ಮಾದರಿ ಅಟೋ ಚಾಲಕ| ಪ್ರಯಾಣದ ವೇಳೆ ಪರಭಾಷಿಕರಿಗೆ ಕನ್ನಡ ಕಲಿಸುವ ಅಟೋ!

ಬೆಂಗಳೂರು : ಕನ್ನಡ ಗೊತ್ತಿಲ್ಲದ ಅನ್ಯ ಭಾಷಿಕರಿಗೆ ʼಲರ್ನ್ ಕನ್ನಡ ವಿತ್‌ ಆಟೋ ಕನ್ನಡಿಗʼ ಎಂಬ ವಿಶಿಷ್ಟ ಅಭಿಯಾನದ ಮೂಲಕ ಪರ ಭಾಷಿಗರಿಗೆ ಸಾಮಾನ್ಯ ಕನ್ನಡ ಪದಗಳನ್ನು ಕಲಿಸುವ ಅಟೋ ಚಾಲಕ ಅಜ್ಜು ಸುಲ್ತಾನ ಪ್ರಯತ್ನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಆಟೋ ಚಾಲಕನ ಈ ಸಿಂಪಲ್‌ ಐಡಿಯಾಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಆಟೋ ಚಾಲಕ ತನ್ನ ಆಟೋದಲ್ಲಿ ಕನ್ನಡ ಪೋಸ್ಟರ್‌ಅನ್ನು ಅಂಟಿಸಿದ್ದಾನೆ. ಇದು ಪ್ರಯಾಣಿಕರಿಗೆ ಆಟೋದಲ್ಲಿ ಪ್ರಯಾಣ ಮಾಡುವ ಸಮಯದಲ್ಲಿಯೇ ಕನ್ನಡ ಕಲಿಯುವ ಅವಕಾಶ ಮಾಡಿದ್ದಾರೆ.

ಇದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಪದಗಳನ್ನು ಸೇರಿಸಿದ್ದಾರೆ. ಈ ಪೋಸ್ಟರ್ ನೋಡಿ ಯಾರೂ ಬೇಕಾದರು ಕನ್ನಡ ಬರದವರು ಸುಲಭವಾಗಿ ಕನ್ನಡದಲ್ಲಿ ವ್ಯವಹರಿಸಬಹುದಾಗಿದೆ. ಈ ಪೋಸ್ಟರ್‌ನಲ್ಲಿ ಕನ್ನಡದಲ್ಲಿ ದೈನಂದಿನವಾಗಿ ಆಟೋ ಡ್ರೈವರ್ ಜೊತೆ ಗ್ರಾಹಕರು ಬಳಕೆ ಮಾಡುವ ಹಲವು ಸಾಲುಗಳನ್ನು ಹೊಂದಿದೆ. ‘Namasakara sir’ (Hello, sir) ಎನ್ನುವ ಸಾಲುಗಳು ಇಂಗ್ಲೀಷ್‌ನಲ್ಲಿದೆ.

ಇದನ್ನೂ ಓದಿಒಳ ಮೀಸಲಾತಿ ಜಾರಿಗೆ ಸಚಿವ ಸಂಪುಟ ತೀರ್ಮಾನ

‘Elli idira’ (Where are you?), “Yeshtu aaytu” (How much?) ಹಾಗೂ “UPI idya athva cash aa?” (Is it UPI or cash?) ಎನ್ನುವ ಸಾಲುಗಳನ್ನು ಅವರು ಅಂಟಿಸಿರುವ ಪೋಸ್ಟರ್ ನಲ್ಲಿ ಪೋಸ್ಟರ್‌ಗಳ ಆಚೆಗೆ, ಚಾಲಕ ಆನ್‌ಲೈನ್‌ನಲ್ಲೂ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. Instagram, YouTube ಮತ್ತು Facebook ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಕೂಡ ಕನ್ನಡ ಕ್ಲಾಸ್ ಶೇರ್ ಮಾಡಿದ್ದಾರೆ.

ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಭಾಷಾ ತಡೆಯನ್ನು ಕಡಿಮೆ ಮಾಡುವ ಉದ್ದೇಶ ನನ್ನದಾಗಿದೆ. ಈ ಪೋಸ್ಟರ್‌ ಅನ್ನು ಬೆಂಗಳೂರಿನಾದ್ಯಂತ ಅತಿ ಹೆಚ್ಚು ಆಟೋಗಳಲ್ಲಿ ಅಂಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ನಮ್ಮೆಲ್ಲಾ ಚಾಲಕರು, ಚಾಲಕ ಮಿತ್ರ ಸಂಘಟನೆಗಳು ಎಲ್ಲರೂ ಜೊತೆಯಾದರೆ ನಾನು ಈ ಪೋಸ್ಟರ್‌ ಅನ್ನು ಅಂಟಿಸಬೇಕೆಂದಿದ್ದೇನೆ. ಇದರಿಂದ ಪರಭಾಷಿಕರಿಗೆ ಕನ್ನಡ ಕಲಿಯುವುದು ಸುಲಭವಾಗುತ್ತದೆ. ಈಗಾಗಲೇ ಅನ್ಯಭಾಷಿಕರು ಹಾಗೂ ಚಾಲಕರ ನಡುವೆ ಕೆಲವು ಘಟನೆಳು ನಡೆದಿವೆ. ಆ ಕಾರಣಕ್ಕೆ ಅನ್ಯಭಾಷಿಕರಿಗೆ ನಾನು ಕನ್ನಡ ಕಲಿಸುವ ಪ್ರಯತ್ನದಲ್ಲಿದ್ದೇನೆ. ನಾವು ಒಂದು ಹೆಜ್ಜೆ ಮುಂದೆ ಇಟ್ಟರೆ, ಅವರು ಕೂಡಾ ಕನ್ನಡ ಕಲಿಯುವ ಪ್ರಯತ್ನ ಮಾಡಿಯೇ ಮಾಡುತ್ತಾರೆ ಅಜ್ಜು ಸುಲ್ತಾನ ಜನಶಕ್ತಿ ಮೀಡಿಯಾಗೆ ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *