ಮಿನಿ ಟ್ರಕ್‌ ಮೇಲೆ ಉರುಳಿಬಿದ್ದ ಮಾವು ತುಂಬಿದ ಲಾರಿ; 9 ಜನ ಸಾವು

ಅಮರಾವತಿ: ಅಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪುಲ್ಲಂಪೇಟೆ ಮಂಡಲದ ರೆಡ್ಡಿಚೆರುವು ಬಳಿ ಮಾವು ತುಂಬಿದ ಲಾರಿಯೊಂದು ಮಿನಿ ಟ್ರಕ್‌ ಮೇಲೆ ಉರುಳಿಬಿದ್ದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹನ್ನೊಂದು ಜನರು ಗಾಯಗೊಂಡಿರುವ ಘಟನೆ  ನಡೆದಿದೆ.

ಜುಲೈ 13 ತಡರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಾರಿಯ ಹಿಂದಿನ ಚಕ್ರ ಮರಳಿನಲ್ಲಿ ಸಿಲುಕಿಕೊಂಡು ಸಮತೋಲನ ಕಳೆದುಕೊಂಡು ಮಿನಿ ಟ್ರಕ್‌ ಮೇಲೆ ಬಿದ್ದಾಗ  ಈ ದುರಂತ ಸಂಭವಿಸಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾವು ಲಾರಿಯ ಮೇಲೆ ಸುಮಾರು 20 ಕ್ಕೂ ಹೆಚ್ಚು ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಶೀಘ್ರ ಮಧ್ಯಪ್ರವೇಶ ಮಾಡಿ ದೇವನಹಳ್ಳಿ ರೈತರ ಪರ ನಿಲ್ಲಿ’ : ಕಾಂಗ್ರೆಸ್ ಹೈಕಮಾಂಡ್‍ಗೆ 65 ಚಿಂತಕರಿಂದ ಬಹಿರಂಗ ಪತ್ರ

ಸ್ಥಳಕ್ಕೆ ದಾವಿಸಿದ ಪೊಲೀಸರು ಗಾಯಾಳುಗಳನ್ನು ಆಂಬುಲೆನ್‌ ಮೂಲಕ ರಾಜಂಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಬದುಕುಳಿದ ಟ್ರಕ್‌ ಚಾಲಕನ ಮಾಹಿತಿಯಂತೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸುವಾಗ ನಿಯಂತ್ರಣ ತಪ್ಪಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಅನ್ನಮಯ್ಯ ಜಿಲ್ಲೆಯ ರೈಲೇ ಕೊಡೂರು ಮಂಡಲ ಮತ್ತು ತಿರುಪತಿ ಜಿಲ್ಲೆಯ ವೆಂಕಟಗಿರಿ ಮಂಡಲದ 21 ದಿನಗೂಲಿ ಕಾರ್ಮಿಕರ ಗುಂಪು ರಾಜಂಪೇಟೆ ಮಂಡಲದ ಎಸುಕಪಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ತೋಟಗಳಿಂದ ಮಾವು ಕೀಳಲು ಹೋಗಿದ್ದರು. ಮಾವಿನ ಹೊರೆಯೊಂದಿಗೆ, ಟ್ರಕ್‌ ರೈಲ್ವೆ ಕೊಡೂರು ಮಾರುಕಟ್ಟೆಗೆ ಹೋಗುತ್ತಿತ್ತು, ಮತ್ತು ಕಾರ್ಮಿಕರು ಮಾವಿನ ಹೊರೆಯ ಮೇಲೆ ಕುಳಿತಿದ್ದರು.

ಕಾರ್ಮಿಕರು 30-40 ಟನ್‌ ಮಾವಿನ ಹಣ್ಣುಗಳ ಅಡಿಯಲ್ಲಿ ಸಿಲುಕಿಕೊಂಡರು. ಪೊಲೀಸರು ಸ್ಥಳಕ್ಕೆ ಧಾವಿಸಿ ಜೆಸಿಬಿ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಇದನ್ನೂ ನೋಡಿ: ಎದೆಗೆ ನಾಟುವ ಸಿನಿಮಾ – ಹೆಬ್ಬುಲಿ ಕಟ್ – ಚಂದ್ರಪ್ರಭ ಕಠಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *