ಕಾರವಾರ: ದುಡಿಯುವ ವರ್ಗದ ಮೇಲಿನ ದಬ್ಬಾಳಿಕೆ ಹಿಮ್ಮೆಟ್ಟಿಸಲು, ಕಾರ್ಮಿಕ ಕಾಯ್ದೆಗಳ ಸಂಹಿತಿಕರಣ ವಿರೋಧಿಸಿ, ಬೆಲೆ ಏರಿಕೆ ತಡೆಗಟ್ಟಿ ಶಾಸನಬದ್ಧ ಕನಿಷ್ಠ ಕೂಲಿಗಾಗಿ, ಯೋಜನಾ ಕಾರ್ಮಿಕರನ್ನೂ ಒಳಗೊಂಡ ಎಲ್ಲಾ ದುಡಿಯುವ ಮಹಿಳೆಯರ ಹಕ್ಕುಗಳಿಗಾಗಿ, ಪರಿಸರ ಪೂರಕ ಉದ್ಯೋಗಾವಕಾಶಕ್ಕಾಗಿ, ಜಿಲ್ಲೆಯ ಅಭಿವೃದ್ಧಿ ಹಾಗೂ ಕೋಮು ಸೌಹಾರ್ದತೆ ಸಾಧಿಸಲು, ರೈತ, ಕಾರ್ಮಿಕ, ಕೃಷಿಕೂಲಿಕಾರರ ಸಖ್ಯತೆ ಬಲಗೊಳಿಸಲು ಎರಡು ದಿನಗಳ ಜಿಲ್ಲಾ ಸಮ್ಮೇಳನ ನಡೆಸಲಾಯಿತು. ರಾಜಕೀಯ
ಸಮ್ಮೇಳನದಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಜನತೆಯ ಮೇಲೆ ತನ್ನ ಪ್ರತಿಗಾಮಿ ನೀತಿಗಳನ್ನು ಹೇರಲು ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿರುವುದನ್ನು ನೈಜ ದೇಶಪ್ರೇಮಿಗಳು ಒಗ್ಗಟ್ಟಿನಿಂದ ಹಿಮ್ಮೆಟ್ಟಿಸಬೇಕು ಎಂದು ಹೇಳಿದರು. ರಾಜಕೀಯ
ಈಗಾಗಲೇ ಕಾರ್ಮಿಕ ಕಾಯ್ದೆಗಳನ್ನು ಸಂಹಿತೆಯಾಗಿಸಲು ಹೊರಟ ಕೇಂದ್ರ ಎನ್.ಡಿ.ಎ ಸರ್ಕಾರವನ್ನು ತಡೆದವರು ಈ ದೇಶದ ಕಾರ್ಮಿಕ ವರ್ಗ ಎಂಬುದನ್ನು ನೆನಪಿಡಿ. ಸರ್ಕಾರ ತಾನು ಏರಿಸಿದ ಜಿಎಸ್.ಟಿಯನ್ನು ಕಡಿಮೆ ಮಾಡಿದ್ದೇವೆ ದುಡ್ಡು ಉಳಿಸಿ ಎಂದು ಹೇಳುವುದು ಶ್ರಮಿಕರ ಮೇಲೆ ಮಾಡಿದ ವ್ಯಂಗ್ಯವಾಗಿದೆ. ಇದರ ಹಿಂದೆ ತಪ್ಪು ಆರ್ಥಿಕ ನೀತಿಯ ಷಡ್ಯಂತ್ರವಿದೆ. ಆಮದು ರಫ್ತು ವಿಚಾರದಲ್ಲಿಯೂ ಅಮೇರಿಕಾಕ್ಕೆ ಶರಣಾಗುವ ಸ್ಥಿತಿ ಅತ್ಯಂತ ಖಂಡನೀಯ. ರಾಜಕೀಯ
ಇದನ್ನೂ ಓದಿ: ಬೆಂಗಳೂರು | ನಟ ವಶಿಷ್ಠ ಸಿಂಹ : ನೀರಿದ್ದರೆ ನಾಳೆ’ ಯೋಜನೆ: ಜಾಗೃತಿ ಅಭಿಯಾನಕ್ಕೆ ರಾಯಭಾರಿಯಾಗಿ ಆಯ್ಕೆ
ಗಡಿಯಲ್ಲಿ ಮತ್ತು ಗಡಿಯಾಚೆಯ ಯುದ್ಧವನ್ನು ಕೆಲವರು ಸಂಭ್ರಮಿಸುತ್ತಿದ್ದಾರೆ. ಅದರ ಭಾಗವಾಗಿ ಕ್ರೀಡೆಯಲ್ಲಿ ಪರಸ್ಪರ ಕೈಕುಲುಕದೇ ದ್ವೇಷ ಹಬ್ಬಿಸುವವರನ್ನು ಪ್ರೋತ್ಸಾಹಿಸುವ ಕೋಮುವಾದಿ ಪರಿವಾರದ ನವಫ್ಯಾಸಿಸ್ಟ್ ರ ದುರಾಡಳಿತಕ್ಕೆ ಒಳಗಾಗುವ ದಿನಮಾನದಲ್ಲಿದ್ದೇವೆ. ಕಾರ್ಮಿಕ ವರ್ಗ ಆಳುವವರ ಬಣ್ಣದ ಮಾತುಗಳಿಗೆ ಮರುಳಾಗದೇ ಕಾರ್ಮಿಕ – ರೈತಾಪಿ ಸಖ್ಯತೆಯಲ್ಲಿ ಹೋರಾಟಗಳ ತೀವ್ರಗೊಳಿಸೋಣ ಮತ್ತು ಸಂಘಟನೆಯನ್ನು ಇನ್ನಷ್ಟು ಬಲಗೊಳಿಸಿ ಆಳುವವರ ಹಿಂದಿನ ರಾಜಕೀಯ ಬಯಲುಗೊಳಿಸೋಣ ಎಂದು ಅವರು ಕರೆ ನೀಡಿದರು. ರಾಜಕೀಯ
ಅವರು ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ 4-5 ಅಕ್ಟೋಬರ್ 2025 ಎರಡು ದಿನಗಳ ಕಾಲ ನಡೆದ ಸಿಐಟಿಯು ಉತ್ತರ ಕನ್ನಡ ಜಿಲ್ಲಾ 11 ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತಾಡುತ್ತ, “ಹಿಂದಿನ ಬಿಜೆಪಿ ಸರ್ಕಾರ ಕೊನೆಯ ಅಧಿವೇಶನದ ಕೊನೆಯ ದಿನ ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದು 8 ಗಂಟೆಯಿದ್ದ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿ, ಚಾರಿತ್ರಿಕವಾಗಿ ಪಡೆದಿದ್ದ ಕೆಲಸದ ಅವಧಿಯ ಹಕ್ಕನ್ನು ಮೊಟಕುಗೊಳಿಸಿತು. ಪ್ರಪಂಚದಾದ್ಯಂತ ಕೆಲಸದ ಅವಧಿಯನ್ನು ಕಡಿಮೆ ಮಾಡಿ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಬಾರತದಲ್ಲಿ ಈ ತಿದ್ದುಪಡಿಗಳನ್ನು ತರುವ ಮೂಲಕ ಐ.ಎಲ್.ಓ. ಸಮ್ಮೇಳನದ ನಿರ್ಣಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ರಾಜಕೀಯ
ನಮ್ಮ ಸರ್ಕಾರಗಳು ಕೆಲಸದ ಅವಧಿಯನ್ನು ಹೆಚ್ಚಿಸಿ ಓವರ್ ಟೈಮ್ ಗಂಟೆಗಳನ್ನು 75 ರಿಂದ 140 ಗಂಟೆಗಳಿಗೆ ಹೆಚ್ಚಿಸಿರುವ ಕ್ರಮದಿಂದ ನಿರುದ್ಯೋಗ ಮತ್ತಷ್ಟು ಹೆಚ್ಚಾಗಲಿದೆ. ಈ ರೀತಿ ದಿನಕ್ಕೆ 14 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸುವುದು ಎಂದರೆ, ಬ್ರಿಟಿಷ್ ವಸಾಹತುಶಾಹಿ ಯುಗಕ್ಕೆ ಕಾರ್ಮಿಕರನ್ನು ಹಿಂದಕ್ಕೆ ತಳ್ಳಿದಂತೆ ಎಂದರು. ರಾಜಕೀಯ
