ಮದ್ದೂರು : ಕೃಷಿ ಕೂಲಿಕಾರರ ಕಲ್ಯಾಣ ಮಂಡಳಿ ರಚನೆಗಾಗಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು 92 ಕಿಮಿ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ.
ಶಿವಪುರದ ಧ್ಜಜ ಸತ್ಯಾಗ್ರಹ ಸೌಧದಿಂದ ಬೆಂಗಳೂರಿನ ಮುಖ್ಯಮಂತ್ರಿ ನಿವಾಸವರೆಗೆ 2 ದಿನಗಳ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕೃಷಿ ಕೂಲಿಕಾರ್ಮಿಕರು ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಶಿವಪುರದ ಧ್ಜಜ ಸತ್ಯಾಗ್ರಹ ಸೌಧದಿಂದ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ಈ ವೇಳೆ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ನರೇಗಾ, ವಸತಿ, ಸ್ಮಶಾನ, ಹಕ್ಕು ಪತ್ರ, ಬ್ಯಾಂಕ್ ಸಾಲ ಹಾಗೂ ಕೂಲಿಕಾರರ ಕಲ್ಯಾಣ ಮಂಡಳಿಯನ್ನು ರಚಿಸುವಂತೆ ಹಲವಾರು ಬಾರಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಮಾಡಿದ್ದರು, ಸರ್ಕಾರ ಬೇಡಿಕೆಗಳನ್ನು ಈಡೇರಿಸಿಲ್ಲದ ಕಾರಣ ಪಾದಯಾತ್ರೆಯ ಮೂಲಕ ಸಿಎಂ ಮನೆ ಪ್ರತಿಭಟನೆ ಮಾಡಲು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಕೇರಳ, ತಮಿಳುನಾಡು, ತ್ರಿಪುರ ರೀತಿಯಲ್ಲಿ ಕೃಷಿ ಕೂಲಿಕಾರರಿಗೆ ಕಲ್ಯಾಣ ಮಂಡಳಿ ರಚನೆ ಮಾಡಬೇಕು. ನರೇಗಾ ಕೂಲಿಯ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಿ ಪ್ರತಿನಿತ್ಯ 600 ರೂ ಕೂಲಿ ನೀಡಬೇಕು. ಸರ್ಕಾರಿ ಭೂಮಿಯಲ್ಲಿ ವಾಸಮಾಡುತ್ತಿರುವ ಬಡವರಿಗೆ ತಕ್ಷಣ ಹಕ್ಕು ಪತ್ರ ನೀಡಬೇಕು. ನಿವೇಶನ ರಹಿತರಿಗೆ ನಿವೇಶದ ಒದಗಿಸಬೇಕು. ಸಾಮಾಜಿಕ ಭದ್ರತಾ ಯೋಜನೆಯಡಿ ಎಲ್ಲಾ ಆಸಕ್ತರಿಗೆ ಮಾಸಾನಸ ಹೆಚ್ಚಿಸಬೇಕು. ಯಾವುದೇ ಷರತ್ತು ವಿಧಿಸದೆ ಕೂಲಿಕಾರರಿಗೆ ಕನಿಷ್ಟ 2 ಲಕ್ಷ ರೂ.ವರೆಗೆ ಸಾಲ ನೀಡಬೇಕು. ಸಿಳ್ಳೆಕ್ಯಾತ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡಿ ತಕ್ಷದ ಸರ್ಕಾರ ಸೌಲಭ್ಯಗಳನ್ನು ಒದಗಿಸಬೇಕು. ಭಾಗ್ಯಜ್ಯೋತಿ, ಕುಠೀರ ಜ್ಯೋತಿ, ದೀನ್ ದಯಾಳ್ ಮತ್ತು ಬೆಳಕು ಯೋಜನೆಯಲ್ಲಿ ಎಲ್ಲಾ ಬಡವರಿಗೆ ಉಚಿತವಾಗಿ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
ಅವೈಜ್ಞಾನಿಕ ಪಡಿತರ ನೀತಿಯನ್ನು ಹಿಂಪಡೆದು ಕೇರಳ ಸರ್ಕಾರದ ಮಾದರಿಯಲ್ಲಿ ಎಲ್ಲಾ ಬಿಪಿಎಲ್ ಕುಟುಂಬಳಿಗೆ ಪ್ರತಿ ತಿಂಗಳು ಜೀವನ ಅವಶ್ಯಕ ವಸ್ತುಗಳನ್ನೊಂಡ ಕಿಟ್ ಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೆಲ ತಾಲೂಕುಗಳಿಗೆ ಮಾತ್ರ ಸಿಮೇಎಣ್ಣೆಯನ್ನು ನೀಡುತ್ತಿದ್ದು, ಅದನ್ನು ಎಲ್ಲಾ ತಾಲೂಕಿಗೆ ವಿಸ್ತರಿಸಬೆಕು ಎಂದು ಆಗ್ರಹಿಸಿದರು.
