತವಾದ ಸಮ್ಮಿಲನ  ಈ ಕೃತಿ.   ಅದಕ್ಕಾಗಿ ನನ್ನ ತುಂಬು ಹೃದಯದ ಅಭಿನಂದನೆಗಳು ಎಂದವರು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿ ಅವರು.  ಹಾಗೆಯೇ,  ಕಳೆದ ನಾಲ್ಕು ದಶಕಗಳಿಂದ ದಲಿತ ಮತ್ತು ಎಡ ಹೋರಾಟಗಳನ್ನು ಬೆಸೆಯುವ ಕನಸನ್ನು ಹೊತ್ತು ಇಂದಿಗೂ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿರುವ ಅವರು ಪುಸ್ತಕ ಓದಿ ರೋಮಾಂಚಿತನಾಗಿದ್ದೇನೆ ಎಂದರು.

ಮಹಾಡ್ ಸತ್ಯಾಗ್ರಹ ಚಳುವಳಿಯ ಎರಡು ಸಮ್ಮೇಳನಗಳ ಪ್ರಧಾನ ಸಂಘಟಕರಾದ, ಆರ್.ಬಿ.ಮೋರೆಯವರು ನಾನು ಇಂತಹ ರಾಜಕೀಯ ಚಳುವಳಿಗೆ ಧುಮುಕುಲು ಪ್ರೇರಣೆ ಎಂದು ಸ್ವತಃ, ಅಂಬೇಡ್ಕರ್ ರವರೇ ಹೇಳಿದ್ದರು. ಇಲ್ಲಿ ನಾವು ಮಹಾಡ್ ನಿಂದ ತಿಳಿದುಕೊಳ್ಳಬೇಕಾದ ಒಳಸುಳಿವು ಇದೇ ಆಗಿದೆ.  ಈ ಚಳುವಳಿಯ ನಂತರದಲ್ಲಿ ‌ಮೋರೆಯವರು ವರ್ಗ ಪ್ರಶ್ನೆಗಳಿಗಾಗಿ ನಡೆಯುವ ಪ್ರಜಾಸತ್ತಾತ್ಮಕ ಚಳುವಳಿಯ ಭಾಗವಾದ, ಕಮ್ಯುನಿಸ್ಟ್ ಪಕ್ಷ ಸೇರಿದ್ದರು.  ಈ ಪುಸ್ತಕವನ್ನು ದಲಿತ ಹೋರಾಟಗಾರರು ಮಾತ್ರವಲ್ಲದೆ, ವರ್ಗ ಹೋರಾಟದಲ್ಲಿ ತೊಡಗಿಸಿಕೊಂಡಿರುವ ನಾಯಕರುಗಳು ಕಡ್ಡಾಯವಾಗಿ ಓದಲೇ ಬೇಕೆಂದರು. ದಲಿತ-ಎಡ ಚಳುವಳಿ ಐಕ್ಯತೆ ಯ ತಾತ್ವಿಕ ಮೂಲ ತಿಳಿದುಕೊಳ್ಳಲು ಈ ಪುಸ್ತಕದ  ಕಥನ ನೆರವಾಗುತ್ತದೆ ಎಂದರು.