ಬಹಿರಂಗ ಸಭೆ ಉದ್ಘಾಟನೆಯ ಅತಿಥಿಗಳಾದ ಸಿಐಟಿಯು ರಾಜ್ಯ ಕಾರ್ಯದರ್ಶಿ ಹಾಗೂ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳೂ ಆದ ಎಚ್.ಎಸ್.ಸುನಂದಾ ಅವರು ಮಾತನಾಡಿ, ನವ ಉದಾರಿಕರಣದ ನೀತಿಗಳ ಪರಿಣಾಮವಾಗಿ ಸರಕಾರಿ ಹಾಗೂ ಖಾಸಗಿ ಉದ್ಯೋಗಗಳಲ್ಲಿ ಗುತ್ತಿಗೆ, ಹಂಗಾಮಿ, ತಾತ್ಕಾಲಿಕ, ಟ್ರೆöÊನಿ, ನಿಗಧಿತ ಅವಧಿಯ ಕಾರ್ಮಿಕ, ಮುಂತಾದ ಹಲವು ಖಾಯಂಯೇತರ ಸ್ವರೂಪದ ಕೆಲಸಗಳಲ್ಲಿನ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ.
ಬಂಡವಾಳದಾರರ ಲಾಭದ ಹೆಚ್ಚಳಕ್ಕೆ ಅಗ್ಗದ ದರದಲ್ಲಿ ಕಾರ್ಮಿಕರ ಶ್ರಮವು ದೊರೆಯುವಂತೆ ಮಾಡಿ ಕಾರ್ಮಿಕರನ್ನು ಶೋಷಣೆ ಮಾಡಲಾಗುತ್ತಿದೆ. ಮಾತ್ರವಲ್ಲ ಮಹಿಳೆಯರನ್ನು ರಾತ್ರಿಪಾಳಿಯಲ್ಲಿ ದುಡಿಸುವಿಕೆ ಹೆಚ್ಚಿಸುತ್ತಿದ್ದಾರೆ. ದೇಶವ್ಯಾಪಿ ಆತಂಕದ ವಾತಾವರಣ ನಿಲ್ಲಿಸುವ ಬದಲು ಧರ್ಮಸ್ಥಳವೇ ಮುಂತಾದೆಡೆ ಮಹಿಳೆಯರ ಕಗ್ಗೊಲೆಗಳಾದರೂ ಅವರ ರಕ್ಷಣೆಗೆ ಸಂಸ್ಕೃತಿ ಹೆಸರಿನಲ್ಲಿ ಕೆಲವರು ಮುಂದಾಗಿರುವುದು ಖಂಡನೀಯ ಎಂದರು. ರಾಜಕೀಯ
ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕವನ್ನು ವ್ಯವಸ್ಥಿತವಾಗಿ ಕಾಪಾಡಲು ದೇಶ ಮಟ್ಟದಲ್ಲಿ 70 ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಈ ಯೋಜನೆಗಳನ್ನು 63 ಕ್ಕೆ ಇಳಿಸಲಾಯಿತು. ನಂತರ 8 ಯೋಜನೆಗಳನ್ನು ವಿಸರ್ಜನೆ ಮಾಡಿರುವುದು ದುರಂತ. ಇದೆಲ್ಲದರ ವಿರುದ್ಧ ಜಾಗೃತ ಪ್ರಜ್ಞೆ ವಹಿಸಿ ಹೋರಾಟಕ್ಕೆ ಇಳಿಯುವುದೊಂದೇ ಮಾರ್ಗ ಎಂದರು. ರಾಜಕೀಯ
ಸ್ವಾಗತ ಸಮಿತಿ ಸಲಹೆಗಾರರು ಹಾಗೂ ರಂಗ ನಿರ್ದೇಶಕರಾದ ಸಾಹಿತಿ ಕಿರಣ್ ಭಟ್ ಬಂಡವಾಳಶಾಹಿ ಕುತಂತ್ರಗಳ ಕುರಿತು ವಿವರಿಸಿ ಕವಿ ಸಿದ್ದಲಿಂಗಯ್ಯನವರ ಕಾವ್ಯ ಪ್ರಸ್ತುತಪಡಿಸಿದರು. ಯಮುನಾ ಗಾಂವ್ಕರ್, ಜಿಲ್ಲೆಯಲ್ಲಿ ಕಾರ್ಮಿಕರ ರೈತಾಪಿ ಜನತೆಯ ಸ್ಥಿತಿಗತಿಗಳ ಬಗ್ಗೆ, ಪರಿಸರ ಪೂರಕ ಕೈಗಾರಿಕೆಗಳ ಸ್ಥಾಪನೆ ಬಗ್ಗೆ ವಿವರಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಕಾ. ಶ್ಯಾಮನಾಥ ನಾಯ್ಕ ಕಾರ್ಮಿಕ-ಕೃಷಿಕರ ಸಖ್ಯತೆಯ ಅಗತ್ಯತೆಯನ್ನು ವ್ಯಕ್ತಪಡಿಸಿದರು.
