ಲೋಕಸಭಾ ಚುನಾವಣೆ; ತೇಜಸ್ವಿ ಸೂರ್ಯ, ಸೌಮ್ಯಾರೆಡ್ಡಿ ಪೈಪೋಟಿ

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನ ಹತ್ತಿರವಾಗುತ್ತಿದ್ದಂತೆ ಚುನಾವಣಾ ಅಖಾಡ ರಂಗೇರಿದೆ. ಪಕ್ಷ ಪ್ರತಿಪಕ್ಷಗಳ ಅಭ್ಯರ್ಥಿಗಳು ಮತಬೇಟೆಗೆ ಭರ್ಜರಿ ಜಾಥಾ, ಮೆರವಣಿಗೆ ನಡೆಸುತ್ತಿದ್ದಾರೆ. ಪ್ರಸ್ತುತ ಈ ಕ್ಷೇತ್ರದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಸಂಸದರಾಗಿದ್ದು, ಮತ್ತೊಂದು ಬಾರಿ ಕಣಕ್ಕಿಳಿದಿದ್ದಾರೆ. ಇವರಿಗೆ ಸ್ಪರ್ಧೆ ನೀಡಲು ಕಾಂಗ್ರೆಸ್‌, ಸಚಿವ ರಾಮಲಿಂಗಾರೆಡ್ಡಿ ಪುತ್ರಿ, ಜಯನಗರ ಮಾಜಿ ಶಾಸಕಿ ಸೌಮ್ಯಾರೆಡ್ಡಿಯನ್ನು ಕಣಕ್ಕಿಳಿಸಿದೆ.

ಕಳೆದ ಬಾರಿ ಕಾಂಗ್ರೆಸ್‌ನ ಹಿರಿಯ ಬಿ.ಕೆ.ಹರಿಪ್ರಸಾದ್‌ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದರು.1977 ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸ್ಥಾಪನೆಯಾಗಿದೆ. ಇಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಯಾವುದೂ ಮೀಸಲಾತಿಯನ್ನು ಹೊಂದಿಲ್ಲ. ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿ.ಟಿ.ಎಂ.ಲೇಔಟ್‌, ಜಯನಗರ, ಬೊಮ್ಮನಹಳ್ಳಿ ಇವು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಾಗಿವೆ.

ಇದನ್ನು ಓದಿ : ಕರ್ನಾಟಕದಲ್ಲಿ ಮತಕೇಳುವ ಮೊದಲು ಕನ್ನಡಿಗ ಮತದಾರರ ಪ್ರಶ್ನೆಗಳಿಗೆ ಅಮಿತ್ ಶಾ ಉತ್ತರಿಸಲಿ:ಶಾಗೆ ಸಿದ್ದರಾಮಯ್ಯ ಸಾಲುಸಾಲು ಪ್ರಶ್ನೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಇತಿಹಾಸವನ್ನುನೋಡುವುದಾದರೆ, ಸ್ವಾತಂತ್ರ್ಯಾನಂತರ ಈ ಕ್ಷೇತ್ರ ಮೈಸೂರು ರಾಜ್ಯಕ್ಕೆ ಸೇರಿತ್ತು. ವಕೀಲರಾಗಿದ್ದ ಟಿ.ಮಾದಯ್ಯಗೌಡ ಮೊದಲ ಬಾರಿಗೆ ಇಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಗೆದ್ದರು. 1956 ರಲ್ಲಿ ಆದ ರಾಜ್ಯಗಳ ಮರುಸಂಘಟನಾ ಕಾಯಿದೆಯ ಬಳಿಕ ಬೆಂಗಳೂರು ದಕಿಷಣ ಕ್ಷೇತ್ರ ಕರ್ನಾಟಕ ರಾಜ್ಯಕ್ಕೆ ವಿಲೀನಗೊಂಡಿತು. ತುರ್ತುಪರಿಸ್ಥಿತಿಯ ನಂತರ, ಬೆಂಗಳೂರು ದಕ್ಷಿಣವಾಗಿ 1977 ರಲ್ಲಿ ಈ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಅಂದಿನಿಂದ 12 ಬಾರಿ ಚುನಾವಣೆ ಈ ಕ್ಷೇತ್ರದಲ್ಲಾಗಿದೆ. ಬಿಜೆಪಿ 8 ಬಾರಿ, ಜನತಾ ಪಕ್ಷ 3 ಬಾರಿ ಮತ್ತು ಕಾಂಗ್ರೆಸ್ ಕೇವಲ ಒಂದು ಬಾರಿ ಗೆದ್ದಿದೆ. ಬಿಜೆಪಿ ನಾಯಕ ಅನಂತ್ ಕುಮಾರ್ ಈ ಕ್ಷೇತ್ರದಿಂದ ಸತತ 6 ಬಾರಿ ಗೆದ್ದಿದ್ದಾರೆ.

ಇದನ್ನು ನೋಡಿ : 2024ರ ಚುನಾವಣೆಯಲ್ಲಿ BJP ಸೋಲಲಿದೆ, INDIA ಕೂಟ ಅಧಿಕಾರಕ್ಕೆ ಬರುತ್ತದೆ- ಬಿ ಕೆ ಹರಿಪ್ರಸಾದ್ Janashakthi Media

Donate Janashakthi Media

Leave a Reply

Your email address will not be published. Required fields are marked *