ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರನ್ನು ‘ಕೊಂದವರು ಯಾರು’ ಆಂದೋಲನದ ಪ್ರತಿನಿಧಿಗಳು ನವೆಂಬರ್ 26ರಂದು ಭೇಟಿ ಮಾಡಿ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಈ ನಿಯೋಗದಲ್ಲಿ ಹೋರಾಟಗಾರರಾದ ಕೆ.ಎಸ್.ವಿಮಲಾ, ಆಶಾ ರಮೇಶ್ ಮತ್ತು ಮಲ್ಲಿಗೆ ಸಿರಿಮನೆ ಇತರರು ಇದ್ದರು.
ಇದನ್ನೂ ಓದಿ: ಇಂಡಿ | ಸಂಸ್ಕೃತಿ ಹಾಗೂ ಪರಂಪರೆ ಒಗ್ಗೂಡಿಸುವ ಆಶಯ ಸಂವಿಧಾನ ಹೊಂದಿದೆ – ಪ್ರೊ ಬಿಳಿಮಲೆ
ಮುಂದಿನ ಹಂತದ ತನಿಖೆ ವೇಳೆ ದೂರುದಾರರು ಹಾಗೂ ಸಾಕ್ಷಿಗಳಿಗೆ ರಕ್ಷಣೆ ಒದಗಿಸಬೇಕು. ಸಾಕ್ಷ್ಯ ಸಂಗ್ರಹದಲ್ಲಿ ಎಚ್ಚರಿಕೆ ವಹಿಸಬೇಕು. ಹಿಂದಿನ ಪ್ರಕರಣಗಳು ಮತ್ತು ಸಾಕ್ಷಿಗಳ ಸಾವುಗಳ ತನಿಖೆ, ಮರು ಪರಿಶೀಲನೆ ನಡೆಸಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ತನಿಖೆಗೆ ಅಡ್ಡಿಪಡಿಸಿದವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಬೇಕು ಎಂದು ನಿಯೋಗವು ಆಗ್ರಹಿಸಿತು.
ಇದನ್ನೂ ನೋಡಿ: ಕಾರ್ಖಾನೆ ಕಾರ್ಮಿಕರ ಸಂಕಟಗಳು |CITU | ಕಾರ್ಮಿಕರು Janashakthi Media