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಗೌಡ ಸ್ವಾಗತಿಸಿದರು. ಸ್ವಾಗತ ಸಮಿತಿಯ ಖಜಾಂಚಿ ಗೀತಾ ನಾಯ್ಕ ವಂದಿಸಿದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸಿ ಆರ್ ಶಾನಭಾಗ ಪ್ರಾಸ್ತಾವಿಕ ಮಾತುಗಳನ್ನಾಡಿ ಸಮ್ಮೇಳನದ ಉದ್ದೇಶಗಳನ್ನು ವಿವರಿಸಿದರು. ವೇದಿಕೆಯಲ್ಲಿ ನಾಗಪ್ಪ ನಾಯ್ಕ್, ಸಲೀಂ ಸೈಯದ್, ತಿಮ್ಮಪ್ಪ ಗೌಡ, ಮುತ್ತ ಪೂಜಾರಿ, ಗೀತಾ ನಾಯ್ಕ್ ಹೊನ್ನಾವರ, ಗೀತಾ ನಾಯ್ಕ್ ಭಟ್ಕಳ, ವಿದ್ಯಾ ವೈದ್ಯ ಉಪಸ್ಥಿತರಿದ್ದರು. ರಾಜಕೀಯ
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅಗಲಿದ ಸಂಗಾತಿಗಳಿಗೆ ಗಣ್ಯರಿಗೆ ಹಾಗೂ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು. ಹಿರಿಯ ಮಾರ್ಕ್ಸವಾದಿ ಚಿಂತಕ ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾ. ಸೀತಾರಾಮ ಯೆಚೂರಿ ನಗರ, ಕಾ. ರತ್ನಾಕರ ಶೆಣೈ ಸಭಾಂಗಣ, ಕಾ. ಹರೀಶ ನಾಯ್ಕ ವೇದಿಕೆ, ಕಾ. ಆರ್.ಎಂ. ಮುಲ್ಲಾ, ಕಾ. ಅಮಿನಾಬಿ, ಕಾ.ಸುಮಂಗಲಾ ನೆನಪಿನ ಬಾಗಿಲು ಎಂದು ಹೆಸರಿಟ್ಟು ಗೌರವಿಸಲಾಯಿತು. ಸಮ್ಮೇಳನದ ಆರಂಭವನ್ನು ಸಿಐಟಿಯು ಉತ್ತರಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷರಾದ ತಿಲಕ ಗೌಡ ಧ್ವಜಾರೋಹಣ ಮೂಲಕ ಮಾಡಿದರು. ಹಳದಿಪುರದ ಪ್ರೀತಿಪದ ಮಕ್ಕಳ ತಂಡದ ಹರ್ಷಿತಾ, ಶ್ವೇತಾ, ಚಂದನ್, ಭಾರತಿ ಸಂಗಡಿಗರು ಕ್ರಾಂತಿಗೀತೆ ಹಾಡಿದರು. ರಾಜಕೀಯ
ಅಧಿವೇಶನ:
ಪ್ರತಿನಿಧಿ ಅಧಿವೇಶನವನ್ನು ತಿಲಕ ಗೌಡ, ಯಮುನಾ ಗಾಂವ್ಕರ್, ಜಯಶ್ರೀ ಹಿರೇಕರ್ ಇರುವ ಅಧ್ಯಕ್ಷೀಯ ಮಂಡಳಿ ನಡೆಸಿಕೊಟ್ಟಿತು. ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸಿ ಆರ್ ಶಾನಭಾಗ, ಸಂಘಟನಾ ಕರಡು ವರದಿಯನ್ನು ಮಂಡಿಸಿದರು. ಕಾ ಹೆಚ್ ಎಸ್ ಸುನಂದಾ, ವರದಿ ಮೇಲಿನ ಚರ್ಚೆಗೆ ಮಾರ್ಗದರ್ಶನ ಮಾಡಿದರು. ಕಾರ್ಮಿಕರ ಹಕ್ಕುಗಳು, ಸಂಘಟನಾ ಬಲವರ್ಧನೆ, ರಾಜ್ಯ-ರಾಷ್ಟ್ರೀಯ ಮಟ್ಟದ ಪರಿಸ್ಥಿತಿ, ಜಾಗತಿಕ ಹೋರಾಟಗಳು ಬೆಳೆದುಬರುತ್ತಿರುವ ಬಗೆ, ಸ್ಥಳೀಯ ಸಮಸ್ಯೆಗಳು ಹಾಗೂ ಹೋರಾಟ ತಂತ್ರಗಳ ಕುರಿತು ಪ್ರಧಾನ ಕಾರ್ಯದರ್ಶಿ ಕರಡು ವರದಿಯನ್ನು ಮಂಡಿಸಿದರು.
ಜಿಲ್ಲಾ ಹಾಗೂ ತಾಲೂಕುಗಳಿಂದ, ದುಡಿಮೆಯ ಎಲ್ಲಾ ರಂಗಗಳಿಂದ ಬಂದ ಪ್ರತಿನಿಧಿಗಳು ಭಾಗವಹಿಸಿ, ಎರಡು ದಿನಗಳ ಕಾಲ ಚರ್ಚಿಸಿ ಅಗತ್ಯ ಅಂಶಗಳನ್ನು ಸೇರಿಸಿ ಅಂಗೀಕಾರ ನೀಡಿದರು.
ಎರಡನೇ ದಿನ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕರಾದ ರತ್ನದೀಪಾ, ಎಸ್.ಎಫ್.ಐ ನ ವೀರೇಶ್ ರಾಠೋಡ, ಮೇಘನಾ ಗೌಡ, ಡಿವೈಎಫ್ ಐ ನ ಡಿ ಸ್ಯಾಮ್ಸನ್ ಸಮ್ಮೇಳನಕ್ಕೆ ಶುಭಹಾರೈಸಿದರು.
ಶ್ರಮಿಕರಿಂದ ನಡೆದ ಸಾಂಸ್ಕೃತಿಕ ಅಭಿವ್ಯಕ್ತಿ : ರಾತ್ರಿ ನಡೆದ ಈ ಕಾರ್ಯಕ್ರಮಗಳಲ್ಲಿ ಸಿದ್ದಿ ಬುಡಕಟ್ಟು ಪುಗಡಿ, ಮಹಿಳಾ ಸದಸ್ಯರಿಂದ ಯಕ್ಷಗಾನ ಕುಣಿತ, ಸ್ವಾಗತ ಸಮಿತಿಯ ಸದಸ್ಯರಿಂದ ಯಕ್ಷಗಾನ ಪದ್ಯಗಳು, ಹಿರಿಯ ಕಲಾವಿದರ ಅನುಕರಣೆಯ ಹಾಡುಗಳು, ಪ್ರೀತಿಪದ ಬಾಲ ಪ್ರತಿಭೆಗಳ ನೃತ್ಯ ಪ್ರದರ್ಶನ ಗಮನಸೆಳೆದವು.
