ಜಗತ್ತಿನ ಕಥೆಗಳಲ್ಲಿ ಲು ಷನ್‌ನ ಕಥೆಗಳಿಗೆ ವಿಶಿಷ್ಟ ಸ್ಥಾನವಿದೆ – ಕೇಶವ ಮಳಗಿ

ದರ್ಶನ್‌ ಹೊನ್ನಾಲೆ

ಸಾಮ್ರಾಜ್ಯಶಾಹಿ ಮತ್ತು ಊಳಿಗಮಾನ್ಯ ಪ್ರಭುಗಳು ಹೊಸ ರೂಪದಲ್ಲಿ ಎದುರಾಗುತ್ತಿರುವ ಈಗಿನ ಸಂದರ್ಭದಲ್ಲಿ, ಸುಮಾರು ನೂರು ವರ್ಷಗಳ ಹಿಂದೆ ಬರೆದ ಲು ಶುನ್ ಕತೆಗಳ ಮರುಓದು, ವಿಶ್ಲೇಷಣೆಗಳು ವಿಶೇಷ ಮಹತ್ವ ಹೊಂದಿವೆ ಎಂದು ಕಥೆಗಾರ ಕೇಶವ ಮಳಗಿ ಅಭಿಪ್ರಾಯಪಟ್ಟರು.

ಸಂಗತ ಪುಸ್ತಕ ಪ್ರಕಾಶನದ ʻಲು ಷುನ್‌ ಕಥೆಗಳುʼ ಎಂಬ ಪುಸ್ತಕದ ಕುರಿತು ಪುಸ್ತಕ ಪ್ರೀತಿ ತಿಂಗಳ ಮಾತುಕತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುಸ್ತಕ ಪ್ರಸ್ತುಪಡಿಸುವ ಹಲವು ವಿಚಾರಗಳನ್ನು ತಿಳಿಸಿದರು. ಯಾವುದೇ ಕಥೆಯಾಗಲಿ, ಕಲೆಯಾಗಲಿ ಪ್ರಾದೇಶಿಕತೆ, ಸ್ಥಳೀಯತೆಯಿಂದ ಪ್ರೆರೇಪಿತಗೊಂಡಿರುತ್ತದೆ. ಹಲವು ಕಟು ವಾಸ್ತವಗಳು ಲು ಷನ್‌ ರಿಗೆ ಮನದಟ್ಟು ಮಾಡಿಕೊಟ್ಟ ಪಾಠಗಳಾಗಿದ್ದವು.  ಆತನಿಗೆ ಚೀನಾದ ಬದುಕಿನ ಸ್ಪಷ್ಟ ಚಿತ್ರ ಕಣ್ಣಮುಂದೆ ಇತ್ತು, ಉಳಿಗಮಾನ್ಯ ಶಕ್ತಿಗಳು, ವಸಾಹತುಶಾಹಿ ಬಲಗಳು ನಡೆಸುತ್ತಿದ್ದ ಶೋಷಣೆ, ಕ್ರೌರ್ಯ, ಅದರಡಿಯಲ್ಲಿತತ್ತರಿಸುತ್ತಿದ್ದ ಜನ ಸಮುದಾಯಗಳ ಕಷ್ಟಗಳು ಆತನನ್ನು ಸುಡುತ್ತಿದ್ದವು. ಜನತೆಯ ಬದುಕನ್ನು ಶೋಷಣೆಯಿಂದ ಮುಕ್ತಗೊಳಿಸುವ ಎಲ್ಲಾ ಮಾರ್ಗಗಳನ್ನು ಆತ ಲೇಖನಿಯ ಮೂಲಕ ತೆರೆಯಲು ಹೊರಟ.

ಜಗತ್ತಿನ ಕಥೆಗಳಲ್ಲಿ ಲು ಷನ್‌ನ ಕಥೆಗಳಿಗೆ ವಿಶಿಷ್ಟ ಸ್ಥಾನವಿದೆ. ಆತನ ಸೃಜನ ಶೀಲತೆ ಎಂತಹದ್ದು ಎಂಬುದನ್ನು ಆ ಕತೆಗಳು ತೋರಿಸುತ್ತವೆ. ಹುಚ್ಚನ ದಿನಚರಿ, ಖಡ್ಗ ತಯಾರಿಸಿದ್ದು, ನನ್ನ ಹಳೆ ಮನೆ ಪ್ರಮುಖವಾದ ಕಥೆಗಳು.  ʻಹುಚ್ಚನ ದಿನಚರಿʼ ಕತೆಯು,  ಚೀನಾದ ಸಾಮಾಜಿಕ ಜೀವನವನ್ನು ತೆರೆದಿಡುತ್ತದೆ. ಸಾಮಾಜಿಕ ತಲ್ಲಣ, ಶೋಷಣ, ಕಂದಾಚಾರದ ಸಮಾಜ ಸಹಜವಾಗಿ ಉಸಿರಾಡುವ ವ್ಯಕ್ತಿಯ ಕತ್ತನ್ನು ಹೇಗೆ ಹಿಸುಕುತ್ತಾರೆ ಎಂಬುದರ ಮೇಲೆ ಬೆಳಕು ಚೆಲ್ಲಿತು. ಖಡ್ಗ ತಯಾರಿಸಿದ್ದು ಕಥೆಯು, ಉಳಿಗ ಮಾನ್ಯ ಶಕ್ತಿಗಳನ್ನು ಸದೆಬಡಿಯುವ ವಿವರಣೆ ನೀಡುತ್ತದೆ.  ಲುಷನ್‌ನ ಕಥೆಗಳು ಚೀನಾದಿಂದ ಇಂಗ್ಲೀಷ್‌ಗೆ, ಇಂಗ್ಲೀಷ್‌ನಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಲು ಷನ್‌ ಕಥೆಗಳಲ್ಲಿ ಮೂಲಭೂತ ಕಾಳಜಿ, ಹಾಗೂ ಸೃಜನಶೀಲತೆಯನ್ನು ಕಾಣಬಹುದು ಎಂದರು.

