ಗ್ವಾಲಿಯರ್ : ಅಪರಿಚಿತರಿಬ್ಬರು ಹಾಡಹಗಲೇ ಪೆಟ್ರೋಲ್ ಬಂಕ್‌ನಿಂದ 19 ವರ್ಷದ ಯುವತಿಯನ್ನು ಅಪಹರಣ ಮಾಡಿದ ಘಟನೆಯು ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ಸೋಮವಾರ ನಡೆದಿದೆ. ಈ ಘಟನೆಯು ಪೆಟ್ರೋಲ್ ಬಂಕ್‌ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಧ್ಯ ಪ್ರದೇಶ
ಗ್ವಾಲಿಯರ್‌ನ ಝಾನ್ಸಿ ರಸ್ತೆ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ನಡೆದಿದೆ. ಹಗಲು ಹೊತ್ತಿನಲ್ಲಿ ಇಬ್ಬರು ವ್ಯಕ್ತಿಗಳು ಅವಳನ್ನು ಬಲವಂತವಾಗಿ ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದಾರೆ. ಇಬ್ಬರ ಪೈಕಿ ಒಬ್ಬ ವ್ಯಕ್ತಿ ಹೆಲ್ಮೆಟ್ ಧರಿಸಿದ್ದರೆ ಮತ್ತೊಬ್ಬ ವ್ಯಕ್ತಿ ಬಟ್ಟೆಯಿಂದ ತನ್ನ ಮುಖವನ್ನು ಮುಚ್ಚಿಕೊಂಡಿದ್ದಾನೆ. ಪೆಟ್ರೋಲ್ ಬಂಕ್‌ಗೆ ಆಗಮಿಸುವ ಇಬ್ಬರ ಪೈಕಿ ಒಬ್ಬ ಬೈಕ್‌ನಿಂದ ಇಳಿದು, ಯುವತಿಯನ್ನು ಎತ್ತಿಕೊಂಡು ಆಕೆಯನ್ನು ಬೈಕ್‌ನಲ್ಲಿ ಕೂಡಿಸುತ್ತಾನೆ. ಬಳಿಕ ಅಲ್ಲಿಂದ ಹೊರಟು ಹೋಗುತ್ತಾರೆ. ಪೆಟ್ರೋಲ್ ಪಂಪ್‌ನಲ್ಲಿ ಅಳವಡಿಸಲಾದ ಕ್ಯಾಮೆರಾಗಳಲ್ಲಿ ಈ ಇಡೀ ಘಟನೆಯು ಸೆರೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಧ್ಯ ಪ್ರದೇಶ
ಭಿಂಡ್ ಮೂಲದ ಯುವತಿ ತನ್ನ ಕುಟುಂಬದೊಂದಿಗೆ ಬಸ್ ಮೂಲಕ ಗ್ವಾಲಿಯರ್‌ಗೆ ಆಗಮಿಸಿದ್ದಳು. ಆಗ ಯುವಕರು ಆಕೆಯನ್ನು ಬೈಕ್‌ನಲ್ಲಿ ಅಪಹರಿಸಿದ್ದಾರೆ. ಕೆಲ ದಿನಗಳ ಹಿಂದೆ ಅವರ ಗ್ರಾಮಕ್ಕೆ ಬಂದಿದ್ದ ಬಾಲಕನ ವಿರುದ್ಧ ಕುಟುಂಬ ದೂರು ಕೂಡ ನೀಡಿತ್ತು. ಸದ್ಯ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂದಿಸುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಚಂದೇಲ್ ಭರವಸೆ ನೀಡಿದ್ದಾರೆ.
ಆದರೆ ಅಪಹರಣಕ್ಕೆ ಕಾರಣವೇನು ಎಂಬುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ. ಜೊತೆಗೆ ಆರೋಪಿಗಳು ಯುವತಿಗೆ ಪರಿಚಯಸ್ಥರೇ ಅಥವಾ ಪರಿಚಯ ಇಲ್ಲದವರೇ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಯುವತಿಯನ್ನು ಬಲವಂತವಾಗಿ ಅಪಹರಿಸುವಾಗ ಸ್ಥಳದಲ್ಲಿದ್ದ ಸುಮಾರು ಆರು ಮಂದಿ ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕಂಡುಬಂದಿದೆ.
ಇದನ್ನೂ ಓದಿ: ಸರ್ಕಾರದ ಅಸಂಬದ್ಧ ಧೋರಣೆಗಳಿಂದ ಹೆಚ್ಚುತ್ತಿರುವ ನಿರುದ್ಯೋಗದ ಬಿಕ್ಕಟ್ಟು
ಕುಟುಂಬದ ಸದಸ್ಯರ ಪ್ರಕಾರ ಹುಡುಗಿಯ ಗ್ರಾಮದ ಯುವಕರು ಆಕೆಗೆ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆ ತನ್ನ ತಂದೆ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಭಿಂಡ್‌ನಿಂದ ಗ್ವಾಲಿಯರ್‌ಗೆ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದಳು. ಈ ವೇಳೆ ಅಪಹರಣ ಮಾಡಲಾಗಿದೆ.
ಯುವತಿಯ ಸಂಬಂಧಿಕರು ಪೆಟ್ರೋಲ್ ಬಂಕ್‌ನ ವಾಶ್‌ರೂಮ್‌ಗೆ ಹೋದಾಗ ಈ ಘಟನೆ ಸಂಭವಿಸಿದೆ. ಶಂಕಿತ ಅಪಹರಣಕಾರರ ಗುರುತು ಪತ್ತೆಯಾಗಿಲ್ಲ. ಝಾನ್ಸಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.
ಯುವತಿಯ ಅಪಹರಣದ ನಂತರ ಆಕೆಯ ಸಂಬಂಧಿಕರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಅವಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಚಂದೇಲ್ ಹೇಳಿದ್ದಾರೆ.
ವಿಡಿಯೋ ನೋಡಿ: ಸಂವಿಧಾನ ಮಾರ್ಗವೇ ನಮಗೆ ಸರಿಯಾದ ದಾರಿ – ಜಸ್ಟೀಸ್ ಎಚ್ ಎನ್ ನಾಗಮೋಹನದಾಸ್ Janashakthi Media