13 ನಿರ್ಣಯಗಳು: ಪ್ರತಿನಿಧಿ ಅಧಿವೇಶನವು ಸಮ್ಮೇಳನದ ತಳಹದಿಯಾಗಿದ್ದು, ಇದರಲ್ಲಿ ದುಡಿಯುವ ವರ್ಗದ ಮೇಲಿನ ದಬ್ಬಾಳಿಕೆ ಹಿಮ್ಮೆಟ್ಟಿಸುವ ಹೋರಾಟ ರೂಪಿಸಲು ನಿರ್ಧರಿಸಿ 13 ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಮುಖ್ಯವಾಗಿ ಕನಿಷ್ಟ ವೇತನ ಹೆಚ್ಚಳಕ್ಕೆ ಒತ್ತಾಯಿಸಿ, ಕೆಲಸದ ಅವಧಿ ಹೆಚ್ಚಳ ವಾಪಸ್ಸಿಗೆ ಗುತ್ತಿಗೆ ಪದ್ಧತಿ ನಿಯಂತ್ರಣಕ್ಕೆ ಒತ್ತಾಯಿಸಿ, ಹಿಂಸೆ ಮುಕ್ತ ಬದುಕನ್ನು ಖಾತ್ರಿಗೊಳಿಸಬೇಕೆಂದು ಒತ್ತಾಯಿಸಿ, ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಮಾನವೀಯ ಕ್ರೌರ್ಯ ತಡೆಗಟ್ಟಲು ಸಮಗ್ರ ತನಿಖೆಗೆ ಆಗ್ರಹಿಸಿ, ದುಡಿಯುವ ಮಹಿಳೆಯರ ಕುರಿತು ಯೋಜನಾ ಕಾರ್ಮಿಕರಾದ ಅಂಗನವಾಡಿ, ಅಕ್ಷರದಾಸೋಹ ನೌಕರರ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಸೌಲಭ್ಯಗಳ ಜಾರಿಗಾಗಿ, ಸಾರ್ವಜನಿಕ ಸಂಪತ್ತಿನ ಮಾರಾಟ, ಖಾಸಗಿ ಸಹಭಾಗಿತ್ವ ವಿರೋಧಿಸಿ, ಜಾತಿ ತಾರತಮ್ಯ-ಅಸ್ಪೃಶ್ಯತೆ ಆಚರಣೆ ತಡೆಗಟ್ಟಲು ಒತ್ತಾಯಿಸಿ ಮಹಿಳೆಯರ ಮೇಲಿನ ಎಲ್ಲಾ ರೀತಿಯ ದೌರ್ಜನ್ಯ ತಡೆಗಟ್ಟಲು, ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಿಸಿ ಎಲ್ಲ ಜನತೆಗೆ ಆಹಾರ ಭದ್ರತೆಯನ್ನು ಖಾತ್ರಿ ಮಾಡಿ, ರದ್ದಾದ ಬಿ.ಪಿ.ಎಲ್ ರೇಷನ್ ಕಾರ್ಡ್ಗಳನ್ನು ಸಕ್ರಿಯಗೊಳಿಸಬೇಕೆಂದು ಒತ್ತಾಯಿಸಿ, ಬೆಂಬಲ ಬೆಲೆ ಹಾಗೂ ಭೂಮಿ ಹಕ್ಕು ನೀಡಲು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹೆಚ್ಚಿಸಲು ಆಗ್ರಹಿಸಿ, ಪೇಪರ್ ಮಿಲ್ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಿರ್ಣಯಗಳನ್ನು ಲಿಖಿತವಾಗಿ ಮಂಡಿಸಿ, ಚರ್ಚಿಸಿ ಹೋರಾಟ ತೀವ್ರಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು.
