ತಿರುವನಂತಪುರ : ರಾಜ್ಯ ಸರ್ಕಾರದ ನೀತಿಗಳಿಗೆ ಜನಬೆಂಬಲವನ್ನು ಪುನರುಚ್ಚರಿಸುತ್ತಾ, ಫೆಬ್ರವರಿ 24 ರಂದು ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯಲ್ಲಿ ಕೇರಳದ ಜನತೆ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್)ಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ತಿರುವನಂತಪುರಂ ಮುನ್ಸಿಪಲ್ ಕಾರ್ಪೊರೇಷನ್‌ನ ಶ್ರೀವರಾಹಂ ವಾರ್ಡ್ ಸೇರಿದಂತೆ 30 ಸ್ಥಾನಗಳಲ್ಲಿ ಎಲ್‌ಡಿಎಫ್ 17 ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿ ಒಂದೇ ಒಂದು ಸ್ಥಾನವನ್ನು ಪಡೆಯುವಲ್ಲಿ ವಿಫಲವಾಯಿತು. ಕೇರಳ
ಒಂದು ಬ್ಲಾಕ್ ಪಂಚಾಯತ್ ವಾರ್ಡ್, ಎರಡು ಪುರಸಭೆ ವಾರ್ಡ್ ಗಳು ಮತ್ತು 13 ಗ್ರಾಮ ಪಂಚಾಯತ್ ವಾರ್ಡ್ ಗಳಲ್ಲಿ ಎಲ್‌ಡಿಎಫ್ ಗೆಲುವು ಸಾಧಿಸಿದ್ದು, ಈ ಹಿಂದೆ ಯುಡಿಎಫ್ ಹೊಂದಿದ್ದ ನಾಲ್ಕು ಸ್ಥಾನಗಳನ್ನು ವಶಪಡಿಸಿಕೊಂಡಿದೆ. ಈ ವರ್ಷದ ಕೊನೆಯ ತಿಂಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಈ ಗಮನಾರ್ಹ ಫಲಿತಾಂಶ ಬಂದಿದೆ. ಈ ಫಲಿತಾಂಶಗಳು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಭವಿಷ್ಯದ ವಿಜಯಗಳ ಮುನ್ಸೂಚನೆಯನ್ನು ನೀಡುತ್ತಿವೆ.
ಇದನ್ನೂ ಓದಿ : ವಲಸಿಗರನ್ನು ಪಂಜರದ ಪಶುಗಳಂತೆ ಕಾಣುವ ಅಮಾನವೀಯತೆ : ಬಂಡವಾಳಶಾಹಿಯ ಸೃಷ್ಟಿ
ಯುಡಿಎಫ್ ಕೇವಲ 12 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ ಮತದಾರರ ಬೆಂಬಲದೊಂದಿಗೆ ಇಸ್ಲಾಮಿಕ್ ಸಂಘಟನೆಯಾದ ಎಸ್‌ಡಿಪಿಐ ಒಂದು ಸ್ಥಾನ ಗೆದ್ದಿದೆ. ಕಾಸರಗೋಡಿನ ಎರಡು ಪಂಚಾಯತ್ ವಾರ್ಡ್‌ಗಳಲ್ಲಿ, ಎಲ್‌ಡಿಎಫ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗಮನಿಸಬೇಕಾದ ಅಂಶವೆಂದರೆ, 2020 ರಲ್ಲಿ ನಡೆದ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಬಹುತೇಕ ಎಲ್ಲಾ ಎಲ್‌ಡಿಎಫ್ ಅಭ್ಯರ್ಥಿಗಳು ತಮ್ಮ ಮತ ಹಂಚಿಕೆಯಲ್ಲಿ ಹೆಚ್ಚಳ ಕಂಡಿದ್ದಾರೆ.
ಎಲ್‌ಡಿಎಫ್ ನಲ್ಲಿ ಸಿಪಿಐ(ಎಂ) 12 ಸ್ಥಾನಗಳನ್ನು, ಸಿಪಿಐ 2 ಸ್ಥಾನಗಳನ್ನು ಗೆದ್ದರೆ, ಕೇರಳ ಕಾಂಗ್ರೆಸ್ (ಎಂ) ಮತ್ತು ಎಲ್‌ಡಿಎಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ತಲಾ ಒಂದು ಸ್ಥಾನವನ್ನು ಪಡೆದರು. ಯುಡಿಎಫ್ ಕಡೆಯಿಂದ, ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದರೆ, ಐಯುಎಂಎಲ್ ಮತ್ತು ಕೇರಳ ಕಾಂಗ್ರೆಸ್ (ಐ) ತಲಾ ಒಂದು ಸ್ಥಾನವನ್ನು ಗೆದ್ದವು.
ತಿರುವನಂತಪುರಂ ಕಾರ್ಪೊರೇಷನ್ ನ ಶ್ರೀವರಾಹಂ ವಾರ್ಡ್‌ನಲ್ಲಿ, ಎಲ್‌ಡಿಎಫ್ 13 ಮತಗಳ ಅಲ್ಪ ಅಂತರದಿಂದ ಗೆದ್ದಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಮತಗಳ ಪಾಲು 408 ರಿಂದ 277 ಕ್ಕೆ ಗಮನಾರ್ಹವಾಗಿ ಕುಸಿಯಿತು. ತಿರುವನಂತಪುರದ ಪಂಗೋಡ್ ಗ್ರಾಮ ಪಂಚಾಯತ್ ನ ಪುಲಿಪ್ಪರ ವಾರ್ಡ್‌ನಲ್ಲಿ, ಮುಸ್ಲಿಂ ಮೂಲಭೂತವಾದಿ ಪಕ್ಷವಾದ ಎಸ್‌ಡಿಪಿಐ ಪರವಾಗಿ ಕಾಂಗ್ರೆಸ್ ಮತಗಳು ಅಡ್ಡ ಮತಗಳಾಗಿ ಚಲಾಯಿಸಲ್ಪಟ್ಟವು. ಕಾಂಗ್ರೆಸ್ ನ ಮತಗಳ ಪಾಲು 455 ರಿಂದ 148 ಕ್ಕೆ ಕುಸಿದರೆ, ಎಸ್‌ಡಿಪಿಟಿಯ ಮತಗಳ ಪಾಲು 363 ರಿಂದ 674 ಕ್ಕೆ ಏರಿತು.
ಇದನ್ನೂ ನೋಡಿ : ಜನಪರ ನೀತಿ, ಕಾರ್ಮಿಕ ವರ್ಗದ ಬೇಡಿಕೆಗಳ ಜಾರಿಗಾಗಿ ಸಿಐಟಿಯುನಿಂದ ಅಹೋರಾತ್ರಿ ಧರಣಿ Janashakthi Media