ಮತೀಯವಾದಿಗಳ ವಿರುದ್ಧ ಹೋರಾಡಿ ಗೆದ್ದ ಮೊಹಮದ್ ಯೂಸುಫ್ ತರಿಗಾಮಿ

-ಎಚ್.ಆರ್. ನವೀನ್ ಕುಮಾರ್

 

77 ವರ್ಷದ ಈ ಹೆಸರು ಕೇಳಿದರೆ, ಅವರ ಭಾಷಣಗಳನ್ನು ಕೇಳಿದರೆ ಯುವಕರೂ ನಾಚುವಂತಿರುತ್ತದೆ. ಹೌದು ನಾನು ಹೇಳುತ್ತಿರುವುದು ಭೂಮಿಯ ಮೇಲಿನ ಸ್ವರ್ಗ, ಕಣಿವೆಗಳ ರಾಜ್ಯ ಜಮ್ಮು ಕಾಶ್ಮೀರದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನತೆಯ ಪರವಾಗಿ ನಿರಂತರ ಹೋರಾಡುತ್ತಿರುವ ಕೆಂಬಾವುಟದ ನೇತಾರ ತರಿಗಾಮಿ ಅವರ ಬಗ್ಗೆಯೇ.

ಕೇಂದ್ರದ ಪ್ರಭುತ್ವ ನಿರಂತರವಾಗಿ ಜಮ್ಮು ಕಾಶ್ಮೀರವನ್ನು ಭಯೋತ್ಪಾದಕ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾಗ, ತನ್ನ ಸ್ವಾಯತ್ತತೆಯನ್ನು ಉಳಿಸಿಕೊಂಡು ಭಾರತದ ಅವಿಭಾಜ್ಯ ಅಂಗವಾಗಿ ಮುಂದುವರೆಯಲು ಇವರು ಮಾಡಿದ ಚಳುವಳಿ ಅಪಾರ.

ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಕೆಂಬಾವುಟವನ್ನು ಹಿಡಿದು ಜನತೆಯನ್ನು ಸಂಘಟಿಸಿ, ಅವರ ಸಂಕಷ್ಟಗಳಿಗೆ ಮಿಡಿದು, ತನ್ನ ಪ್ರಾಣ ಹೋದರೂ‌ ಪರವಾಗಿಲ್ಲ ನಾನು ಮತ್ತು ನಮ್ಮ ಪಕ್ಷ ಜಮ್ಮು ಕಾಶ್ಮೀರದ ಜನತೆಯ ಬದುಕು ಮತ್ತು ಸ್ವಾಭಿಮಾನದ ಉಳಿವಿಗಾಗಿ ಹೋರಾಡುತ್ತೇವೆಂಬ ಪಣತೊಟ್ಟು ಕುಲ್ಗಾಮ್ ಕ್ಷೇತ್ರದಿಂದ 5 ನೇ ಭಾರಿಗೆ ವಿಧಾನ ಸಭೆಯನ್ನು CPIM ಪ್ರತಿನಿಧಿಸಿ ಶಾಸಕರಾಗಿ ಪ್ರವೇಶಿಸುತ್ತಿದ್ದಾರೆ.

ಇದನ್ನೂ ಓದಿ: ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಆರ್‌ಜಿ ಕಾರ್ ಆಸ್ಪತ್ರೆಯ ಐವತ್ತು ಹಿರಿಯ ವೈದ್ಯರು ಸಾಮೂಹಿಕ ರಾಜೀನಾಮೆ

ಇವರು 1996, 2002, 2008, 2014 ಮತ್ತು 2024 ರ ಚುನಾವಣೆಗಳಲ್ಲಿ ಜನತೆಯಿಂದ ಅಯ್ಕೆಯಾಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕಲಂ 370 ನ್ನು BJP ನೇತೃತ್ವದ ಮೋದಿ ಸರ್ಕಾರ ರದ್ದುಗೊಳಿಸಿ ಎಲ್ಲಾ ಹೋರಾಟಗಾರರು ಮತ್ತು ರಾಜಕೀಯ ನಾಯಕರುಗಳನ್ನು ಗೃಹಬಂದನದಲ್ಲಿಟ್ಟು ಜಗತ್ತಿನೊಂದಿಗೆ ಸಂಪರ್ಕ ಕಡಿತ ಮಾಡಿದ್ದಾಗ, ಇತ್ತೀಚೆಗೆ ನಮ್ಮನ್ನ ಅಗಲಿದ್ದ CPIM ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರು ಸುಪ್ರೀಂ ಕೋರ್ಟ್ ನಲ್ಲಿ habeas corpus ಅರ್ಜಿ ಸಲ್ಲಿಸಿ ಜಮ್ಮು ಕಾಶ್ಮೀರಕ್ಕೆ ಪ್ರವೇಶ ಮಾಡಿ ತರಿಗಾಮಿಯವರನ್ನು ಭೇಟಿ ಮಾಡಿ ಬಂದಿದ್ದ ಏಕೈಕ ವ್ಯಕ್ತಿಯಾಗಿದ್ದರು.

ಜಮ್ಮು ಕಾಶ್ಮೀರದ ಭಯೋತ್ಪಾದಕ ಶಕ್ತಿಗಳಿಗೂ ತರಿಗಾಮಿ ಸಿಂಹಸ್ವಪ್ನವಾಗಿದ್ದರು. ದೇಶದಾದ್ಯಂತ ಜನತೆಯ ಬದುಕು ಹಸನಾಗಲು ಕೆಂಬಾವುಟದ ಕಮ್ಯೂನಿಸ್ಟ್ ಚಳುವಳಿ ಬೆಳೆಯಲಿ.

ಇದನ್ನೂ ನೋಡಿ: ಐಸಿಡಿಎಸ್ ಉಳಿಸಿ ಮಕ್ಕಳನ್ನು ರಕ್ಷಿಸಿJanashakthi Media

Donate Janashakthi Media

Leave a Reply

Your email address will not be published. Required fields are marked *