ಹೊಸ ಸಮಿತಿ ಆಯ್ಕೆ : ಅಧ್ಯಕ್ಷರಾಗಿ ಕಾ. ತಿಲಕ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಸಯ್ಯದ್, ಖಜಾಂಚಿ ಜಯಶ್ರೀ ಹಿರೇಕರ್ ಆಯ್ಕೆ. ಸಿಐಟಿಯು ಜಿಲ್ಲಾ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಸಮಿತಿಯನ್ನು ಆಯ್ಕೆಮಾಡಿಕೊಂಡಿದೆ. ಅಧ್ಯಕ್ಷರಾಗಿ ಕಾ. ತಿಲಕ ಗೌಡ, ಉಪಾಧ್ಯಕ್ಷರಾಗಿ ಯಮುನಾ ಗಾಂವ್ಕರ್, ತಿಮ್ಮಪ್ಪ ಗೌಡ, ಡಿ ಸ್ಯಾಮ್ಸನ್, ವಿದ್ಯಾ ವೈದ್ಯ, ಕೃಷ್ಣ ಭಟ್, ಜಗದೀಶ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಸಯ್ಯದ್, ಕಾರ್ಯದರ್ಶಿಗಳಾಗಿ ಗಂಗಾ ನಾಯ್ಕ, ಮುತ್ತಾ ಪೂಜಾರಿ, ನಾಗಪ್ಪ ನಾಯ್ಕ, ಗೀತಾ ನಾಯ್ಕ, ಜ್ಯೋತಿ ನಾರ್ವೆಕರ್, ಲಕ್ಷ್ಮಿ ಸಿದ್ದಿ, ವಿಠ್ಠಲ ರೇಣಕೆ, ಗ್ಯಾನಪ್ಪ ಗೌಡ ಖಜಾಂಚಿ ಜಯಶ್ರೀ ಹಿರೇಕರ್, ಆಹ್ವಾನಿತರಾಗಿ ಸಿ.ಆರ್. ಶಾನಭಾಗ್ ಸರ್ವಾನುಮತದಿಂದ ಆಯ್ಕೆಯಾದರು.
ಸಮಾರೋಪ ಮಾತು: ಕಾಮ್ರೇಡ್ ಮೀನಾಕ್ಷಿ ಸುಂದರಂ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ, “ಜಿಲ್ಲೆಯಲ್ಲಿ ಜನತೆಯ ಮೇಲೆ ಹಲ್ಲೆ ಹೆಚ್ಚಿಸುವ ಸಾಗರಮಾಲಾ, ಪಂಪ್ಡ್ ಸ್ಟೋರೇಜ್ ವಿದ್ಯುತ್ ಬರುತ್ತಿದೆ. ಆದರೆ ಭೂಮಿ ಸಕ್ರಮ ಮಾಡಿ ಎಂದರೆ ಕೇಳುವವರಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ದಿನಬೆಳಗಾದರೆ ಗಲಭೆ ಸೃಷ್ಟಿಸುವವರು ಇದ್ದಾರೆ. ಸಿಐಟಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಬಲಿಷ್ಠ ಮತ್ತು ಕ್ರಿಯಾಶೀಲ ಕಾರ್ಮಿಕ ಸಂಘಟನೆಯಾಗಿದೆ. ಜಿಲ್ಲೆಯಲ್ಲಿ ಸಿಐಟಿಯು ಹೊರತುಪಡಿಸಿ ಕಾರ್ಮಿಕರ ಪರವಾಗಿ ನಿರಂತರ ಬೀದಿಯಲ್ಲಿ ಹೋರಾಡುವ ಯಾವುದೇ ಸಂಘಟನೆಗಳು ಇಲ್ಲ. ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕಾರ್ಮಿಕ ರೈತಾಪಿ ಚಳುವಳಿಗಳಿಗೆ ಸಿಐಟಿಯು ಸದಾ ಹೋರಾಟದ ಮುಂಚೂಣಿಯಲ್ಲಿದೆ. ಸದಸ್ಯರ ಬದ್ಧತೆ, ನಿಷ್ಠೆ ಮತ್ತು ಸಂಘಟಿತ ಪ್ರಯತ್ನದ ಮೂಲಕ ಯಾವುದೇ ತರಹದ ಸವಾಲುಗಳನ್ನು ಎದುರಿಸಿ ಹೋರಾಟವನ್ನು ಯಶಸ್ವಿಗೊಳಿಸುವ ಶಕ್ತಿ ಸಂಘಟನೆಗೆ ಇದೆ.
ಕಾರ್ಮಿಕ ವರ್ಗದ ಹಕ್ಕುಗಳಿಗಾಗಿ ಹೋರಾಡುವ ಈ ಸಂಘಟನೆಯ ಮುಖ್ಯ ಉದ್ದೇಶ ದೈಹಿಕ ಶ್ರಮದಲ್ಲಿ ತೊಡಗಿರುವ ಎಲ್ಲರನ್ನೂ ಸಂಘಟಿಸುವುದಾಗಿದೆ. ಸಂಘಟನೆ ಬಲಿಷ್ಠಗೊಳಿಸಲು ಸದಸ್ಯರು ನಡವಳಿಕೆಯಲ್ಲಿ ಶುದ್ಧರಾಗಿದ್ದು, ಪರಿಶ್ರಮ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು. ಶುದ್ಧ ನಡವಳಿಕೆ ಹಾಗೂ ಶಿಸ್ತಿನಿಂದ ಕೂಡಿದ ಕಾರ್ಯವೈಖರಿ ಸಂಘಟನೆಯ ಗೌರವವನ್ನು ಹೆಚ್ಚಿಸುತ್ತದೆ.