ನಾಲ್ಕು ದಶಕಗಳ ಹಿಂದೆ, ದೇವರಾಯ ದುರ್ಗ ದಲ್ಲಿ ನಡೆದ ಐದು ದಿನಗಳ ದಲಿತ ತರಬೇತಿ ಶಿಬಿರದಲ್ಲಿ ದಲಿತ ಎಡ ಚಳುವಳಿಯನ್ಮು ಬೆಸೆಯಲು ಚರ್ಚೆ ನಡೆದಿತ್ತು. ಇಂದು  ನಾವು ಚರ್ಚಿಸುತ್ತಿರುವ ಎಡ ಚಳುವಳಿ ಯೊಂದಿಗೆ ದಲಿತ ಚಳುವಳಿಯ ಐಕ್ಯತೆ ಬೆಸೆಯುವ ನಿಟ್ಟಿನಲ್ಲಿ ಅಗತ್ಯವಿದ್ದ  ರಾಜಕೀಯ ತೀರ್ಮಾನ ಕ್ಕೆ ಬರಲು ಅಂದು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕೋಲಾರ ಜಿಲ್ಲೆಯ, ಮಾಲೂರಿನ ಅನುಸೂಯ ದೌರ್ಜನ್ಯ ಪ್ರಕರಣ, ನಾಗಶೆಟ್ಟಿ ಹಳ್ಳಿ ದೌರ್ಜನ್ಯ, ತುಮಕೂರಿನ ಚಿಕ್ಕತಿಮ್ಮಯ್ಯ ನ ಪ್ರಕರಣಗಳಲ್ಲಿ, ದಲಿತ ಚಳುವಳಿ ಹೊಸ ರೂಪ ಕಂಡು ಕೊಂಡಿತ್ತು. ಆದರೂ  ನಿರ್ಣಾಯಕ ಹಂತದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರದಿಂದ  ಎಡವಿದ್ದು, ಎಡ-ದಲಿತ ಐಕ್ಯತೆಗೆ ಮುಳುವಾಯಿತು. ಇದೀಗ, ಈ ಮೋರೆ ಮತ್ತು ತೇಲ್ತುಂಬ್ದೆ ಕೃತಿಗಳು ಹೊಸ ರೋಮಾಂಚನ ಮತ್ತು ರಚನಾತ್ಮಕತೆಯನ್ನು ತೆರೆದಿಟ್ಡಿವೆ.  ಈ ದಿಸೆಯಲ್ಲಿ ದಲಿತ-ಎಡ ಐಕ್ಯತೆ ಮತ್ತೆ ಬೆಸೆಯಲು ಸಿಕ್ಕಿರುವ ಅವಕಾಶವೆಂದುಕೊಂಡು ಪರಿಗಣಿಸಿ ಎಲ್ಲರೂ ಒಗ್ಗಟ್ಟಾಗಿ, ದಲಿತ-ಎಡ ಚಳುವಳಿಯನ್ನು ಮುಂದುವರಿಸೋಣ ಎಂದರು.

ಆ ನಿಟ್ಟಿನಲ್ಲಿ ವರ್ಗ ಹೋರಾಟದ ಮುಂಚೂಣಿಯಲ್ಲಿರುವ ಕಾರ್ಮಿಕ ವರ್ಗ, ಜಾತಿ ಕುರಿತಂತೆ ತನ್ನ ಮಡಿವಂತಿಕೆಯನ್ನು ಕಿತ್ತೆಸೆದು, ಜಾತಿ-ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಸಾಮಾಜಿಕ ನ್ಯಾಯ ಪರವಾದ ಹೋರಾಟದಲ್ಲಿ ಸಮ್ಮಿಲನಗೊಳ್ಳಬೇಕು. ಜೊತೆಗೆ, ದಲಿತ ಚಳುವಳಿಗಾರರು ಕೂಡಾ, ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸ ಬೇಕು. ಹಿಂದುತ್ವ ಪರಿಕಲ್ಪನೆಯ ಪ್ರಸ್ತುತ ರಾಜಕೀಯ ಆಡಳಿತವನ್ನು ಕಿತ್ತೆಸೆಯ ಬೇಕು. ಸಂವಿಧಾನದ ರಕ್ಷಣೆಯ ಹೋರಾಟವನ್ನು ಗಟ್ಡಿ ಗೊಳಿಸಿ,‌ ಸಂವಿಧಾನದ ಆಶಯಗಳಾದ, ಸಮಾನತೆ, ಪ್ರಜಾಪ್ರಭುತ್ವ, ಭ್ರಾತೃತ್ವ, ಮತ್ತು ಸಾಮಾಜಿಕ ನ್ಯಾಯದ ಸ್ಥಾಪನೆಯತ್ತ  ಸಾಗಲು‌ ಸಜ್ಜಾಗಬೇಕು.  ಅಂಬೇಡ್ಕರ್ ಆಶಯವಾದ ಮನುಸ್ಮೃತಿ ಪ್ರಣೀತ ಜಾತಿ-ಅಸ್ಪೃಶ್ಯತೆಯ ವಿನಾಶದ ಹೋರಾಟಕ್ಕೆ ಕರ್ನಾಟಕ ದಲ್ಲಿ ಹೊಸ ಅಧ್ಯಾಯ ಬರೆಯಲು, ಈ ಮಹಾಡ್ ಪುಸ್ತಕ ಗಳ ಬಿಡುಗಡೆ ಸ್ಪೂರ್ತಿಯಾಗಲಿ ಎಂದರು.

 

Donate Janashakthi Media

Leave a Reply

Your email address will not be published. Required fields are marked *