ದಾವಣಗೆರೆ: ತಾಲೂಕಿನ ಮಾಯಕೊಂಡ ಹೋಬಳಿಯ ಮಳಲಕೆರೆ ಗ್ರಾಮದಲ್ಲಿ ಲೈನ್ ಮ್ಯಾನ್ ಓರ್ವ ವಿದ್ಯುತ್ ಟ್ರಾನ್ಸ್ಫಾರ್ಮರ್ ರಿಪೇರಿ ಮಾಡುತ್ತಿರುವ ವೇಳೆ ವಿದ್ಯುತ್ ಶಾಕ್ ನಿಂದ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಲೈನ್ ಮ್ಯಾನ್ ನನ್ನು ಮುತ್ತು(32) ಎಂದು ಗುರುತಿಸಲಾಗಿದೆ. ರಿಪೇರಿ
ಟಿಸಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಿದ್ಯುತ್ ಸಮಸ್ಯೆ ಎದುರಾಗಿತ್ತು ಹಾಗಾಗಿ ಗ್ರಾಮಸ್ಥರು ಕೆಇಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಇಂದು ಲೈನ್ ಮ್ಯಾನ್ ದುರಸ್ಥಿಗೆ ಎಂದು ಆಗಮಿಸಿದ್ದ. ಈ ವೇಳೆ ಹೈ ವೋಲ್ಟೇಜ್ ವಿದ್ಯುತ್ ನಿಂದಾಗಿ ಲೈನ್ ಮ್ಯಾನ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಾಗಿಲ ಬಳಿ ನಿಲ್ಲಬೇಡ ಎಂದಿದ್ದಕ್ಕೆ ಬಸ್ ಕಂಡಕ್ಟರ್‌ಗೆ ಚಾಕುವಿನಿಂದ ಇರಿದ ಪ್ರಯಾಣಿಕ
ಲೈನ್‌ಮ್ಯಾನ್‌ಗೆ ಕೈಗವಸು, ಶೂ, ಇತರೆ ಜೀವ ರಕ್ಷಕ ಅಗತ್ಯ ಸಲಕರಣೆಗಳಿರಬೇಕು ಆದರೆ ಕೆಇಬಿ ಸಿಬ್ಬಂದಿ ಯಾವುದೇ ಕೈಗವಸು ಶೂ ಇಲ್ಲ. ಲೈನ್ ಮ್ಯಾನ್ ಸಾವಿಗೆ ಕೆಇಬಿ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ನೋಡಿ: ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ – 2024