ಪಾದಯಾತ್ರೆಯಲ್ಲಿ 60 ವರ್ಷ ಕ್ಕೂ ಮೇಲ್ಟಟ್ಟ ವಯೋವೃದ್ದರು, ಅಂಗವಿಕಲರು, ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಕೆಲವರು ತಮ್ಮ ಹಸುಗೂಸುಗಳನ್ನು ಸಹಾ ಪಾದಯಾತ್ರೆಯಲ್ಲಿ ಕರೆದುಕೊಂಡು ಬಂದಿದ್ದು ಗಮನ ಸೆಳೆಯಿತು. ಶಿವಪುರ ಧ್ವಜ ಸತ್ಯಾಗ್ರಹಸೌಧದ ಪಾದಯಾತ್ರೆ ಆರಂಭಕ್ಕೂ ಮುನ್ನ ಕೆಂಬಾವುಟಗಳು ರಾರಾಜಿಸಿದವು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಮಾತನಾಡಿ, ನ್ಯಾಯೋಚಿತ ಬೇಡಿಕೆಗಳಾಗಿ ಇಂತಹ ಬೃಹತ್ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ಪಕ್ಷ ಬೇಧ ಮೇರೆತು ಹೋರಾಟವನ್ನು ಪ್ರತಿಯೊಬ್ಬರು ಬೆಂಬಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ನಿವೃತ್ತ ವಾರ್ತಾಧಿಕಾರಿ ಬಿ.ವಿಶುಕುಮಾರ್ ಮಾತನಾಡಿ, ಕೂಲಿಕಾರರ ಸಂಘಟಿತ ಹೋರಾಟಕ್ಕೆ ಮತ್ತು ಜನ ಸಾಮಾನ್ಯರ ಬೇಡಿಕೆಗೆ ಸದಾ ನಮ್ಮ ಬೆಂಬಲವಿದೆ. ಇಂತಹ ಹೋರಾಟಗಳನ್ನು ಸರ್ಕಾರ ಪರಗಣಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಹಣದ ಬಂಡವಾಳದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರದಿಂದ ಬಡವರ ಯಾವ ಸಮಸ್ಯೆಗಳನ್ನು ಹೇಳಿದರು ಪ್ರಯೋಜನವಿಲ್ಲ, ಪಂಚೇದ್ರಿಯಗಳಿಲ್ಲದ ಸರ್ಕಾರ ನಮ್ಮನ್ನಾಳ್ಳುತ್ತಿದೆ ಎಂದು ಕಿಡಿಕಾರಿದರು. ರೈತ ಮತ್ತು ಕಾರ್ಮಿಕರು ಒಂದೇ ನಾಣ್ಯದ 2 ಮುಖಗಳಿದಂತೆ ಯಾರಿಗೆ ನೋವಾದರು ಸುಮ್ಮನೆ ಕೂರುವ ಮಾತಿಲ್ಲ ಎಂದು ಸರ್ಕಾರಕ್ಕೆ ಛಾಟಿ ಬೀಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಹಿರಿಯ ಉಪಾಧ್ಯಕ್ಷ ನಿತ್ಯಾನಂದ ಸ್ವಾಮಿ, ಉಪಾಧ್ಯಕ್ಷ ಜಿ.ಎನ್. ನಾಗರಾಜ್, ರಾಜ್ಯ ಪ್ರದಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ, ಜಿಲ್ಲಾ ಕಾರ್ಯದರ್ಶಿ ಬಿ.ಹನುಮೇಶ, ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಗೌರವಾಧ್ಯಕ್ಷ ಎಂ.ಸಿ.ಬಸವರಾಜು, ಕರ್ನಾಟಕ ಕ್ರಾಂತಿದಳ ರಾಜ್ಯಾಧ್ಯಕ್ಷ ಸಿ.ಎಂ. ಕ್ರಾಂತಿಸಿಂಹ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಟಿ.ಯಶವಂತ, ವಿವಿಧ ಸಂಘಟನೆಗಳ ಮುಖಂಡರಾದ ಟಿ ಎಲ್ ಕೃಷ್ಣೇಗೌಡ, ಸಿ.ಕುಮಾರಿ, ವಿ.ಸಿ.ಉಮಾಶಂಕರ್, ಶ್ರೀಕ ಶ್ರೀನಿವಾಸ, ಡಿ.ಸಿ.ಮಹೇಂದ್ರ, ಕೆ.ಹನುಮೇಗೌಡ, ಬಿ.ಎಂ.ಶಿವಮಲ್ಲಯ್ಯ, ಎನ್.ಸುರೇಂದ್ರ, ಅನಿತಾ,
ಟಿ.ಪಿ.ಅರುಣ್ಕುಮಾರ್, ಟಿ.ಸಿ.ವಸಂತ, ಅಮಾಸಯ್ಯ, ರಾಜು, ಟಿ.ಎಚ್.ಆನಂದ, ಶುಭಾವತಿ, ಸಂತೋಷ್, ಗಾಯಕ ಹುರುಗಲವಾಡಿ ರಾಮಯ್ಯ ಇದ್ದರು.
ಶಾಸಕರಿಂದ ಮನವಿ ಸ್ವೀಕಾರ: ತಾಲೂಕಿನ ಗಡಿಭಾಗ ನಿಡಘಟ್ಟದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಕೂಲಿಕಾರರ ಸಮಸ್ಯೆ ಬಗ್ಗೆ ನನಗೂ ಕಾಳಜಿಯಿದೆ. ನಿಮ್ಮ ಬೇಡಿಕೆಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ. ಈಗಾಗಲೇ ನಿಮ್ಮ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ನಾನು ಸದಾ ನಿಮ್ಮ ಪರವಾಗಿ ಧ್ವನಿಯಾಗಿ ಇರುತ್ತೇನೆ ಎಂದರು.