ನವದೆಹಲಿ: 14.2 ಕಿಲೋಗ್ರಾಂ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಅಡುಗೆ ಅನಿಲ) ಸಿಲಿಂಡರ್ ಬೆಲೆಯನ್ನು ಮಂಗಳವಾರದಂದು ಮತ್ತೆ ರೂ.25 ಏರಿಕೆ ಮಾಡಲಾಗಿದೆ. ಸತತ ಎರಡನೇ ತಿಂಗಳು ಹೆಚ್ಚಿಸಿವೆ. ಈ ಏರಿಕೆಯೊಂದಿಗೆ ದೇಶೀಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 859 ರೂ.ಗೆ ತಲುಪಿದೆ.
ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿಯೂ ಇದೇ ಪ್ರಮಾಣದಲ್ಲಿ ಬೆಲೆಗಳು ಏರಿಕೆ ಕಂಡಿವೆ. ತೈಲ ಕಂಪನಿಗಳು ದೇಶೀಯ ಅಡುಗೆ ಅನಿಲದ ಬೆಲೆಯನ್ನು ದೇಶೀಯ ಸಿಲಿಂಡರ್ ಬೆಲೆ ಜೂನ್ 1 ರಂದು 809 ರೂ. ಇತ್ತು. ಇದನ್ನು ಜುಲೈ 1 ರಂದು 834 ರೂ.ಗೆ ಏರಿಸಲಾಗಿದೆ.
ಇದನ್ನು ಓದಿ: ಸತತವಾಗಿ ಏರುತ್ತಿರುವ ಗ್ಯಾಸ್ ಬೆಲೆ ಏರಿಕೆ ವಿರುದ್ಧ ಡಿವೈಎಫ್‌ಐನಿಂದ ರಾಜ್ಯವ್ಯಾಪಿ ಪ್ರತಿಭಟನೆ
ಜನವರಿ 1 ರಿಂದ ಆಗಸ್ಟ್ 17ರ ನಡುವೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ತಲಾ 165 ರೂ ಏರಿಕೆಯಾಗಿದೆ. ಸಂಸತ್ತಿನ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡವನ್ನು ಕಡಿಮೆ ಮಾಡಲು ತೈಲ ಕಂಪನಿಗಳು ಆಗಸ್ಟ್ 1 ರಂದು ಎಲ್ ಪಿ ಜಿ ಬೆಲೆ ಏರಿಕೆಯನ್ನು ತಡೆಹಿಡಿದಿದ್ದವು ಎಂದು ಹೇಳಲಾಗುತ್ತಿದೆ.
ದರ ವಿವರ ಹೀಗಿವೆ
ನವದೆಹಲಿ: ಹೊಸ ದರ: ರೂ. 859.5 ಮತ್ತು ಹಿಂದಿನ ದರ: ರೂ. 834.5
ಮುಂಬೈ: ಹೊಸ ದರ- ರೂ. 859.5 ಮತ್ತು ಹಿಂದಿನ ದರ- ರೂ. 834.5
ಕೋಲ್ಕತ್ತಾ: ಹೊಸ ದರ- ರೂ. 886 ಮತ್ತು ಹಿಂದಿನ ದರ- ರೂ. 861
ಚೆನ್ನೈ: ಹೊಸ ದರ- ರೂ. 875.5 ಮತ್ತು ಹಿಂದಿನ ದರ- ರೂ. 850.5
ಅಡುಗೆ ಅನಿಲ ಸಿಲಿಂಡರ್ ದರವನ್ನು ನಿಗದಿ ಮಾಡುವಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಎಷ್ಟಿದೆ ಎಂಬುದನ್ನು ಹಾಗೂ ಡಾಲರ್ ಮತ್ತು ರೂಪಾಯಿ ಮೌಲ್ಯವನ್ನು ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿನ ಏರಿಕೆಯಿಂದಾಗಿ ಸಾಮಾನ್ಯ ಜನರ ಮೇಲೆ ದೊಡ್ಡ ಮಟ್ಟದ ಹೊರೆ ಬೀಳಲಿದೆ.
ಇದನ್ನು ಓದಿ: ಶತಕದಿಂದ ಈಗ ಸಾವಿರದತ್ತ
ಸಂಪೂರ್ಣ ಸಬ್ಸಿಡಿ ಕಡಿತ
ಕಳೆದ ವರ್ಷ ಸೆಪ್ಟೆಂಬರ್‌ನಿಂದಲೇ ಜನತೆಗೆ ನೀಡಲಾಗುತ್ತಿದ್ದ ಅಡುಗೆ ಅನಿಲ ಸಬ್ಸಿಡಿಯೂ ನಿಂತಿದೆ. ಆಮದು ವೆಚ್ಚ ಮತ್ತು ಮಾರುಕಟ್ಟೆ ದರಗಳು ಸಮಾನವಾಗಿ ಇರುವುದರಿಂದ ಸರಕಾರ ಸಬ್ಸಿಡಿ ವಿತರಿಸುತ್ತಿಲ್ಲ. ಜನತೆಯ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತಿದ್ದ ಸಬ್ಸಿಡಿ ಸ್ಥಗಿತವಾಗಿದೆ. ಹೀಗಿದ್ದರೂ, ಸಬ್ಸಿಡಿ ಸ್ಥಗಿತದಿಂದ ಜನತೆಗೆ ಹೊರೆಯಾಗಿದೆ.
28 ಕೋಟಿ ಅಡುಗೆ ಅನಿಲ ಸಂಪರ್ಕ
ಭಾರತದಲ್ಲಿ 28 ಕೋಟಿ ಅಡುಗೆ ಅನಿಲ ಗ್ರಾಹಕರಿದ್ದಾರೆ. ಇದರಲ್ಲಿಉಜ್ವಲ ಯೋಜನೆಯ ಫಲಾನುಭವಿಗಳೂ ಸೇರಿದ್ದಾರೆ. ಭಾರತ ಈಗ ವಿಶ್ವದಲ್ಲೇ 2ನೇ ಅತಿ ದೊಡ್ಡ ಎಲ್‌ಪಿಜಿ ಬಳಕೆದಾರ ರಾಷ್ಟ್ರವಾಗಿದೆ. ಕೇಂದ್ರ ಸರಕಾರದ ವತಿಯಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. 8 ಕೋಟಿ ಮಂದಿಗೆ ಉಜ್ವಲ ಎಲ್‌ಪಿಜಿ ಬಳಕೆದಾರರು ಇದ್ದಾರೆ. ಇದರ ಮೂಲಕ ಶೇಕಡ 100ರಷ್ಟು ಗುರಿಸಾಧಿಸಲು ಸಹ ಮುಂದಾಗಿದೆ.