ಮಾದಕ ವಸ್ತು ಜಾಲ ನಿರ್ಮೂಲನೆ ನಮ್ಮ ಮೊದಲ ಆದ್ಯತೆ: ಪ್ರವೀಣ್‌ ಸೂದ್‌

ಬೆಂಗಳೂರು: ಕಳೆದ ಆರು ತಿಂಗಳಲ್ಲಿ ಸುಮಾರು ಹತ್ತು ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿರುವ ಮಾದಕ ವಸ್ತುಗಳು  ಸಿಲಿಕಾನ್ ಸಿಟಿ ಬೆಂಗಳೂರಿಗೆ ಸರಬರಾಜಾಗುತ್ತಿದ್ದವು ಎಂದು ತಿಳಿದು ಬಂದಿದೆ. ಲಾಕ್ ಡೌನ್ ಸಮಯದಲ್ಲಿ ಬೆಂಗಳೂರು ನಗರಕ್ಕೆ ಮಾದಕವಸ್ತುಗಳನ್ನು ಸರಬರಾಜು ಮಾಡುವುದು ಸುಲಭವೆಂದು ಭಾವಿಸಿದ್ದರು. ಪೊಲೀಸರು ಮಾಹಿತಿ ಕಲೆ ಹಾಕಿ ಸುಮಾರು  10 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಶ್‌ ಸೂದ್‌ ಅವರು ವಿವರಿಸಿದರು.

ನಮ್ಮ ಜವಾಬ್ದಾರಿ ಕೇವಲ ಮಾದಕ ವಸ್ತು ಜಾಲದ ಆರೋಪಿಗಳ ಬಂಧನವಲ್ಲ. ಮಾದಕ ವಸ್ತು ಜಾಲ ನಿರ್ಮೂಲನೆ ಮಾಡಲು ನಾವು ಸಿದ್ಧರಿದ್ದೇವೆ. ಡ್ರಗ್ಸ್‌ ಜಾಲವನ್ನು ಬಯಲಿಗೆ ಎಳೆಯುವ ಕೆಲಸ ಮಾಡಬೇಕಿದೆ ಮತ್ತು ಮಾಡಲಾಗುತ್ತಿದೆ. ಜೊತೆಗೆ ಜಪ್ತಿಯಾಗುವ ಮಾದಕ ವಸ್ತು, ಆರೋಪಿಗಳ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದರು.

ಇಂದು ಅಂತರಾಷ್ಟ್ರೀಯ ಮಾದಕ ವಸ್ತು ರಹಿತ ದಿನಾಚರಣೆ ಅಂಗವಾಗಿ ಪೊಲೀಸರು ವರ್ಷವಿಡೀ ಜಪ್ತಿಯಾದ ಮಾದಕ ವಸ್ತುಗಳನ್ನು ನಾಶಪಡಿಸಿದರು.

ಮುಂದೆಯೂ ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯ ಮುಂದುವರೆಸಲಿದ್ದಾರೆ. ಮುಂದಿನ ವರ್ಷಗಳಲ್ಲಿಯೂ ಇದೇ ರೀತಿ ಮಾದಕ ವಸ್ತುಗಳ  ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರೆಸಲು ನಿರ್ಧರಿಸಲಾಗಿದೆ.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿಜಯಪುರ, ದಕ್ಷಿಣ ಕನ್ನಡ, ಐದು ಪ್ರಮುಖ ಜಿಲ್ಲೆಯಲ್ಲಿ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಲಾಗಿದ್ದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ. 7 ಟನ್ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳು ಸುಡಲಾಗಿದೆ. ಇದರಲ್ಲಿ ಬೆಂಗಳೂರು ನಗರದ ಡಿಸಿಪಿಗಳು ಮತ್ತು ಐದು ಜಿಲ್ಲೆಯ ಎಸ್​ಪಿಗಳು ಹಾಗೂ ಡ್ರಗ್ಸ್‌ ಕಮಿಟಿ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು. 2020-21ನೇ ಸಾಲಿನಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಒಟ್ಟು 4,066 ಪ್ರಕರಣಗಳಲ್ಲಿ 5,291 ಜನರನ್ನು ಬಂಧಿಸಲಾಗಿದೆ.

