ಬೆಳಗಾವಿ: ಹಲಗಾ-ಮಚ್ಚೆ ನಡುವಿನ ಬೈಪಾಸ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಜಮೀನಿನ ಮಾಲೀಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಸರ್ವೆ ಆದ ಜಮೀನು ಬಿಟ್ಟು ಬೇರೆ ಜಮೀನು ತೆಗೆದುಕೊಂಡಿದ್ದಕ್ಕೆ ವಿರೋಧಿಸಿದ್ದರು. ಫಲವತ್ತಾದ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಏಕಾಏಕಿ ನೂರಾರು ಪೊಲೀಸರನ್ನು ಕರೆತಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಜೀವ ಕೊಟ್ಟೇವು ಜಮೀನು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನಾ ನಿರತ ರೈತರನ್ನು ಪೊಲೀಸರು ತಡೆದಾಗ, ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿದೆ. 15ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸುತ್ತಿದ್ದಂತೆ, ಮತ್ತಷ್ಟು ತಾರಕಕ್ಕೇರಿದೆ. ಪ್ರತಿಭಟನಾ ನಿರತನಾಗಿದ್ದಂತ ಜಮೀನು ಮಾಲೀಕ ಆಕಾಶ್ ಎಂಬುವರು, ತಾನು ತಂದಿದ್ದಂತ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದಾರೆ. ಕೂಡಲೇ ಆತನನ್ನು ಸ್ಥಳೀಯರು ರಕ್ಷಿಸಿ, ಬೆಂಕಿ ನಂದಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮತ್ತೊಂದೆಡೆ ರೈತರು ಮಚ್ಚು, ಕುಡುಗೋಲು ಹಿಡಿದು ಯಾವುದೇ ಕಾರಣಕ್ಕೂ ಜಮೀನು ಕೊಡೋದಿಲ್ಲ. ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ತೀವ್ರ ಸ್ವರೂಪದಲ್ಲಿ ಪ್ರತಿಭಟನೆಯನ್ನು ನಢಸುತ್ತಿದ್ದಾರೆ.
ಇದನ್ನೂ ಓದಿ : ಅಂಬೇಡ್ಕರರನ್ನು ಅರ್ಥಮಾಡಿಕೊಳ್ಳಲು ಮಾರ್ಕ್ಸ್‌ವಾದ ನೆರವಾಯಿತು – ಜಸ್ಟೀಸ್ ಚಂದ್ರು
ಮಗುವಿನ ತಾಯಿಯನ್ನು ಎಳೆದಾಡಿದ ಪೊಲೀಸರು : ಪ್ರತಿಭಟನೆಗೆ ಎಂಟು ತಿಂಗಳ ಮಗುವಿನೊಂದಿಗೆ ಬಂದಿದ್ದ ಮಹಿಳೆಯನ್ನೂ ಬಿಡದೆ ಪೊಲೀಸರು ಎಳೆದಾಡಿ ಹೊರಗೆ ಕಳುಹಿಸಿದ್ದಾರೆ.
ಮಹಿಳಾ ಪೊಲೀಸರು ಮಹಿಳೆಯರನ್ನ ಎಳೆದಾಡಿ ವಶಕ್ಕೆ ಪಡೆದು ವಾಹನದಲ್ಲಿ ಕೂಡಿಸಿದ್ದಾರೆ. ಪೊಲೀಸರ ದೌರ್ಜನ್ಯದಿಂದ ಮಹಿಳೆಯರು ಕಣ್ಣೀರಿಟ್ಟ ದೃಶ್ಯ ಕಂಡು ಬಂದಿದೆ. ಕಾಮಗಾರಿ ನಿಲ್ಲಿಸುವಂತೆ ಓರ್ವ ರೈತ ಮರ ಏರಿ ಕುಳಿತಿದ್ದು ಜೆಸಿಬಿ ಡ್ರೈವರ್ ಕಾಮಗಾರಿ ನಿಲ್ಲಿಸಿದ್ದಾನೆ. ಕಾಮಗಾರಿ ಮಾಡಿದ್ರೇ ಮರದಿಂದ ಜಿಗಿಯುವುದಾಗಿ ಮರದಲ್ಲೆ ಕುಳಿತು ಪ್ರತಿಭಟನೆ ನಢಸುತ್ತಿದ್ದಾರೆ. ನಮಗೆ ಹಣ ಬೇಡಾ ಜಮೀನು ಬೇಕು ಕೆಲಸ ನಿಲ್ಲಿಸಿ ಎಂದು ಪಟ್ಟು. 15ಕ್ಕೂ ಅಧಿಕ ರೈತರನ್ನ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದೆ.