ಲಖ್ನೋ: ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಸಮಾಜವಾದಿ ಪಕ್ಷ(ಎಸ್‌ಪಿ) 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ವಿಪಕ್ಷಗಳ ಮೈತ್ರಿ ಕೂಟದಲ್ಲೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಪಕ್ಷವಾಗಿ ಎಸ್‌ಪಿ ಹೊಮ್ಮಿದೆ ಎಂದು ವರದಿಯಾಗಿದೆ. ಈ ಮೂಲಕ ತಾನು ಚುನಾವಣೆಗೆ ತಯಾರು ಎಂದು ಪಕ್ಷವೂ ಘೋಷಿಸಿದೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಮತ್ತು ಮೈನ್‌ಪುರಿಯ ಹಾಲಿ ಎಸ್‌ಪಿ ಸಂಸದೆ ಡಿಂಪಲ್ ಯಾದವ್ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮೈನ್‌ಪುರಿ ಯಾದವ್ ಕುಟುಂಬದ ಭದ್ರಕೋಟೆಯಾಗಿದ್ದು, ಈ ಕ್ಷೇತ್ರವನ್ನು ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅವರು ಈ ಹಿಂದೆ ಪ್ರತಿನಿಧಿಸಿದ್ದರು.
ಇದನ್ನೂ ಓದಿ: ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ ವಿವಾದ | ಸಿಟಿ ರವಿ ‘ಕೋಮು ಕ್ರಿಮಿ’ ಎಂದ ಕಾಂಗ್ರೆಸ್
ಸಂಭಾಲ್‌ನ ಹಾಲಿ ಸಂಸದ ಶಫೀಕರ್ ರೆಹಮಾನ್ ಬಾರ್ಕ್ ಕೂಡ ಮತ್ತೆ ಅದೇ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ. ಯುಪಿ ಸರ್ಕಾರದ ಮಾಜಿ ಸಚಿವ ರವಿದಾಸ್ ಮೆಹ್ರೋತ್ರಾ ಅವರು ರಾಜ್ಯದ ರಾಜಧಾನಿ ಲಕ್ನೋದಿಂದ ಸ್ಪರ್ಧಿಸಲಿದ್ದಾರೆ. ಮೆಹ್ರೋತ್ರಾ ಅವರು ಪ್ರಸ್ತುತ ಲಕ್ನೋ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.
ಹಿರಿಯ ಎಸ್‌ಪಿ ನಾಯಕ ರಾಮಗೋಪಾಲ್ ಯಾದವ್ ಅವರ ಪುತ್ರ ಅಕ್ಷಯ್ ಯಾದವ್ ಅವರನ್ನು ಫಿರೋಜಾಬಾದ್‌ನಿಂದ ಅಭ್ಯರ್ಥಿಯಾಗಿ ಪಕ್ಷವು ಹೆಸರಿಸಿದೆ. ಧರ್ಮೇಂದ್ರ ಯಾದವ್ ಬುಡೌನ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ರಾಮ್ ಗೋಪಾಲ್ ಯಾದವ್ ಅವರು ಮುಲಾಯಂ ಸೋದರ ಸಂಬಂಧಿಯಾಗಿದ್ದಾರೆ. ಅಲ್ಲದೆ, ಮುಲಾಯಂ ಅವರ ಸೋದರಳಿಯ ಧರ್ಮೇಂದ್ರ ಅವರು 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ಬದೌನ್ ಕ್ಷೇತ್ರದಿಂದ ತ್ತೆ ಸ್ಪರ್ಧಿಸಲಿದ್ದಾರೆ.
ಉತ್ತರ ಪ್ರದೇಶದ ಆಡಳಿತರೂಢ ಪಕ್ಷವಾಗಿದ್ದ ಸಮಾಜವಾದಿ ಪಕ್ಷವು ಪ್ರಸ್ತುತ ಮೂವರು ಲೋಕಸಭಾ ಸಂಸದರು ಮತ್ತು ಮೂವರು ರಾಜ್ಯಸಭಾ ಸಂಸದರನ್ನು ಹೊಂದಿದೆ. 2019ರಲ್ಲಿ ಪಕ್ಷವು 5 ಲೋಕಸಭಾ ಕ್ಷೇತ್ರವನ್ನು ಗೆದ್ದುಕೊಂಡಿತ್ತು. 2022ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು 111 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ವಿಡಿಯೊ ನೋಡಿ: “ರವೀಂದ್ರ ಕಲಾಕ್ಷೇತ್ರಕ್ಕೆ ಆಧುನಿಕ ಸ್ಪರ್ಷ” ಹಿಂದಿರುವ ಹುನ್ನಾರವೇನು? Janashakthi Media