ಅಮೀರ್‌ ನಂತರ ಮಾಧವನ್‌ ಗೆ ಕೋವಿಡ್‌ ದೃಢ

ನವದೆಹಲಿ : ಬಾಲಿವುಡ್‌ ನಟ ಅಮೀರ್‌ ಖಾನ್‌ ನಂತರ ಬಹುಭಾಷಾ ನಟ ಆರ್.‌ ಮಾಧವನ್‌ ಅವರಿಗೂ ಕೋವಿಡ್‌ ಪಾಸಿಟಿವ್‌ ವರದಿಯಾಗಿದ್ದು ಇಂದು ದೃಢಪಟ್ಟಿದೆ.

ಬಾಲಿವುಡ್‌ನ 3 ಈಡಿಯಟ್ಸ್ ಸಿನಿಮಾವನ್ನು ಪ್ರಸ್ತಾಪಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ನಟ ಮಾಧವನ್‌ ‘ಫರ್ಹಾನ್‌ ರಾಂಚೊವನ್ನು ಹಿಂಬಾಲಿಸುತ್ತಿದ್ದಾನೆ. ಎಲ್ಲರ ಪ್ರೀತಿಗೆ ಧನ್ಯವಾದ, ನಾನು ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಆರ್‌ ಮಾಧವನ್‌ ಅವರು ತಮ್ಮ ಅನುಯಾಯಿಗಳಿಗೆ ತಿಳಿಸಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಮೀರ್‌ ಖಾನ್‌ ಹಾಗೂ ಆರ್‌ ಮಾಧವನ್‌ ಒಟ್ಟಾಗಿ  3 ಈಡಿಯಟ್ಸ್‌ ಸಿನಿಮಾದಲ್ಲಿ ನಟಿಸಿದ್ದರು.

ಮಾಧವನ್ ಇತ್ತೀಚೆಗೆ ಭೋಪಾಲ್‌ನಲ್ಲಿ ನಡೆಯುತ್ತಿರುವ ಅಮ್ರಿಕಿ ಪಂಡಿತ್ ಅವರ ಸಿನಿಮಾವೊಂದರ ಸೆಟ್‌ನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದರು.

ಇತ್ತೀಚೆಗೆ, ಕಾರ್ತಿಕ್ ಆರ್ಯನ್, ರಣಬೀರ್ ಕಪೂರ್, ಸಂಜಯ್ ಲೀಲಾ ಭನ್ಸಾಲಿ, ರೋಹಿತ್ ಸರಫ್ ಸೇರಿದಂತೆ ಅನೇಕರಿಗೆ ಕೋವಿಡ್‌-19 ದೃಢಪಟ್ಟಿದ್ದವು.

Donate Janashakthi Media

Leave a Reply

Your email address will not be published. Required fields are marked *