ಚೆನ್ನೈ: ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಹಾಗೂ ಷೇರುದಾರರ ವಿವಾದದಿಂದಾಗಿ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯನ್ನು ಮುಚ್ಚುವಂತೆ ಆದೇಶವನ್ನು ಹೊರಡಿಸಿದೆ.
ಬಾಕಿ ಮೊತ್ತ ಪಾವತಿಸುವಂತೆ ಕೋರಿ ಷೇರು ಸಂಸ್ಥೆಯಾದ ಕ್ರೆಡಿಟ್ ಸ್ಯೂಸೆ ಸಲ್ಲಿಸಿದ್ದ ಮನವಿಯನ್ನುಮದ್ರಾಸ್ ಕೋರ್ಟ್ ಪುರಸ್ಕರಿದೆ. ಹಾಗೂ ವಿಮಾನಯಾನ ಸಂಸ್ಥೆಗೆ ಸೂಚನೆ ನೀಡಿದೆ. ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯು ದಿವಾಳಿ ಹಂತ ತಲುಪಿದ್ದು, ಮೂರು ವಾರಗಳ ಕಾಲಾವಕಾಶ ನೀಡಬೇಕೆಂದು ವಿನಂತಿಸಿಕೊಂಡಿದೆ.
ಸ್ಪೈಸ್‌ಜೆಟ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ ರಾಮಕೃಷ್ಣನ್ ಅವರು ಮದ್ರಾಸ್ ಹೈಕೋರ್ಟ್ ನಿಂದ ಮೂರು ವಾರಗಳ ತಡೆಯಾಜ್ಞೆ ಸಿಕ್ಕಿದೆ ಎಂದು ಹೇಳಿದ್ದಾರೆ. ನ್ಯಾಯಮೂರ್ತಿ ಆರ್ ಸುಬ್ರಮಣಿಯನ್ ಅವರು ಸೋಮವಾರದಿಂದ ಎರಡು ವಾರಗಳ ಅವಧಿಯಲ್ಲಿ 5 ಮಿಲಿಯನ್ ಡಾಲರ್ ಠೇವಣಿ ಇಡುವಂತೆ ಸ್ಪೈಸ್ ಜೆಟ್‌ಗೆ ಷರತ್ತು ವಿಧಿಸಿ ತಡೆಯಾಜ್ಞೆ ನೀಡಿದರು.
ಷೇರು ಸಂಸ್ಥೆಯು ಸ್ಪೈಸ್‌ಜೆಟ್ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಆಸ್ತಿ ವಶಕ್ಕೆ ಪಡೆಯಬೇಕು, ಸಂಸ್ಥೆ ಅಧಿಕೃತವಾಗಿ ದಿವಾಳಿ ಎಂದು ಘೋಷಿಸಬೇಕು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
ಸ್ವಿಸ್ ಕಂಪನಿಗೆ ಬಾಕಿಮೊತ್ತವನ್ನು ಮೂರುವಾರಗಳ ಬಳಿಕ ವಿಮಾನಯಾನ ಸಂಸ್ಥೆಯನ್ನು ಸಂಪೂರ್ಣವಾಗಿ ಜಪ್ತಿ ಮಾಡಿ ಪಾವತಿಸುವ ಸಾಧ್ಯತೆಗಳಿವೆ. ಸ್ವಿಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ಸ್ಪೈಸ್ ಜೆಟ್ ಸುಮಾರು 24.01 ಮಿಲಿಯನ್ ಯುಎಸ್ ಡಾಲರ್ ಮೊತ್ತ ಬಾಕಿ ಉಳಿಸಿಕೊಂಡಿದೆ.
ಸ್ವಿಟ್ಜರ್ಲೆಂಡ್ ಮೂಲದ ಎಸ್ ಆರ್ ಟಿ ಟೆಕ್ನಿಕ್ಸ್ ಸಂಸ್ಥೆಯೊಂದಿಗೆ ತಾಂತ್ರಿಕ ಸೇವೆಗಳಿಗೆ ಸಂಬಂಧಿಸಿದಂತೆ ಸುಮಾರು 10 ವರ್ಷಗಳ ಅವಧಿಗೆ ಒಪ್ಪಂದವಾಗಿತ್ತು. ಆದರೆ, ಬಾಕಿ ಮೊತ್ತ ಉಳಿಸಿಕೊಂಡಿದ್ದ ಸ್ಪೈಸ್ ಜೆಟ್ ಮರು ಒಪ್ಪಂದ ಮಾಡಿಕೊಂಡಿದ್ದರೂ ಒಪ್ಪಂದಂತೆ ಮೊತ್ತ ಪಾವತಿಸುವಲ್ಲಿ ವಿಫಲವಾಯಿತು.