ಕನಕಗಿರಿ: ಬಿಜೆಪಿ ಶಾಸಕ ಬಸವರಾಜ ದಡೆಸಗೂರ ಮತ್ತು ಮಹಿಳಾ ಅಧಿಕಾರಿ ಇಬ್ಬರೂ ಫೋನಿನಲ್ಲಿ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆ ವೈರಲ್ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ.
ಶಾಸಕ ಬಸವರಾಜ ದಡೆಸೂಗೂರ್ ಅವರು ಮಹಿಳಾ ಅಧಿಕಾರಿಯೋರ್ವರನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಕೊಪ್ಪಳದ ಕನಕಗಿರಿಯ ಹಾಸಗಲ್ ಬಳಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಬಸವರಾಜ ದಡೆಸೂಗೂರ್ ಮಹಿಳಾ ಅಧಿಕಾರಿ ಮೇಲೆ ಹಲ್ಲೆಗೆ ಯತ್ನಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇನ್ನು ಸಿಡಿಪಿಓ ಮನನೊಂದು ಶಾಸಕರ ಜೊತೆ ಕಣ್ಣೀರು ಹಾಕಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಆತ್ಮಹತ್ಯೆಗೆ ಯತ್ನ : ಶಾಸಕರ ಜತೆ ದೂರವಾಣಿ ಮೂಲಕ ಸುದೀರ್ಘ ವಾಗ್ವಾದ ನಡೆಸಿದ್ದ ಮಹಿಳಾ ಅಧಿಕಾರಿ ಬಳಿಕ ಕಚೇರಿಯ ಬಾಗಿಲು ಮುಚ್ಚಿಕೊಂಡು ಸೀರೆ ಸೆರಗಿನಿಂದ ನೇಣು ಹಾಕಿಕೊಳ್ಳಲು ಯತ್ನಿಸಿದ್ದರು. ಇದನ್ನು ಕಂಡ ಸಿಬ್ಬಂದಿ ಬಾಗಿಲನ್ನು ಮುರಿದು ಅವರನ್ನು ಕೆಳಗಿಳಿಸಿ ಸಂತೈಸಿದ್ದರು. ಅಷ್ಟಕ್ಕೂ ಏನಾಯ್ತು ಈ ಮಹಿಳಾ ಅಧಿಕಾರಿಗೆ? ಶಾಸಕರಿಗೂ ಇವರಿಗೂ ಏನು ಸಂಬಂಧ? ಜನ ಪ್ರಶ್ನಿಸುತ್ತಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ಸಲ್ಲಿಸಿದ್ದು ಆದರೆ ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.