ಡಾ. ಕುಮಾರಸ್ವಮಿ ಬೆಜ್ಜಿಹಳ್ಳಿ ಮಾತನಾಡಿ,ಲು ಷನ್‌ ಕಥೆಯೊಳಗಿನ ತಂತ್ರ ಜನತೆಯನ್ನು ಒಳಗೊಳ್ಳುವ ಮಾದರಿ. ಅಬ್ಬರದ ಸೈದ್ದಾಂತಿಕ ಹೇರಿಕೆಯ ಸಮಕಾಲೀನ ಸಂದರ್ಭದಲ್ಲಿ,  ಲು ಷನ್‌ ಮಾದರಿಯನ್ನು  ಭಾರತೀಯ ಸಂದರ್ಭಕ್ಕೆ ಕಸು ಮಾಡುವುದರಿಂದ ಹೊಸದಾದ ಮಾದರಿಯನ್ನು ಕಂಡುಹಿಡಿಬಹುದು ಎಂದು ನನಗೆ ಅನಿಸುತ್ತದೆ.  ತುಳಿಯುವ ತುಳಿಸಿಕಳ್ಳುವ ಎರುಡು ರೀತಿಯ ಪಾತ್ರಗಳನ್ನು ಹೊಂದಿರುವ ಕಥೆಗಳು ವ್ಯಂಗ್ಯವನ್ನು ತೋರಿಸುತ್ತವೆ. ತುಳಿಯುವವರನ್ನು ಎಚ್ಚರಿಸುವ ತಂತ್ರವನ್ನು ಇದು ತೋರಿಸುತ್ತದೆ.  ಈ ದಿನಗಳಲ್ಲಿನ ಪರಿಸ್ಥಿತಿಯನ್ನು  ಸಾಮಾಜಿಕ ವ್ಯವಸ್ತೆಯನ್ನು ಸುಧಾರಿಸಲು ಲು ಷುನ್‌ ಮಾದರಿ ಒಂದು ದಾರಿಯೆಂದು ಹೇಳೀದರು.

ಪುಸ್ತಕ ಸಂಪಾದಕರಾದ ಜಿ.ಪಿ. ಬಸವರಾಜು ಮಾತನಾಡಿ, ಮನೋಧರ್ಮವನ್ನು ನಾವು ಬದಲಾಯಿಸಿಕೊಳ್ಳಬೇಕು. ವೈಚಾರಿಕ ಪ್ರಜ್ಙೆಯನ್ನು ಹೆಚ್ಚಿಸಿಕೊಳ್ಳಬೇಕು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯಕ್ಷೇತ್ರಗಳಲ್ಲಿ ಸರಿಯಾದ ಚಿಂತನೆಗಳು ಮುಖ್ಯ ಇವುಗಳನ್ನು ಲು ಷುನ್‌ ಪುಸ್ತಕಗಳಲ್ಲಿ ನಾವು ಕಂಡುಕೊಳ್ಳಬಹುದು ಎಂದು ಹೇಳಿದರು.

ನಂತರ ನಡೆದ ಸಂವಾದದಲ್ಲಿ ಬಿ.ಆರ್.‌ ಮಂಜುನಾಥ್‌, ಟಿ.ಸುರೇಂದ್ರರಾವ್‌, ಜ್ಞಾನೇಶ್ವರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.  ಪುಸ್ತಕ ಪ್ರೀತಿಯ ಕೆ.ಎಸ್‌. ವಿಮಲಾ ಕಾರ್ಯಕ್ರಮವನ್ನು ನಿರ್ವಹಿಸಿದರು,  ಕಾರ್ಯಕ್ರಮದಲ್ಲಿ ಕ್ರಿಯಾ ಮಾಧ್ಯಮದ ಎನ್.ಕೆ. ವಸಂತರಾಜ, ಅನುವಾದಕ ವಿ.ಎನ್‌ ಲಕ್ಷ್ಮಿ ನಾರಾಯಣ್‌, ಎಲ್‌. ಜಗನ್ನಾಥ, ಡಾ. ಜಯಶ್ರೀ, ಕೆ.ವಿ.ಭಟ್‌, ವೇದರಾಜ ಎನ್‌ಕೆ ಸೇರಿದಂತೆ ಅನೇಕರಿದ್ದರು.

ಲು ಷುನ್‌ ಕಥೆಗಳು

ಆಧುನಿಕ ಚೀನಾ ನಿರ್ಮಾಣದಲ್ಲಿ ಅತ್ಯಂತ ಮುಖ್ಯ ಕ್ರಾಂತಿಯಾದ 1919 ಮೇ 4ರ ಚಳವಳಿಯ ಮುನ್ನಾ ವರ್ಷದಲ್ಲಿ ಲು ಷುನ್ ತನ್ನ ಮೊದಲ ಕಥೆ `ಹುಚ್ಚನ ದಿನಚರಿ’ಯನ್ನು ಬರೆದು, ಊಳಿಗಮಾನ್ಯ ಶಕ್ತಿಗಳ ವಿರುದ್ಧ ನೇರ ಯುದ್ಧ ಸಾರಿದ. ಈ ಕಥೆ ಚೀನೀ ಸಾಹಿತ್ಯಕ್ಕೆ ಒಂದು ಹೊಸ ತಿರುವನ್ನೂ ಕೊಟ್ಟಿತು; ಚೀನೀ ಸಾಹಿತ್ಯ ಇತಿಹಾಸದಲ್ಲಿ ಆಧುನಿಕತೆಯ ಹೊಸ ಅಧ್ಯಾಯವನ್ನೇ ತೆರೆಯಿತು.

ಲು ಷುನ್ ಅವರು ಕತೆಗಳನ್ನು ಬರೆದು ಸರಿಯಾಗಿ ಒಂದು ಶತಮಾನ ಕಳೆದುಹೋಗಿದೆ. ನಿರ್ದಿಷ್ಟ ಉದ್ದೇಶಕ್ಕಾಗಿ ಅವರು ಬಳಸುತ್ತಿದ್ದ ಹಾಸ್ಯ, ವ್ಯಂಗ್ಯ, ವಿಡಂಬನೆ, ಗೇಲಿ ಅವನ ಕಥನ ಶೈಲಿಯ ಭಾಗವಾಗಿ ಬಹಳ ಪರಿಣಾಮಕಾರಿಯಾಗಿವೆ. ಸಾಹಿತ್ಯದ ಹೊಳಪನ್ನು ಹೆಚ್ಚಿಸುವಂಥ ಪ್ರಯೋಗಗಳೂ ಇಲ್ಲಿನ ಗದ್ಯ ಕವಿತೆಗಳಲ್ಲಿವೆ.

ಲು ಷುನ್, ಸಾಮ್ರಾಜ್ಯಶಾಹಿಯ ದಿನಗಳಲ್ಲಿ ತುಳಿತದಡಿಯಲ್ಲಿ ನೋವುಂಡಿದ್ದ; ದಿಗ್ಬ್ರಮೆಗೊಂಡಿದ್ದ; ಪ್ರತಿಭಟನೆಯ ಧ್ವನಿ ಎತ್ತಿದ್ದ. ಹಾಗೆಯೇ ತುಳಿತದ ವಿವಿಧ ಸ್ವರೂಪಗಳನ್ನು ಅರ್ಥ ಮಾಡಿಕೊಂಡಿದ್ದ; ಅದರ ವಿರೋಧಾಭಾಸಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ; ಅವನತಿಯ ಕಾರಣಗಳನ್ನು ವಿವೇಚಿಸಿದ್ದ – ಈ ಎಲ್ಲದರ ಫಲವಾಗಿ ರೂಪಗೊಂಡ, ಆತನ ಬರವಣಿಗೆಯ ಪ್ರಧಾನ ಗುಣವಾದ ವ್ಯಂಗ್ಯಕ್ಕೆ ವಿಶಿಷ್ಟವಾದ ಶಕ್ತಿ ಇದೆ; ಪ್ರಚಂಡ ಮೊನಚಿದೆ. ಈ ವ್ಯಂಗ್ಯ ಆತನ ಎಲ್ಲ ಬರವಣಿಗೆಗಳಲ್ಲೂ ಧಾರಾಳವಾಗಿ ಕಾಣಿಸಿಕೊಂಡಿದೆ; ಊಳಿಗಮಾನ್ಯ ಪ್ರಭುಗಳನ್ನು ಚುಚ್ಚಿ ಚುಚ್ಚಿ ಬೆಚ್ಚಿಬೀಳಿಸಿದೆ. ಲು ಷುನ್ ಗ್ರಹಿಕೆ ಮತ್ತು ಕಥನ ಪ್ರತಿಭೆಗೆ ಸಾಕ್ಷಿಯಾಗಿದೆ. ಸಾಹಿತ್ಯಾಸಕ್ತರನ್ನು ಈ  ಕತೆಗಳು ಸೆಳೆಯುತ್ತವೆ.

Donate Janashakthi Media

Leave a Reply

Your email address will not be published. Required fields are marked *