ಬೆಂಗಳೂರು: ಲೋಕಾಯುಕ್ತ ಪೊಲೀಸರು ಮಂಗಳವಾರ ನಡೆಸಿದ ದಾಳಿಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ 25.58 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದ್ದಾರೆ. ಮಂಗಳವಾರ ಬೆಂಗಳೂರು ಮತ್ತು ರಾಮನಗರ ವಿಭಾಗದಲ್ಲಿ ಲೋಕಾಯುಕ್ತ ಪೊಲೀಸರು ಆರು ಜನರ ಮೇಲೆ ದಾಳಿ ಮಾಡಿತ್ತು.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾ.ಪಂ.ಸದಸ್ಯ ಎಚ್.ಎಸ್.ಸುರೇಶ್ ಆರೋಪಿಯಾಗಿದ್ದಾರೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಆರು ಜನರ ಪೈಕಿ ಇವರ ಸಂಪತ್ತು ಅತ್ಯಧಿಕವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಸುಪ್ರೀಂಕೋರ್ಟ್!
ಸುರೇಶ್ ಅವರ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ರಾಮನಗರ ವಿಭಾಗದ ಪೊಲೀಸರು, 16 ನಿವೇಶನ, ಒಂದು ಮನೆ, 7 ಎಕರೆ 6 ಗುಂಟಾ ಕೃಷಿ ಭೂಮಿ ಸೇರಿದಂತೆ 21.27 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 11.97 ಲಕ್ಷ ನಗದು, 2.11 ಕೋಟಿ ಮೌಲ್ಯದ ಆಭರಣಗಳು ಮತ್ತು 2.07 ಕೋಟಿ ಮೌಲ್ಯದ ವಾಹನಗಳು ಸೇರಿದಂತೆ ಅವರ ಚರ ಆಸ್ತಿ 4.30 ಕೋಟಿ ರೂ. ಪೊಲೀಸರು ಹೇಳಿದ್ದಾರೆ.
ಇಷ್ಟೆ ಅಲ್ಲದೆ, ಬೆಂಗಳೂರಿನ ಕೆ.ಆರ್.ವೃತ್ತದ ಬೆಸ್ಕಾಂನ ಪ್ರಧಾನ ಕಛೇರಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ (ಕಾರ್ಯಾಚರಣೆ) ಎಂ.ಎಲ್.ನಾಗರಾಜ್ ಅವರು 13 ನಿವೇಶನ, ಎರಡು ಮನೆ, 12 ಎಕರೆ 30 ಗುಂಟಾ ಕೃಷಿ ಭೂಮಿ, ರೂ.6.77 ಲಕ್ಷ ನಗದು, ರೂ.16.44 ಲಕ್ಷ ಮೌಲ್ಯದ ಆಭರಣಗಳು ಹಾಗೂ ಇತರೆ ಸೇರಿದಂತೆ 6.37 ಕೋಟಿ ರೂ.ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಇತರ ನಾಲ್ವರು ಅಧಿಕಾರಿಗಳ ಅಕ್ರಮ ಆಸ್ತಿ ವಿವರಗಳು ಕೆಳಗಿನಂತಿವೆ:
1. ಡಿ.ಎಂ.ಪದ್ಮನಾಭ,
ಪಂಚಾಯತ್ ಅಭಿವೃದ್ಧಿ ಅಧಿಕಾರಿ,
ದೇವನಹಳ್ಳಿ ತಾಲ್ಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಚರ ಆಸ್ತಿಗಳು: ರೂ 5.35 ಕೋಟಿ.
ಸ್ಥಿರಾಸ್ತಿಗಳು: ರೂ 63.66 ಲಕ್ಷ
ಒಟ್ಟು: ರೂ 5.98 ಕೋಟಿ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ಆಹ್ವಾನ ವಿಚಾರ | ಕೊನೆಗೂ ತೀರ್ಮಾನ ಕೈಗೊಂಡ ಕಾಂಗ್ರೆಸ್ ಹೇಳಿದ್ದೇನು?
2. ಎನ್ ಸತೀಶ್ ಬಾಬು,
ಸೂಪರಿಂಟೆಂಡೆಂಟ್ ಇಂಜಿನಿಯರ್,
ಪಿಡಬ್ಲ್ಯೂಡಿ,
ಕೆಆರ್ ಸರ್ಕಲ್, ಬೆಂಗಳೂರು.
ಚರ ಆಸ್ತಿಗಳು: ರೂ 3.70 ಕೋಟಿ.
ಸ್ಥಿರಾಸ್ತಿಗಳು: ರೂ 82.32 ಲಕ್ಷ.
ಒಟ್ಟು: ರೂ 4.52 ಕೋಟಿ.
3. ಸೈಯದ್ ಮುನೀರ್ ಅಹಮದ್,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್,
ಕೆಆರ್ಐಡಿಎಲ್, ರಾಮನಗರ.
ಚರ ಆಸ್ತಿಗಳು: ರೂ 4.10 ಕೋಟಿ
ಸ್ಥಿರಾಸ್ತಿಗಳು: ರೂ. 1.38 ಕೋಟಿ
ಒಟ್ಟು: ರೂ 5.48 ಕೋಟಿ
4. ಮಂಜೇಶ್ ಬಿ,
ಸದಸ್ಯ ಕಾರ್ಯದರ್ಶಿ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು,
ಆನೇಕಲ್ ಯೋಜನಾ ಪ್ರಾಧಿಕಾರ, ಆನೇಕಲ್ ತಾಲ್ಲೂಕು,
ಬೆಂಗಳೂರು ಜಿಲ್ಲೆ.
ಚರ ಆಸ್ತಿ: ರೂ 1.98 ಕೋಟಿ
ಸ್ಥಿರ ಆಸ್ತಿಗಳು: ರೂ 1.20 ಕೋಟಿ
ಒಟ್ಟು: ರೂ 3.18 ಕೋಟಿ
ವಿಡಿಯೊ ನೋಡಿ: ಹೆಂಚುಗಳು ನಿರ್ಮಾಣವಾಗುವುದು ಹೇಗೆ? ಅದರ ಹಿಂದಿರುವ ಕಾರ್ಮಿಕರ ಶ್ರಮ ಎಂತದ್ದು? ಈ ವಿಡಿಯೋ ನೋಡಿ Janashakthi Media