- ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ
- ಜೆಡಿಎಸ್ ಪಕ್ಷತೊರೆದು ಬಿಜೆಪಿ ಪಕ್ಷಕ್ಕೆ ಪಕ್ಷಾಂತರ
ಬೆಂಗಳೂರು:ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಘೋಷಣೆ ಮಾಡಿದ್ದು, ರಾಜೀನಾಮೆ ಪತ್ರವನ್ನು ಉಪಸಭಾಪತಿಗೆ ನೀಡಿದ್ದಾರೆ.
ಜೂನ್ 4ಕ್ಕೆ ಸದಸ್ಯ ಸ್ಥಾನದ ಅವಧಿ ಮುಕ್ತಾಯಗೊಳ್ಳಲಿದ್ದು ಜೂನ್ 13ಕ್ಕೆ ಚುನಾವಣೆ ನಡೆಯಲಿದೆ. ಜೆಡಿಎಸ್ ಪಕ್ಷತೊರೆದು ಬಿಜೆಪಿ ಪಕ್ಷಕ್ಕೆಹಾರುತ್ತಿದ್ದಾರೆ.5ಲಕ್ಷಕ್ಕು ಹೆಚ್ಚು ಮಂದಿ ಭಾಗವಹಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮವನ್ನ ಬೆಂಗಳೂರಿನ ನೆಲಮಂಗಳದಲ್ಲಿ ಆಯೋಜಿಸಲಾಗಿತ್ತು. ಇಂತಹ ಸಮಯದಲ್ಲಿ “ಸಭಾಪತಿ ಮತ್ತು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಒಂದೆರಡು ದಿನಗಳಲ್ಲಿ ಬಿಜೆಪಿ ಸೇರುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಇವತ್ತಿನ ಸ್ಥಿತಿ ನೋಡಿದರೆ ರಾಜಕಾರಣದಲ್ಲಿ ಇರುವುದು ಒಳ್ಳೆಯದಲ್ಲ. ಮಾದಕ ದ್ರವ್ಯದ ವ್ಯಸನಿಯ ಹಾಗೆ ಇಂದು ರಾಜಕೀಯವಿದೆ. ಇವತ್ತಿನ ಕಲುಷಿತ ರಾಜಕೀಯದಲ್ಲಿ ಜನರೂ ಹಾಗೆಯೇ ಆಗಿದ್ದಾರೆ, ನಾವೂ ಹಾಗೆಯೇ ಆಗಿದ್ದೇವೆ. ವ್ಯವಸ್ಥೆಯಲ್ಲಿ ಮನಸ್ಸು ಇರುತ್ತದೆಯೋ ಬಿಡುತ್ತದೆಯೋ ನಾವು ಇರಬೇಕಾಗುತ್ತದೆ ಎಂದು ಹೇಳಿದ್ದಾರೆ. ಇವತ್ತಿನ ಕಲುಷಿತ ರಾಜಕಾರಣ ನಮ್ಮಂಥವರಿಗೆ ಅಲ್ಲ. ನಾನು ಸಭಾಪತಿ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಬಸವರಾಜ ಹೊರಟ್ಟಿ ಹೇಳಿದರು.
ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಸಾಮಾನ್ಯ ಮನೆತನದಲ್ಲಿ ಹುಟ್ಟಿ ಸಾಮಾನ್ಯ ಶಿಕ್ಷಕನಾಗಿ ಇಷ್ಟು ದೊಡ್ಡ ಸ್ಥಾನ ಅನುಭವಿಸಿದ್ದೇನೆ. ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಒಂದು ದಿವಸವೂ ನಾನು ಮಾತನಾಡಿಲ್ಲ. ಕೆಲವೊಂದು ಬಾರಿ ಅನಿವಾರ್ಯವಾಗಿ ತೀರ್ಮಾನ ಮಾಡಬೇಕಾಗುತ್ತದೆ. ದೇವೇಗೌಡರ ಕುಟುಂಬದ ಬಗ್ಗೆ ನನಗೆ ಬೇಸರ ಪಡುವಂತಹ ಘಟನೆ ಎಂದೂ ಆಗಿಲ್ಲ. ಮಂತ್ರಿ ಆದಾಗಲೂ ಇಲ್ಲದಿದ್ದಾಗಲೂ ನಾನು ಅವರ ಜೊತೆಗೆ ಇದ್ದೆ. ದೇವೇಗೌಡರ ಬಗ್ಗೆಯಾಗಲಿ ಉಳಿದವರ ಬಗ್ಗೆಯಾಗಲಿ ನನಗೆ ಅಸಮಾಧಾನ ಇಲ್ಲ. ಈ ಕುರಿತು ದೇವೇಗೌಡರಿಗೆ ನಾನು ವಿವರವಾಗಿ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನಿಂದ ಆಯ್ಕೆಯಾಗಿರುವ ಹೊರಟ್ಟಿ ಅವರು ಪರಿಷತ್ ಸಭಾಪತಿ ಸ್ಥಾನಕ್ಕೆ ಆಯ್ಕೆಗೊಳ್ಳುವಾಗ ಬಿಜೆಪಿಯೂ ಬೆಂಬಲ ಸೂಚಿಸಿತ್ತು. ಈ ನಡುವೆ ಮಾರ್ಚ್ ತಿಂಗಳಲ್ಲಿ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ ಸಂದರ್ಭದಲ್ಲಿ ಹೊರಟ್ಟಿ ಅವರು ಶಾ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ನಡುವೆ ಹೊರಟ್ಟಿ ಅವರು ಸೋಮವಾರ ಮಧ್ಯಾಹ್ಮ 3 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದು. ಪತ್ರಿಕಾಗೋಷ್ಠಿಯಲ್ಲಿ ಸಭಾಪತಿ ಸ್ಥಾನಕ್ಕೆ ಯಾವಾಗ ರಾಜೀನಾಮೆ ಕೊಡುವ ಬಗ್ಗೆ ಅಧಿಕೃತವಾಗಿ ತಿಳಿಸುವ ಸಾಧ್ಯತೆ ಇದೆ ಎಂದರು.