2,500 ಕೆಜಿ ಗಾಂಜಾ, 960 ಗ್ರಾಂ ಅಫೀಮ್, ಹೇರಾಯಿನ್ 872 ಗ್ರಾಂ, 82 ಗ್ರಾಂ ಎಂಡಿಎಂಎ ಮಾತ್ರೆ, 9.4 ಕೆಜಿ ಚರಸ್, 90 ಕೆಜಿ ಮೆಥಾಕ್ಲೀನ್, 10.2 ಕೆಜಿ ಹ್ಯಾಶಿಸ್ ಆಯಿಲ್, 96.43 ಗ್ರಾಂ ಕೊಕೇನ್​​ನ್ನು ವಶಕ್ಕೆ ಪಡೆದಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಳೆದ ಒಂದು ವರ್ಷದಲ್ಲಿ ವಶಪಡಿಸಿಕೊಂಡಿರುವ ಒಟ್ಟು 12 ಬಗೆಯ ಮಾದಕ ವಸ್ತುಗಳನ್ನು ನಾಶಪಡಿಸಲಾಗುತ್ತಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಡ್ರಗ್ಸ್ ನಾಶಪಡಿಸಲಾಗುತ್ತಿದ್ದು, ನ್ಯಾಯಾಲಯದ ಅನುಮತಿ ನೀಡಿರುವಷ್ಟು ಡ್ರಗ್ಸ್ ಮಾತ್ರ ನಾಶ ಪಡಿಸಲಾಗುತ್ತಿದೆ ಎಂದರು.

ದೇಶದಲ್ಲಿ ಇದೇ ಮೊದಲ ಬಾರಿಗೆ 50 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಲಾಗುತ್ತಿದೆ.

ಇಂದು (ಜೂನ್ 26) ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ರಾಯಚೂರು ಜಿಲ್ಲೆಯಲ್ಲಿ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ. ಸುಮಾರು 281 ಕೆ.ಜಿ ಗಾಂಜಾ ಸೇರಿ ಇತರೆ ಮಾದಕ ವಸ್ತುವನ್ನು ನಾಶ ಮಾಡಲಾಗಿದೆ. ಲಿಂಗಸುಗೂರು, ದೇವದುರ್ಗ ಹಾಗೂ ಸಿಂಧನೂರು ಭಾಗದಲ್ಲಿ ಹೆಚ್ಚು ಗಾಂಜಾ ಬೆಳೆಯಲಾಗುತ್ತಿದೆ. ನಾಲ್ಕು ವರ್ಷಗಳಲ್ಲಿ ವಶಕ್ಕೆ ಪಡೆದ ವಸ್ತುಗಳನ್ನು ನಾಶ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಅದೇ ರೀತಿಯಲ್ಲಿ ಬೆಳ್ಳಂಬೆಳಗ್ಗೆ ಬೆಂಗಳೂರು ಎನ್‌ಸಿಬಿ ಅಧಿಕಾರಿಗಳು ಕೋಲಾರ ಹಾಗೂ ಬೀದರ್‌ನಲ್ಲಿ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ (ಎನ್‌ಸಿಬಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸುಮಾರು 91 ಕೆ.ಜಿ ಡ್ರಗ್ಸ್ ಹಾಗೂ ₹ 62 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಹೈದರಾಬಾದ್ ಎನ್.ವಿ ರೆಡ್ಡಿ ಎಂಬಾತನಿಗೆ ಸೇರಿದ್ದ ಕಾರ್ಖಾನೆಯಲ್ಲಿ ಆಲ್ಪಾಜೋಲಮ್ ಪೌಡರ್ ತಯಾರಿಸಿ ಕೋಲಾರ, ಬೀದರ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆರೋಪಿ ಎನ್.ವಿ. ರೆಡ್ಡಿ ಅಕ್ರಮವಾಗಿ ಕಾರ್ಖಾನೆ ನಡೆಸುತ್ತಿದ್ದ. ಬೆಂಗಳೂರು ವ್ಯಾಪ್ತಿಯ ಎನ್.ಸಿ.ಬಿ. ವಲಯಾಧಿಕಾರಿ ಅಮಿತ್ ಗಾವಟೆ ನೇತೃತ್ವದಲ್ಲಿ ದಾಳಿ ನಡೆಯಿತು. ಪ್ರಕರಣದಲ್ಲಿ ವೈ.ವಿ. ರೆಡ್ಡಿ, ಎಸ್. ಮೆನನ್, ಎನ್.ವಿ. ರೆಡ್ಡಿ, ಅಮೃತ್ ಹಾಗೂ ಭಾಸ್ಕರ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂದರ್ಭದಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ಸೂದ್, ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್, ಕಾರಾಗೃಹ ಪೊಲೀಸ್ ಮಹಾನಿರ್ದೇಶಕರಾದ ಅಲಕ್ ಮೋಹನ್, ಡಿಜಿಪಿ ಬಿ.ಎಸ್ ಸಂಧು ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *