ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಎಚ್ಚರಿಕೆಯ ಅನಾಮಧೇಯ ಪತ್ರವೊಂದು ಕೆಲ ಅಂಗಡಿಗಳಿಗೆ ಬಂದಿದ್ದು, ಇದೀಗ ಅಂಗಡಿ ಮಾಲೀಕರನ್ನು ಆತಂಕಕ್ಕೀಡುಮಾಡಿದೆ.
ಮಯೂರ ಜ್ಯುವೆಲ್ಲರ್ಸ್, ಕಾರ್ತಿಕ್ ಜ್ಯುವೆಲ್ಲರ್ಸ್, ವಾಸುಕಿ ಯು ಶಾಪಿ, ಚಾಮರಾಜನಗರದ ದೊಡ್ಡಂಗಡಿ ಬೀದಿ ಅಂಗಡಿ ಮಾಲೀಕರಿಗೆ ಈ ಎಚ್ಚರಿಕೆ ಪತ್ರ ಬಂದಿದೆ.
ಇದನ್ನು ಓದಿ : ಅಕ್ರಮ ಮರಳು ಸಾಗಾಟ ಮಾಡುವರ ಪರ ವಹಿಸಿದ ಶಾಸಕನಿಗೆ ಮಹಿಳಾ ಅಧಿಕಾರಿ ತಿರುಗೇಟು
ಪತ್ರದಲ್ಲಿ ಅಂಗಡಿ ಮುಂದೆ ಹಾಕಿರುವ ಸಿಸಿ ಕ್ಯಾಮೆರಾ ತೆಗೆಯಿರಿ. ಒಂದು ವೇಳೆ ಸಿಸಿ ಕ್ಯಾಮೆರಾ ತೆಗೆಯದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಸದ್ಯ ಅಂಗಡಿ ಮಾಲೀಕರು ಈ ಸಂಬಂಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸರಣಿ ಕಳ್ಳತನ: ಚಾಮರಾಜನಗರದ ಹೃದಯಭಾಗದಲ್ಲೇ, ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತ ಆಸುಪಾಸಲ್ಲೇ ಸರಣಿ ಕಳ್ಳತನ ತಡರಾತ್ರಿ ನಡೆದಿದ್ದು ವ್ಯಾಪರಸ್ಥರು, ಉದ್ಯಮಿಗಳು ಇದರಿಂದ ದಿಗಿಲುಗೊಂಡಿದ್ದಾರೆ. ಸ್ವಾಗತ್ ಟ್ರೇಡರ್ಸ್, ಪ್ರಭು ಎಲೆಕ್ಟ್ರಿಕಲ್, ವಿನಯ್ ಆಟೋಮೊಬೈಲ್‌ಗಳಲ್ಲಿ ಕಳ್ಳತನ ನಡೆದಿದ್ದು, ಸಿಸಿಟಿವಿಗಳನ್ನು ಜಖಂ ಮಾಡಿ, ಏಣಿಗಳನ್ನು ಬಳಸಿ ಕಳ್ಳರು ಕೃತ್ಯ ಎಸಗಿದ್ದಾರೆ. ಅಂಗಡಿಗಳ ಗ್ಲಾಸ್ ಕೂಡ ಒಡೆದು ಹಾಕಿರುವ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು, ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಹನೂರು ತಾಲ್ಲೂಕಿನಲ್ಲಿ ಹಾಡಹಗಲೇ ವೃದ್ಧನ ಕೈ-ಕಾಲು ಕಟ್ಟಿ ಹಣ ದೋಚಿದ್ದರು. ಇದಕ್ಕೂ ಮುನ್ನ, ಹನೂರಲ್ಲೇ ಮದುವೆಗೆ ಕೂಡಿಟ್ಟಿದ್ದ ಹಣವನ್ನು ದೋಚಿದ್ದರು.
ಇದನ್ನು ನೋಡಿ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ `FIR’ ದಾಖಲು : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?Janashakthi Media