ಯಾವುದೇ ಚಳುವಳಿಯಲ್ಲಿಯೂ ಒಟ್ಟಾಗಿ ನಡೆಯುವ ಕ್ರಮಬದ್ಧ ಪ್ರಯತ್ನಗಳು ಮಾತ್ರ ಶಾಶ್ವತ ಬದಲಾವಣೆಗೆ ದಾರಿ ಮಾಡಿಕೊಡುತ್ತವೆ. ಸಿಐಟಿಯು ವ್ಯಕ್ತಿಗತ ಪ್ರತಿಷ್ಟೆಯದಲ್ಲ, ಇದು ಸಂಘಟನೆಗಳ ಕೇಂದ್ರ ಆಗಿದ್ದು, ಎಲ್ಲ ಚಳುವಳಿಗಳಿಗೆ ಮಾರ್ಗದರ್ಶನ ನೀಡುತ್ತದೆ. ಆದರೆ ಸಂಘಟನೆಯ ಶಕ್ತಿಯನ್ನು ಉಳಿಸಿಕೊಳ್ಳಲು ನಮ್ಮ ದೌರ್ಬಲ್ಯಗಳನ್ನು ಗುರುತಿಸಿ ಸರಿಪಡಿಸುವುದು ಅತ್ಯಂತ ಅಗತ್ಯ. ಚಳುವಳಿಯನ್ನು ಮುಂದಕ್ಕೆ ಕೊಂಡೊಯ್ಯಲು ಮಾನಸಿಕ ಸಿದ್ಧತೆ ಮತ್ತು ದೃಢ ಸಂಕಲ್ಪ ಬೇಕು. ಪ್ರತಿಯೊಬ್ಬ ಸದಸ್ಯರೂ ಹೋರಾಟದ ತತ್ತ್ವ ಮತ್ತು ಗುರಿಗಳನ್ನು ಮನಸ್ಸಿನಲ್ಲಿ ದೃಢವಾಗಿ ಅಳವಡಿಸಿಕೊಳ್ಳಬೇಕು. ತೀರ್ಮಾನಗಳನ್ನು ಕೈಗೊಳ್ಳಲು ಹಾಗೂ ಸಂಘಟನೆಯೊಳಗಿನ ಬಲವನ್ನು ಹೆಚ್ಚಿಸಲು ಸಮ್ಮೇಳನ ವೇದಿಕೆಯಾಗುತ್ತವೆ. ಒಟ್ಟಾರೆ, ಸಿಐಟಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಮಿಕರ ನಂಬಿಕೆಯ ಕೇಂದ್ರವಾಗಿದೆ. ಚಳುವಳಿಯನ್ನು ಇನ್ನಷ್ಟು ಬಲಿಷ್ಠವಾಗಿ ಮುಂದಕ್ಕೆ ಕೊಂಡೊಯ್ಯೋಣ ಎಂದು ಹೇಳಿದರು.
ನೂತರ ಪ್ರಧಾನ ಕಾರ್ಯದರ್ಶಿ ಸಲಿಂಸಯ್ಯದ್ ಮಾತಾಡಿ ಸಮ್ಮೇಳನ ಯಶಸ್ವಿಗೆ ಸಹಾಯ ಸಹಕಾರ ನೀಡಿದ ಹೊನ್ನಾವರದ ಜನತೆಯನ್ನು ನೆನಪಿಸಿ ವಂದಿಸಿದರು.
ಇದನ್ನೂ ನೋಡಿ: ಚುನಾವಣಾ ಆಯೋಗದ ‘ಸರ್’ಗೆ(sir) ಯಾಕೆ ‘ನೋ ಸರ್’ ಅಂತ ಹೇಳಬೇಕು?Janashakthi Media
