ಚಿತ್ರದ ಶೂಟಿಂಗ್ ವೇಳೆ ಲೈಟ್ ಮ್ಯಾನ್ ಸಾವು; ನಿರ್ದೇಶಕ ಯೋಗರಾಜ್ ಭಟ್ ಎಫ್​ಐಆರ್​ ದಾಖಲು

ಬೆಂಗಳೂರು:   ಚಿತ್ರದ ಶೂಟಿಂಗ್ ವೇಳೆ 30 ಅಡಿ ಮೇಲಿಂದ ಬಿದ್ದು ಲೈಟ್ ಮ್ಯಾನ್ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾದ ಶೂಟಿಂಗ್ ವೇಳೆ ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ವಿ.ಆರ್.ಎಲ್ ಗೋಡೌನ್​ನಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ ನಿರ್ದೇಶಕ ಯೋಗರಾಜ್ ಭಟ್ ಮತ್ತು ಮೂವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯದ ವಹಿಸಿದ ಹಿನ್ನೆಲೆಯಲ್ಲಿ ಮನದ ಕಡಲು ಸಿನಿಮಾದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಅಡಕಮಾರನಹಳ್ಳಿಯ ಈ.ಕೆ. ಕೃಷ್ಣಪ್ಪ, ಮಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ವಿರುದ್ಧ ದೂರು ದಾಖಲಾಗಿದೆ.

ಇದನ್ನು ಓದಿ : ಆಂಬ್ಯುಲೆನ್ಸ್‌ ನಿರಾಕರಣೆ : ಮಕ್ಕಳಿಬ್ಬರ ಶವ ಹೊತ್ತುಕೊಂಡೇ 15 ಕಿಮೀ ಸಾಗಿದ ಕುಟುಂಬ!

ವಿ.ಆರ್.ಎಲ್ ಗೋಡೌನ್​ನಲ್ಲಿ ಕಳೆದ 15 ದಿನಗಳಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಮಂಗಳವಾರ ಸಂಜೆ 5.10ರ ಸುಮಾರಿಗೆ 30 ಅಡಿ ಎತ್ತರದ ಅಲ್ಯುಮಿನಿಯಂ ರೊಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುತ್ತಿದ್ದಾಗ ಆಯಾತಪ್ಪಿ ಲೈಟ್ ಮ್ಯಾನ್ ಮೋಹನ್ ಕುಮಾರ್ ಕೆಳಗೆ ಬಿದ್ದಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಮೋಹನ್ ರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಆಂಬ್ಯುಲೆನ್ಸ್‌ ನಿರಾಕರಣೆ : ಮಕ್ಕಳಿಬ್ಬರ ಶವ ಹೊತ್ತುಕೊಂಡೇ 15 ಕಿಮೀ ಸಾಗಿದ ಕುಟುಂಬ!Janashakthi Media

 

Donate Janashakthi Media

Leave a Reply

Your email address will not be published. Required fields are marked *