ಮೊದಲ ಹಂತದ ಮತದಾನ ಮುಕ್ತಾಯ; ಒಟ್ಟಾರೆ ಶೇ.59.7 ರಷ್ಟು ಮತದಾನ

ನವದೆಹಲಿ:2024ರ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಿಗೆ ಶುಕ್ರವಾರ ಏಪ್ರಿಲ್‌ 19 ರಂದು ಮತದಾನ ನಡೆದಿದ್ದು, ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಿತು. ಮತದಾನ ಮುಕ್ತಾಯಗೊಂಡಾಗ ಅಂದಾಜು ಶೇ.59.7ರಷ್ಟು ಮತದಾನ ನಡೆದಿರುವ ಮಾಹಿತಿ ಸಿಕ್ಕಿದೆ. ತಮಿಳುನಾಡಿನಲ್ಲಿ ಶೇ.63.2, ರಾಜಸ್ಥಾನದಲ್ಲಿ ಶೇ.50.3, ಉತ್ತರ ಪ್ರದೇಶದಲ್ಲಿ ಶೇ.57.5 ಮತ್ತು ಮಧ್ಯಪ್ರದೇಶದಲ್ಲಿ ಶೇ.63.3ರಷ್ಟು ಮತದಾನವಾಗಿದೆ. ಮೊದಲ

ತಮಿಳುನಾಡಿನ 39 ಸ್ಥಾನಗಳು, ಉತ್ತರಾಖಂಡದ ಎಲ್ಲಾ ಐದು ಸ್ಥಾನಗಳು, ಅರುಣಾಚಲ ಪ್ರದೇಶ, ಮಣಿಪುರ ಮತ್ತು ಮೇಘಾಲಯದ ಎರಡೂ ಸ್ಥಾನಗಳು ಮತ್ತು ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂನ ತಲಾ ಒಂದು ಸ್ಥಾನಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಿತು.

ರಾಜಸ್ಥಾನದ 25 ರಲ್ಲಿ 12, ಉತ್ತರ ಪ್ರದೇಶದ 80 ರಲ್ಲಿ 8, ಮಧ್ಯಪ್ರದೇಶದ 29 ರಲ್ಲಿ 6, ಮಹಾರಾಷ್ಟ್ರದ 48 ರಲ್ಲಿ 5, ಅಸ್ಸಾಂನ 14 ರಲ್ಲಿ 5 ಮತ್ತು ಬಿಹಾರದ 40 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಲ್ಲದೇ ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ ಮೂರು, ಛತ್ತೀಸ್‌ಗಢದ 11 ಸ್ಥಾನಗಳಲ್ಲಿ ಒಂದು ಮತ್ತು ತ್ರಿಪುರಾದಲ್ಲಿ ಎರಡು ಸ್ಥಾನಗಳ ಪೈಕಿ ಒಂದಕ್ಕೆ ಚುನಾವಣೆ ನಡೆಯಿತು.

ಕೇಂದ್ರಾಡಳಿತ ಪ್ರದೇಶಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಐದರಲ್ಲಿ ಒಂದು ಸ್ಥಾನ, ಹಾಗೆಯೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿನ ತಲಾ 1 ಸ್ಥಾನಗಳಿಗೆ ಚುನಾವಣೆ ನಡೆಯಿತು. ಶುಕ್ರವಾರ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ 92 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಿತು.

543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.ಈ ಹಂತದಲ್ಲಿ 16.63 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ಮತದಾರರಲ್ಲಿ 8.4 ಕೋಟಿ ಪುರುಷರು, 8.23 ಕೋಟಿ ಮಹಿಳೆಯರು ಮತ್ತು 11,371 ತೃತೀಯಲಿಂಗಿಗಳು ಸೇರಿದ್ದಾರೆ. 35.67 ಲಕ್ಷ ಮೊದಲ ಬಾರಿಗೆ ಮತದಾರರಿದ್ದರೆ, ಜೊತೆಗೆ 20-29 ವರ್ಷ ವಯಸ್ಸಿನ 3.51 ಕೋಟಿ ಯುವ ಮತದಾರರಿದ್ದರು.

ನಾಗಾಲ್ಯಾಂಡ್ ಆರು ಜಿಲ್ಲೆಗಳಲ್ಲಿ ಶೂನ್ಯ ಮತದಾನಕ್ಕೆ ಕಾರಣವೇನು?

ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ ಘೋಷಿಸಿರುವ ಸಾರ್ವಜನಿಕ ತುರ್ತು ಪರಿಸ್ಥಿತಿಗೆ ಅಲ್ಲಿನ ಜನರು ಸ್ಪಂದಿಸಿದ್ದಾರೆ. ಇವತ್ತು ಬೆಳಗ್ಗೆ 7 ರಿಂದ ಆರಂಭವಾಗಿದ್ದ 9 ಗಂಟೆಗಳ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು. ನಾಗಾಲ್ಯಾಂಡ್‌ನ ಪೂರ್ವದ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ ದಾಖಲಾಯಿತು. ಹೆಚ್ಚು ಆರ್ಥಿಕ ಸ್ವಾಯತ್ತತೆಯೊಂದಿಗೆ ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸಿ ಇಲ್ಲಿ ಲೋಕಸಭೆ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು.

 

Donate Janashakthi Media

Leave a Reply

Your email address will not be published. Required fields are marked *